ಬಾಲಿವುಡ್‌ ಬಣ್ಣ-ಬಣ್ಣದ ಲೋಕ. ಸಿನಿಮಾದಲ್ಲಿ ಗೆದ್ದವರು ಕೋಟಿ ಕೋಟಿಯಲ್ಲಿಯೇ ಸಂಭಾವನೆ ಪಡೆಯುತ್ತಾರೆ. ಸೋತವರು ಸುಣ್ಣವಾಗುತ್ತಾರೆ. ಕೆಲವು ನಟ-ನಟಿಯರು ರಿಯಾಲಿಟಿ ಶೋಗಳ ಮೂಲಕ ವೀಕ್ಷಕರಿಗೆ ಹತ್ತಿರವಾಗಲು ಯತ್ನಿಸುತ್ತಾರೆ. ಒಟ್ಟಿನಲ್ಲಿ ಮಣೆ ಹಾಕಿದರೆ ಮಣೆ, ಇಲ್ಲವಾದರೆ ಒದ್ದು ಹೊಡೆದೋಡಿಸುತ್ತೆ ಈ ಬಾಲಿವುಡ್ ಎಂಬ ಮಾಯಾ ಲೋಕ. 

ಕಿಚ್ಚನಿಗೆ ಸಲ್ಮಾನ್ ಅಮೂಲ್ಯ ಗಿಫ್ಟ್... ಕಾರಣ ಏನಂತೆ!

ಕಾಲ್‌ ಶೀಟ್‌ ಫ್ರೀ ಇಲ್ಲದಷ್ಟು ಬ್ಯುಸಿಯಾಗಿರುವ ಸಲ್ಮಾನ್‌ ಖಾನ್ ಚಿತ್ರಗಳಲ್ಲಿ ಮಾತ್ರವಲ್ಲದೇ 'ಬಿಗ್ ಬಾಸ್'ನಂಥ ರಿಯಾಲಿಟಿ ಶೋಗಳಲ್ಲಿ ನಿರೂಪಕನಾಗಿಯೂ ಮಿಂಚುತ್ತಿದ್ದಾರೆ. ಒಂದು ಚಿತ್ರಕ್ಕೆ ಸುಮಾರು 50-60 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ. 3-4 ತಿಂಗಳು ಕಾಲ ಕಿರುತೆರೆ ನಿರೂಪಕನಾಗಲು ಸುಮಾರು 200 ಕೋಟಿ ರೂ. ಪಡೆಯುತ್ತಾರೆ. ಏನಿಲ್ಲವೆಂದರೂ ವರ್ಷಕ್ಕೆ 300 ಕೋಟಿಗಿಂತಲೂ ಹೆಚ್ಚು ಸಂಪಾದಿಸುವ ಸಲ್ಮಾನ್‌ ಖಾನ್ 1.25 ರೂ. ಸಾಲ ಮಾಡಿದ್ರಂತೆ!

ಸಿಲ್ಲಿ. Fake News ಇದು ಎಂದು ಕೊಳ್ಳಬೇಡಿ. ಮುಂದೆ ಓದಿ...

ಸಲ್ಮಾನ್‌ ಖಾನ್‌ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ದಿನಾಲೂ ವ್ಯಾಯಾಮ ಮಾಡುತ್ತಾರೆ. ಬಿಡುವಿನ ಸಮಯದಲ್ಲಿ ಸೈಕ್ಲಿಂಗ್ ಸಹ ಮಾಡುತ್ತಾರೆ. ಅಂಥದ್ದೇ ಒಂದಿನ ಬರ್ಮುಡಾ ಧರಿಸಿ ಸೈಕ್ಲಿಂಗ್‌ಗೆ ಹೊರಟಿದ್ದರಂತೆ. ನಡುರಸ್ತೆಯಲ್ಲೇ ಸೈಕಲ್‌ ಪಂಕ್ಚರ್‌ ಆಗಿದೆ. ಹತ್ತಿರವಿದ್ದ ಕಾಕಾ ಅಂಗಡಿಗೆ ಹೋಗಿ ಪಂಕ್ಚರ್ ಹಾಕಿಸಿಕೊಂಡಿದ್ದಾರೆ. ದುಡ್ಡು ಕೊಡ್ಲಿಕ್ಕೆ ಹೋಗ್ತಾರೆ, ಜೇಬಲ್ಲಿ ಪರ್ಸೇ ಇಲ್ಲ. ಸರಿ, ಮತ್ತೆ ಕೊಡುವೆ ಎಂದು ಮರಳಿದ್ದಾರೆ. ತಕ್ಷಣವೇ ಕಾಕಾ 'ನೀನು ಚಿಕ್ಕವನಿದ್ದಾಗಲೂ ಹೀಗೆ ಮಾಡುತ್ತಿದ್ದೆ. ರಿಪೇರಿ ಮಾಡಿಸಿಕೊಂಡು 1.2 5ರೂ. ಕೊಡುತ್ತೀನಿ ಎಂದು ಹೇಳಿ ಮಾಯವಾಗುತ್ತಿದ್ದೆ..' ಎಂದು ಹೇಳಿದರಂತೆ. ಕಾಕಾನ ಮಾತು ಕೇಳಿ ಸಲ್ಮಾನ್‌ ಖಾನ್‌ಗೆ ಮುಜುಗರವಾಗಿದೆ. ಕೆಲವು ಸಮಯದ ನಂತರ ಸಲ್ಮಾನ್‌ ಹಣ ಹಿಂದಿರುಗಿಸಲು ಹೋದಾಗ, ಕಾಕಾನೇ ಬೇಡವೆಂದರಂತೆ! 

ಚಿತ್ರ ಚಿಮರ್ಶೆ: ದಬಾಂಗ್‌- 3

ಈ ಘಟನೆಯನ್ನು ಸಲ್ಮಾನ್‌ ಖಾನ್‌ ಉಮಂಗ್‌ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಶೇರ್ ಮಾಡಿಕೊಂಡಿದ್ದಾರೆ.