ಪ್ರೀತಿಯಲ್ಲಿ ನಾನು ಅನ್‌ಲಕ್ಕಿ, ಈಗ ಕೇವಲ ಭಾಯ್ ಅಷ್ಟೆ; ಸಲ್ಮಾನ್ ಖಾನ್
ಪ್ರೀತಿಯಲ್ಲಿ ನಾನು ಅನ್‌ಲಕ್ಕಿ, ಈಗ ಕೇವಲ ಭಾಯ್ ಅಷ್ಟೆ ಎಂದು ನಟ ಸಲ್ಮಾನ್ ಖಾನ್ ಹೇಳಿದ್ದಾರೆ.
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದ್ಯ ಕಿಸಿ ಕಾ ಭಾಯ್ ಕಿಸಿ ಜಾನ್ ಸಿನಿಮಾದ ಸಕ್ಸಸ್‌ನ ಖುಷಿಯಲ್ಲಿದ್ದಾರೆ. ಇದೇ ಸಂತಸದಲ್ಲಿ ಸಲ್ಮಾನ್ ಖಾನ್ ಪ್ರಸಿದ್ಧ ಆಪ್ ಕಿ ಅದಾಲತ್ ಶೋನಲ್ಲಿ ಭಾಗಿಯಾಗಿದ್ದರು. ರಜತ್ ಶರ್ಮಾ ನಡೆಸಿಕೊಡುವ ಈ ಶೋ ಸಿಕ್ಕಾಪಟ್ಟೆ ಖ್ಯಾತಿಗಳಿಸಿದೆ. ಸಲ್ಮಾನ್ ಖಾನ್ ಕೂಡ ಶೋನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸಲ್ಮಾನ್ ಖಾನ್ ಎಪಿಸೋಡ್‌ನ ಪ್ರೋಮೋ ರಿಲೀಸ್ ಆಗಿದೆ. ಸಲ್ಮಾನ್ ಖಾನ್ ಮೊದಲ ಬಾರಿಗೆ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ತಾನು ಪ್ರೀತಿಯಲ್ಲಿ ಅನ್ ಲಕ್ಕಿ ಎಂದಿರುವ ಸಲ್ಮಾನ್ ಖಾನ್ ತನ್ನನ್ನು ಎಲ್ಲರೂ ಭಾಯ್ ಎಂದೇ ಕರೆಯುತ್ತಾರೆ ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಪ್ರೋಮೋ ಸದ್ಯ ವೈರಲ್ ಆಗಿದೆ.
ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ರಜತ್ ಶರ್ಮಾ, ಸಲ್ಮಾನ್ ಖಾನ್ ಅವರಿಗೆ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದರು. ಆಗ ಸಲ್ಮಾನ್ ಖಾನ್ 'ನಾನು ಪ್ರೀತಿಯಲ್ಲಿ ಅನ್ ಲಕ್ಕಿ' ಎಂದು ಹೇಳಿದರು. ಸಲ್ಮಾನ್ ಖಾನ್ ಸದ್ಯ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ, ರೊಮ್ಯಾಂಟಿಕ್ ಪಾರ್ಟನರ್ ಯಾರು ಎನ್ನುವ ಪ್ರಶ್ನೆ ಎದುರಾಗಿದೆ. 'ಸದ್ಯ ನಿಮ್ಮ ಜಾನ್ ಯಾರು? ನೀವು ಯಾರ ಜೊತೆ ಕಮಿಟ್ ಆಗಿದ್ದೀರಿ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್, 'ಈಗ ನಾನು ಕೇವಲ ಭಾಯಿ ಅಷ್ಟೇ ಸರ್' ಎಂದು ಹೇಳಿದರು. ಸಲ್ಮಾನ್ ಖಾನ್ ಅಲ್ಲಿದ್ದ ಪ್ರೇಕ್ಷಕರು ಜೋರಾಗಿ ನಕ್ಕಿದರು. ಬಳಿಕ ಮತ್ತೆ ಮಾತು ಮುಂದುವರೆಸಿದ ಸಲ್ಮಾನ್ ಖಾನ್, 'ನನ್ನನ್ನು ಜಾನ್ ಎಂದು ಕರೆಯಲಿ ಅಂತ ನಾನು ಬಯಸಿದವಳು ಕೂಡ ನನ್ನನ್ನು ಭಾಯ್ ಎಂದು ಕರೆಯುತ್ತಾಳೆ. ನಾನೇನು ಮಾಡಲಿ?' ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಸಲ್ಮಾನ್ ಖಾನ್ ಅವರ ಸಂಪೂರ್ಣ ಎಪಿಸೋಡ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇನ್ನೂ ಏನೆಲ್ಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಭಾಯ್ ಕಿಸಿ ಜಾನ್ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಲೆಕ್ಷನ್ ಮಾಡಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್‌ಗೆ ಜೋಡಿಯಾಗಿ ಪೂಜಾ ಹೆಗ್ಡೆ ಕೊಣಿಸಿಕಂಡಿದ್ದರು. ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೂಡ ವೈರಲ್ ಆಗಿತ್ತು.
ಐಶ್ವರ್ಯಾನ ಕಿತ್ತಾಕಿ ಕತ್ರಿನಾನ ಹಾಕೊಳ್ಳಿ; ನಿರ್ದೇಶಕ ಬನ್ಸಾಲಿಗೆ ಸಲ್ಮಾನ್ ಖಾನ್ ಹೇಳಿದ್ದ ಮಾತು ಈಗ ವೈರಲ್
ಇನ್ನು ದಗ್ಗುಬಾಟಿ ವೆಂಕಟೇಶ್, ಶೆಹನಾಜ್ ಗಿಲ್, ಪಾಲಕ್ ತಿವಾರಿ, ಜಸ್ಸಿ ಗಿಲ್, ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಈಗಾಗಲೇ 90 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಅಂದಹಾಗೆ ಈ ಸಿನಿಮಾ ತಮಿಳಿನ ಸೂಪರ್ ಹಿಟ್ ಈ ಚಿತ್ರವು ತಮಿಳಿನ ವೀರಂ ಚಿತ್ರದ ಹಿಂದಿ ರೀಮೇಕ್ ಆಗಿದೆ. ಏಪ್ರಿಲ್ 21 ರಂದು ಅದ್ದೂರಿಯಾಗಿ ಸಿನಿಮಾ ಬಿಡುಗಡೆಯಾಗಿದೆ.
ಬಳಿಗೆ ಬಂದ ಅಭಿಮಾನಿಯನ್ನು ಸಲ್ಮಾನ್ ಖಾನ್ ಹೀಗ್ ಮಾಡೋದಾ? ಭಾರಿ ಟ್ರೋಲ್ ಆಗ್ತಿದೆ ವಿಡಿಯೋ!
ಸಲ್ಮಾನ್ ಖಾನ್ ಸದ್ಯ ಟೈಗರ್ -3 ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ಜೊತೆ ಕತ್ರಿನಾ ಕೈಫ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮನೀಶ್ ಶರ್ಮಾ ಆಕ್ಷನ್ ಕಟ್ ಹೇಳಿದ್ದಾರೆ. ನವೆಂಬರ್ 10 ಸಿನಿಮಾ ರಿಲೀಸ್ ಆಗುತ್ತಿದೆ. ಸಲ್ಮಾನ್ ಖಾನ್ ಹೊಸ ಸಿನಿಮಾ ಯಾವುದು? ಯಾರ ಜೊತೆ ಸಿನಿಮಾ ಮಾಡುತ್ತಾರೆ ಎಂದು ಕಾದುನೋಡಬೇಕಿದೆ.