Asianet Suvarna News Asianet Suvarna News

GodFather ಹಾಲಿವುಡ್‌ ಅಲ್ಲ ಸೌತ್‌ ಸಿನಿಮಾ ಎಂಟ್ರಿ ಆಸೆ, 4000 ಕೋಟಿ ಬಜೆಟ್ ಆಗುತ್ತೆ: ಸಲ್ಮಾನ್‌ ಖಾನ್‌

ಗಾಡ್‌ಫಾದರ್ ಹಿಂದಿ ಟ್ರೈಲರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಚಿರಜೀವಿಗೆ ಸಾಥ್ ಕೊಟ್ಟ ಸಲ್ಲು

Salman khan in Chiranjeevi Godfather film share love for south films vcs
Author
First Published Oct 3, 2022, 10:52 AM IST

ಮುಂಬೈ: ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಚಿತ್ರಗಳು ದೇಶವ್ಯಾಪಿ ಸೂಪರ್‌ಹಿಟ್‌ ಆಗುತ್ತಿರುವ ನಡುವೆಯೇ, ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ದಕ್ಷಿಣ ಚಿತ್ರರಂಗ ಪ್ರವೇಶದ ಕನಸು ಬಿಚ್ಚಿಟ್ಟಿದ್ದಾರೆ. ಚಿರಂಜೀವಿ ಅಭಿನಯದ ‘ಗಾಡ್‌ ಫಾದರ್‌’ ಚಿತ್ರದಲ್ಲಿ ಸಲ್ಮಾನ್‌ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಕುರಿತ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ದಕ್ಷಿಣ ಸಿನಿಮಾ ರಂಗದ ಬಗ್ಗೆ ಸಲ್ಲುಗಿರುವ ಪ್ರೀತಿ ತಿಳಿದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಲ್ಮಾನ್‌,‘ ನಟ-ನಟಿಯರು ಹಾಲಿವುಡ್‌ಗೆ ಹೋಗಲು ಹಾತೊರೆಯುತ್ತಾರೆ. ಆದರೆ ನಾನು ದಕ್ಷಣ ರಂಗದ ಚಿತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ. ಆಗ ನೀವೇ ಯೋಚನೆ ಮಾಡಿ ನಮ್ಮ ಸಿನಿಮಾ ನೋಡಲು ಎಷ್ಟು ಜನರಿರುತ್ತಾರೆ. ಜೊತೆಗೆ, ದಕ್ಷಿಣದ ಚಿತ್ರಗಳು ನಮ್ಮಲ್ಲಿ ಸೂಪರ್‌ ಹಿಟ್‌ ಆಗುತ್ತಿವೆ. ಈಗ ಚಿರಂಜೀವಿ ಜೊತೆ ಸಿನಿಮಾ ಮಾಡಿದ್ದರೆ ಅವರ ಅಭಿಮಾನಿಗಳು ಕೂಡ ನನ್ನ ಸಿನಿಮಾ ನೋಡುತ್ತಾರೆ.  ಆದರೆ ನಿಮ್ಮಲ್ಲಿ ಬಾಲಿವುಡ್‌ ಚಿತ್ರ ಒಪ್ಪಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಬಾಲಿವುಡ್‌ ಹಾಗೂ ದಕ್ಷಿಣ ಚಿತ್ರರಂಗಗಳ ನಡುವೆ ಪ್ರತಿಭೆಗಳ ಸಮಾಗಮವಾಗಬೇಕು ಆಗ ನಾವು 300-400 ಕೋಟಿ ಬದಲು 3000-4000 ಕೋಟಿ ಆದಾಯ ಸಂಗ್ರಹಿಸಬಹುದು. ಇದರಿಂದ ಪ್ರತಿಯೊಬ್ಬರೂ ಬೆಳೆಯುತ್ತಾರೆ' ಎಂದಿದ್ದಾರೆ.

Salman khan in Chiranjeevi Godfather film share love for south films vcs

ಮೋಹನ್ ರಾಜ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ರಾಮ್ ಚರಣ್ ಬಂಡವಾಳ ಹಾಕಿದ್ದಾರೆ. ಗಾಡ್‌ಫಾದರ್ ಸಿನಿಮಾದ ಮತ್ತೊಂದು ವಿಶೇಷತೆ ಏನೆಂದರೆ ಚಿರು ಜೊತೆ ನಯನತಾರಾ ಮತ್ತು ಸತ್ಯಾದೇವ್ ಕಾಂಚರಣ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಚಿರಂಜೀವಿ ಸಹೋದರನಾಗಿ ಸಲ್ಮಾನ್ ಖಾನ್ ಅಭಿನಯಿಸಿದ್ದಾರೆ. ವಿಜಯ ದಶಮಿ ಹಬ್ಬದ ಪ್ರಯುಕ್ತ ಅಕ್ಟೋಬರ್ 5ರಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ದೊಡ್ಡ ಮೊತ್ತಕ್ಕೆ ಒಟಿಟಿಗೆ ಸೇಲ್ ಆದ ಚಿರಂಜೀವಿ 'ಗಾಡ್ ಫಾದರ್'; ಇದಕ್ಕೆ ಕಾರಣ ಬಾಲಿವುಡ್‌ ಈ ಸ್ಟಾರ್ ನಟ

ಸಲ್ಲು ಸಂಪರ್ಕಿಸಿದ ಚಿರು:

ಗಾಡ್‌ಫಾದರ್ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ರನ್ನು ಸಣ್ಣ ಪಾತ್ರ ಆಗಿರುವ ಕಾರಣ ಸ್ವತಃ ಚಿರಂಜೀವಿನೇ ಕರೆ ಮಾಡಿ ನಟಿಸುವಂತೆ ಕೇಳಿಕೊಂಡರಂತೆ. 'ನಮ್ಮ ಕುಟುಂಬಕ್ಕೆ ಸಲ್ಮಾನ್ ಖಾನ್ ತುಂಬಾನೇ ಕ್ಲೋಸ್ ನನ್ನ ಬೆಸ್ಟ್‌ ಫ್ರೆಂಡ್‌ ಅವರು. ನಾವು ಅವರಿಗೆ ಎಷ್ಟು ಗೌರವ ನೀಡುತ್ತೇವೆ ಅಷ್ಟೇ ಗೌರವ ಅವರು ನಮಗೆ ಕೊಡುತ್ತಾರೆ' ಎಂದು ಚಿರ ಹೇಳಿದ್ದರಂತೆ. ಒಂದು ದಿನ ಸಲ್ಮಾನ್ ಖಾನ್‌ಗೆ ಚಿರಂಜೀವಿ ಮೆಸೇಜ್ ಮಾಡಿದ್ದಾಗ 'ಹೇಳಿ ಚಿರು ಗಾರು ನಿಮಗೆ ನನ್ನಿಂದ ಏನು ಸಹಾಯ ಅಗಬೇಕು?' ಎಂದು ಸಲ್ಮಾನ್ ರಿಪ್ಲೈ ಕೊಟ್ಟಿದ್ದಾರೆ. 'ನಮ್ಮ ಸಿನಿಮಾದಲ್ಲಿ ಸಣ್ಣ ಪಾತ್ರವಿದೆ ಆದರೆ ಅದಕ್ಕೆ ದೊಡ್ಡ ಪ್ರಮುಖ್ಯತೆ ನೀಡಲಾಗಿದೆ ನೀವು ಒಮ್ಮೆ ಲೂಸಿಫರ್ ಸಿನಿಮಾ ನೋಡಿ ಆನಂತರ ಪಾತ್ರ ಒಪ್ಪಿಕೊಳ್ಳಬಹುದು' ಎಂದು ಚಿರು ಹೇಳಿದ್ದಾರೆ. 'ಅಯ್ಯೋ ಚಿರು ಗಾರು ಬೇಡ ಬೇಡ ಈ ಸಿನಿಮಾ ನಾನು ಮಾಡುತ್ತಿರುವ. ನಿಮ್ಮ ಟೀಂನಿಂದ ಒಬ್ಬರನ್ನು ಕಳುಹಿಸಿಕೊಡಿ ಅವರ ಜೊತೆ ಡೇಟ್‌ ಮತ್ತು ಇನ್ನಿತ್ತರ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೀನಿ' ಎಂದು ಉತ್ತರ ಕೊಡುವ ಮೂಲಕ ಕೇವಲ 2-3 ನಿಮಿಷಗಳಲ್ಲಿ ಸಿನಿಮಾ ಒಪ್ಪಿಕೊಂಡಿದ್ದಾರೆ.

ಗಾಡ್‌ಫಾದರ್ ನಿರ್ಮಾಪಕ ರಾಮ್‌ ಚರಣ್ ಸಲ್ಮಾನ್ ಖಾನ್‌ರನ್ನು ಭೇಟಿ ಮಾಡಿದ್ದಾರೆ. 'ಚರಣ್ ನೀನು ನನ್ನ ಸಹೋದರ. ಈ ಸಿನಿಮಾ ನಾನು ಮಾಡುವೆ. ಲೂಸಿಫರ್ ನೋಡುವ ಅಗತ್ಯವಿಲ್ಲ. ನನ್ನ ಪಾತ್ರದ ಬಗ್ಗೆ ತಿಳಿಸಿದರೆ ಸಾಕು' ಎಂದಿದ್ದಾರೆ ಸಲ್ಲು.

ಸಲ್ಲು ಸಂಭಾವನೆ ಎಷ್ಟು?

'ನಮ್ಮ ನಿರ್ಮಾಪಕರು ಸಲ್ಮಾನ್ ಖಾನ್‌ಗೆ ಸಂಭಾವನೆ ನೀಡಲು ಮುಂದಾದಗ ಕೋಪ ಮಾಡಿಕೊಂಡಿದ್ದಾರೆ. ಹಣ ಎಷ್ಟಿತ್ತು ಏನು ಎಂಬ ಮಾಹಿತಿ ಇಲ್ಲದೆ ಸಿಟ್ಟು ಮಾಡಿಕೊಂಡು ರಾಮ್ ಚರಣ್ ಮತ್ತು ಚಿರಂಜೀವಿ ಮೇಲಿರುವ ನನ್ನ ಪ್ರೀತಿಯನ್ನು ನೀವು ಹೇಗೆ ಹಣದಿಂದ ಖರೀದಿ ಮಾಡುತ್ತೀರಿ? ನನಗೆ ಏನೂ ಬೇಡ ಎಂದು ಹೇಳಿದ್ದಾರೆ. ಇದು ಅವರ ನಿಜವಾದ ಗುಣ. ಹೀಗಾಗಿ ಅವರ ಮೇಲೆ ನಮಗೆ ವಿಶೇಷವಾದ ಪ್ರೀತಿ ಇದೆ' ಎಂದು ಚಿರಂಜೀವಿ ಹೇಳಿದ್ದಾರೆ.

Follow Us:
Download App:
  • android
  • ios