ಪಣಜಿ(ಜ.28): ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮತ್ತೆ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಭಿಮಾನಿಯೊಬ್ಬನ ಫೋನ್ ಕಸಿದು ಸಲ್ಲುಭಾಯ್ ಸುದ್ದಿಯಾಗಿದ್ದಾರೆ.

ಗೋವಾ ರಾಜಧಾನಿ ಪಣಜಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅನುಮತಿ ಇಲ್ಲದೇ ಸೆಲ್ಫಿ ಕ್ಲಿಕ್ಕಿಸಲು ಮುಂದಾದ ಅಭಿಮಾನಿಯೋರ್ವನ ಫೋನ್’ನ್ನು ಸಲ್ಮಾನ್ ಕಿತ್ತುಕೊಂಡಿದ್ದಾರೆ.

ಸಲ್ಮಾನ್‌‌ಗೆ ಸಾಲ ಭೀತಿ: ಕಾಕಾ ಕೊಟ್ಟ ಸಾಲವಿನ್ನೂ ತೀರಿಸಿಲ್ಲ ಬ್ಯಾಡ್ ಬಾಯ್!

ವಿಮಾನ ನಿಲ್ದಾಣದಿಂದ ಸಲ್ಮಾನ್ ಹೊರ ಬರುತ್ತಿದ್ದಂತೇ, ಅಭಿಮಾನಿಯೋರ್ವ ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾನೆ. ಇದರಿಂದ ಕೆರಳಿದ ಸಲ್ಮಾನ್ ಕೂಡಲೇ ಆತನ ಮೊಬೈಲ್ ಕಸಿದುಕೊಂಡು ಮುನ್ನಡೆದಿದ್ದಾರೆ. ಈ ವೇಳೆ ಸಲ್ಮಾನ್ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ತಡೆದು ಸಲ್ಲುಭಾಯ್‌ಗೆ ದಾರಿ ಮಾಡಿಕೊಟ್ಟಿದ್ದಾರೆ.

ಕಿಚ್ಚನಿಗೆ ಸಲ್ಮಾನ್ ಅಮೂಲ್ಯ ಗಿಫ್ಟ್... ಕಾರಣ ಏನಂತೆ!

ಸಲ್ಮಾನ್ ಖಾನ್ ಅಭಿಮಾನಿ ಮೊಬೈಲ್ ಕಸಿದುಕೊಂಡು ಮುನ್ನಡೆಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.