ಸಲ್ಮಾನ್ ಖಾನ್‌ನನ್ನು ತಡೆದ CISF ಅಧಿಕಾರಿ ಯುನಿಫಾರ್ಮ್‌ನ ಪವರ್‌ಗೆ ನೆಟ್ಟಿಗರ ಮೆಚ್ಚುಗೆ

ಸಲ್ಮಾನ್ ಖಾನ್ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ ? ನಮ್ಮ ಹಿರಿಯರಿಂದ ಹಿಡಿದು ಈಗಿನ ಯೂತ್, ಪುಟ್ಟ ಮಕ್ಕಳಿಗೂ ಸಲ್ಮಾನ್ ಖಾನ್ ಅಂದ್ರೆ ಅಚ್ಚುಮೆಚ್ಚು. ಸೆಲೆಬ್ರಿಟಿಗಳು ಮುಂದೆ ಬಂದಾಗ ಎಕ್ಸೈಟ್ ಆಗೋದು ಸಹಜ. ಆದರೆ ಇಲ್ಲೊಬ್ಬರು ಸಿಐಎಸ್‌ಎಫ್ ಅಧಿಕಾರಿ ಸಲ್ಮಾನ್ ಖಾನ್‌ನನ್ನು ಕಂಡಾಗ ಹೇಗೆ ರಿಯಾಕ್ಟ್ ಮಾಡಿದರು ನೋಡಿ.

ಸಿಐಎಸ್‌ಎಫ್ ಅಧಿಕಾರಿಯೊಬ್ಬರು ಸಲ್ಮಾನ್ ಅವರನ್ನು ವಿಮಾನ ನಿಲ್ದಾಣಕ್ಕೆ ಪ್ರವೇಶಿಸುತ್ತಿದ್ದಂತೆ ತಡೆದು ನಿಲ್ಲಿಸಿದ್ದಾರೆ. ನೆಟಿಜನ್‌ಗಳು ಅಧಿಕಾರಿಯ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಸಲ್ಮಾನ್ ಖಾನ್ ಅವರು ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ತಮ್ಮ ಮುಂಬರುವ ಚಿತ್ರ ಟೈಗರ್ 3 ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹಾರುವವರಿದ್ದರು.

ನಟಿಯಾದ್ರೇನಂತೆ ? ಐಡಿ ಖಚಿತಪಡಿಸಲು ಮಾಸ್ಕ್ ತೆಗೆಸಿದ ಭದ್ರತಾ ಸಿಬ್ಬಂದಿ..!

ಸಲ್ಮಾನ್ ವಿಮಾನ ನಿಲ್ದಾಣಕ್ಕೆ ಆಗಮಿಸುವುದನ್ನು ಕಾಣಬಹುದು. ಸಲ್ಮಾನ್ ವಿಮಾನ ನಿಲ್ದಾಣದ ಆವರಣವನ್ನು ಪ್ರವೇಶಿಸುತ್ತಿದ್ದಂತೆ, ಅಧಿಕಾರಿಯೊಬ್ಬರು ಅವರನ್ನು ತಡೆದು ಟರ್ಮಿನಲ್ ಪ್ರವೇಶಿಸುವ ಮುನ್ನ ಗೇಟ್ ನಲ್ಲಿ ತಮ್ಮ ದಾಖಲೆಗಳನ್ನು ಪರೀಕ್ಷಿಸುವಂತೆ ಕೋರಿದ್ದಾರೆ.

View post on Instagram

ವಿಮಾನ ನಿಲ್ದಾಣದಲ್ಲಿದ್ದ ಛಾಯಾಗ್ರಾಹಕರು ಸಲ್ಮಾನ್ ಅವರ ಹೆಸರನ್ನು ಕೂಗಿದ್ದಾರೆ. ಛಾಯಾಚಿತ್ರಕ್ಕೆ ಪೋಸ್ ನೀಡುವಂತೆ ವಿನಂತಿಸಿದ್ದಾರೆ. ಅಧಿಕಾರಿ ಸಲ್ಮಾನ್ ಅವರನ್ನು ನಿಲ್ಲಿಸಿದಾಗ, ಅವರು ಛಾಯಾಗ್ರಾಹಕರನ್ನು ಸ್ವಲ್ಪ ಹಿಂದೆ ಸರಿಯುವಂತೆ ಕೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರೊಬ್ಬರು ಕಾಮೆಂಟ್ ಮಾಡಿ, 'ಸಿಐಎಸ್‌ಎಫ್ ವ್ಯಕ್ತಿ ಅವರನ್ನು ಪ್ರವೇಶಿಸದಂತೆ ತಡೆದ ರೀತಿ ಇಷ್ಟವಾಯಿತು' ಎಂದಿದ್ದಾರೆ. ಇನ್ನೊಬ್ಬರು 'ಪವರ್ ಆಫ್ ಯೂನಿಫಾರ್ಮ್ ಸಿಐಎಸ್‌ಎಫ್' ಎಂದು ಬರೆದಿದ್ದಾರೆ.

ಟೈಗರ್ 3 ಚಿತ್ರದ ಚಿತ್ರೀಕರಣ ಆಸ್ಟ್ರಿಯಾ ಮತ್ತು ಟರ್ಕಿಯಲ್ಲಿ ನಡೆಯಲಿದೆ. ಸಲ್ಮಾನ್, ಕತ್ರಿನಾ, ನಿರ್ದೇಶಕ ಮನೀಶ್ ಶರ್ಮಾ, ಇಡೀ ತಾರಾಗಣ ಮತ್ತು ಸಿಬ್ಬಂದಿ ವಿದೇಶಕ್ಕೆ ಪ್ರಯಾಣಿಸುತ್ತಿದ್ದಾರೆ. ಟೀಮ್ ಟೈಗರ್ ಆಗಸ್ಟ್ 18 ರಂದು ಟೇಕಾಫ್ ಆಗಿದೆ. ಈ ವೇಳಾಪಟ್ಟಿಗಾಗಿ ಮನೀಶ್ ನೇತೃತ್ವದ ನಿರ್ದೇಶನ ತಂಡವು ತಿಂಗಳುಗಳ ಕಾಲ ಸಿದ್ಧತೆ ನಡೆಸಿದೆ. ಆದಿತ್ಯ ಚೋಪ್ರಾ ಶೂಟ್ ಸುಗಮವಾಗಿ ನಡೆಯಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

View post on Instagram

ಟೈಗರ್ 3 ಹೊರತಾಗಿ ಸಲ್ಮಾನ್ ಅವರ ಆಂಟಿಮ್: 2 ದಿ ಫೈನಲ್ ಟ್ರುತ್ ಬಿಡುಗಡೆಗೆಯಾಗಲಿದೆ. ಮಹೇಶ್ ಮಂಜ್ರೇಕರ್ ನಿರ್ದೇಶನದ ಈ ಚಿತ್ರದಲ್ಲಿ ಆಯುಷ್ ಶರ್ಮಾ ಕೂಡ ನಟಿಸಿದ್ದಾರೆ. ಸಲ್ಮಾನ್ ಕೊನೆಯದಾಗಿ ರಾಧೆಯಲ್ಲಿ ಕಾಣಿಸಿಕೊಂಡಿದ್ದು ಅದು ಥಿಯೇಟರ್‌ಗಳಲ್ಲಿ ಮತ್ತು ಪೇ-ಪರ್-ವ್ಯೂ ಪ್ಲಾಟ್‌ಫಾರ್ಮ್ ZEEPlex ನಲ್ಲಿ ಬಿಡುಗಡೆಯಾಗಿತ್ತು.