ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಪ್ರಮೋಷನ್​ ವೇಳೆ ನಟಿ ಪಾಲಕ್​ ತಿವಾರಿ ಸಲ್ಮಾನ್​ ಖಾನ್​ ಹಾಗೂ ನಟಿಯರ ಡೀಪ್​ ನೆಕ್​ ಡ್ರೆಸ್​ ಬಗ್ಗೆ ಕುತೂಹಲದ ಮಾಹಿತಿ ಶೇರ್​ ಮಾಡಿದ್ದಾರೆ. ಏನದು? 

ಖ್ಯಾತ ಟಿವಿ ತಾರೆ ಶ್ವೇತಾ ತಿವಾರಿ ಅವರ ಪುತ್ರಿ ಪಾಲಕ್​ ತಿವಾರಿ ಸದ್ಯ ಬಹಳ ಸುದ್ದಿಯಲ್ಲಿದ್ದಾರೆ.ಕಿಸಿ ಕಾ ಭಾಯ್ ಕಿಸಿ ಕಿ ಜಾನ್ (Kisi Ka Bhai Kisi Ki Jaan) ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿರುವ ಪಾಲಕ್ ಸದ್ಯ ಅದರ ಪ್ರಮೋಷನ್​ ಬಿಜಿಯಲ್ಲಿದ್ದಾರೆ. ಇವರು ಈ ಚಿತ್ರದಲ್ಲಿ ಸಲ್ಮಾನ್​ ಖಾನ್​ (Salman Khan) ಜೊತೆ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್​ ಖಾನ್​ ಅವರ ಜೊತೆಗಿನ ಶೂಟಿಂಗ್ ಅನುಭವವನ್ನು ಈಚೆಗೆ ಶೇರ್​ ಮಾಡಿಕೊಂಡಿದ್ದ ನಟಿ ಪಾಲಕ್​, ಸಲ್ಮಾನ್​ ಖಾನ್​ ಅವರು ನನ್ನ ಅಪ್ಪನಂತೆ ಎಂದು ಹೇಳಿದ್ದರು. ಅವರು ಅಪ್ಪನಂತೆ ಸೆಟ್​ನಲ್ಲಿ ಕಾಳಜಿ ತೋರುತ್ತಾರೆ ಎಂದಿದ್ದರು. ಅವರು ಹೇಳಿದ್ದ ಉದ್ದೇಶ ಒಳ್ಳೆಯದ್ದೇ ಆಗಿದ್ದರೂ ಟ್ರೋಲಿಗರು ಸುಮ್ಮನೇ ಬಿಡಲಿಲ್ಲ. ಪಾಪ ಇನ್ನೂ ಮದುವೆಯೇ ಆಗದ ಸಲ್ಲು ಭಾಯಿಯನ್ನು ಅಪ್ಪ ಎಂದು ಸಂಬೋಧಿಸಿಬಿಟ್ಟರು ಎಂದು ತಮಾಷೆ ಮಾಡಿದ್ದರು. ಆದರೆ ಇದೀಗ ನಟ ಸಲ್ಮಾನ್​ ಖಾನ್​ ಕುರಿತಾಗಿ ಪಾಲಕ್​ ಒಂದು ಕುತೂಹಲದ ವಿಷಯವನ್ನು ಶೇರ್​ ಮಾಡಿಕೊಂಡಿದ್ದಾರೆ. ಸಲ್ಮಾನ್​ ಖಾನ್​ ಕುರಿತು ಯಾರಿಗೂ ತಿಳಿಯದ ಕೆಲವು ರಹಸ್ಯಗಳನ್ನು ಪಾಲಕ್​ ಹೇಳಿದ್ದಾರೆ. 

ನಟಿಯರು ಅದರಲ್ಲಿಯೂ ಇಂದಿನ ಹಲವು ನಟಿಯರು ಪೈಪೋಟಿಗೆ ಬಿದ್ದವರಂತೆ ಅಂಗಾಂಗ ಪ್ರದರ್ಶನ ಮಾಡುವುದು ಇದೆ. ಯಾವುದೇ ಅಳುಕಿಲ್ಲದೇ ಹೆಚ್ಚೆಚ್ಚು ಅಂಗಗಳನ್ನು ಪ್ರದರ್ಶನ ಮಾಡುವುದು ಎಂದರೆ ಇಂದಿನ ಬಹುತೇಕ ನಟಿಯರಿಗೆ ಪ್ರೀತಿ. ಡೀಪ್​ ನೆಕ್​ ಡ್ರೆಸ್​ (Deep Neck Dress) ಅಂತೂ ಸಿನಿತಾರೆಯರಿಗೆ ಕಾಮನ್​. ಪಾತ್ರಕ್ಕೆ ಅಗತ್ಯ ಬಿದ್ದರೆ ದೇಹ ಪ್ರದರ್ಶನ ಮಾಡುತ್ತೇನೆ ಎಂದು ಹಿಂದೆ ಕೆಲವು ನಟಿಯರು ಹೇಳುತ್ತಿದ್ದುದುಂಟು. ಆದರೆ ಇಂದು ಪಾತ್ರಕ್ಕೆ ಅಗತ್ಯ ಬಿದ್ದರೆ ಫುಲ್​ ಡ್ರೆಸ್​ ಹಾಕುತ್ತೇನೆ ಎಂದು ಹೇಳುವ ಮಟ್ಟಿಗೆ ಸ್ಥಿತಿ ಬದಲಾಗಿದೆ. ಇದರ ನಡುವೆಯೇ ಡೀಪ್​ ನೆಕ್​ ಡ್ರೆಸ್​ ಕುರಿತು ನಟ ಸಲ್ಮಾನ್​ ಖಾನ್​ ಅವರು ಮಾಡಿದ್ದ ರೂಲ್ಸ್​ ಮಾತ್ರ ಎಲ್ಲರ ಹುಬ್ಬೇರಿಸುವಂತಿದೆ. ಈ ಬಗ್ಗೆ ಖುದ್ದು ಪಾಲಕ್​ ತಿವಾರಿ ಬಹಿರಂಗಪಡಿಸಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ಪಾಲಕ್​ ಅವರು, ಮಹೇಶ್ ಮಂಜ್ರೇಕರ್ ಅವರ ಆಂಟಿಮ್​ ಸಿನಿಮಾದಲ್ಲಿ ಸಹ ನಿರ್ದೇಶಕಿಯಾಗಿ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಿದ್ದರು. ಇವೆಲ್ಲವುಗಳ ವಿಷಯವನ್ನು ಅವರು ಇದೀಗ ತಿಳಿಸಿದ್ದಾರೆ. 

'ಮಗಳ' ಲವ್​ ಗುಟ್ಟು ರಟ್ಟು ಮಾಡಿಯೇ ಬಿಟ್ರು ನಟ ಸಲ್ಮಾನ್​ ಖಾನ್​!

ಸಲ್ಮಾನ್​ ಖಾನ್​ ಶೂಟಿಂಗ್​ ಸೆಟ್​ನಲ್ಲಿ ಒಂದು ನಿಯಮ ಇಟ್ಟಿದ್ದರು ಎನ್ನುವ ವಿಷಯವನ್ನು ಪಾಲಕ್​ ತಿಳಿಸಿದ್ದಾರೆ. ನಟಿಯರಿಗೆ ಸಲ್ಮಾನ್​ ಖಾನ್​ ವಿಧಿಸಿದ್ದ ಷರತ್ತಿನ (Rules) ಬಗ್ಗೆ ಮಾತನಾಡಿದ್ದಾರೆ. ಅದೇನೆಂದರೆ ತಮ್ಮ ಸೆಟ್​ನಲ್ಲಿರುವ ಎಲ್ಲಾ ಯುವತಿಯರು ಸೇಫ್ ಆಗಿರಬೇಕೆಂದು ಸಲ್ಮಾನ್ ಖಾನ್ ಬಯಸುತ್ತಾರೆ. ಅವರಿಗೆ ಎಲ್ಲ ಹೆಣ್ಣುಮಕ್ಕಳ ಮೇಲೆ ಅಷ್ಟೊಂದು ಕಾಳಜಿ ಎಂದಿರುವ ಪಾಲಕ್​, ಸಲ್ಮಾನ್ ಖಾನ್ ಅವರ ಸೆಟ್​ನಲ್ಲಿ ಯುವತಿಯರು ಡೀಪ್ ನೆಕ್​ ಲೈನ್ ಡ್ರೆಸ್ ಧರಿಸುವಂತಿರಲಿಲ್ಲ. ಎಲ್ಲಾ ಯುವತಿಯರು ಮೈಮುಚ್ಚಿಕೊಂಡಿರುವಂತೆ ಬಟ್ಟೆ ಧರಿಸಿರಬೇಕಿತ್ತು ಎಂದು ಹೇಳಿದ್ದಾರೆ. ಅವರು ಸಂಪ್ರದಾಯವಾದಿಗಳು. ನೀವು ಏನು ಬೇಕಾದರೂ ಧರಿಸಿ. ಆದರೆ ನನ್ನ ಗರ್ಲ್ಸ್​ ಯಾವಾಗಲೂ ಸುರಕ್ಷಿತರಾಗಿರಬೇಕು ಎಂದು ಹೇಳುತ್ತಿದ್ದರು. ಯಾರೇ ಅಪರಿಚಿತರು ಸೆಟ್​ಗೆ ಬಂದರೂ ಯುವತಿಯರ ಬಗ್ಗೆ ಸಲ್ಮಾನ್ ಕಾಳಜಿ ವಹಿಸುತ್ತಿದ್ದರು ಎಂದಿದ್ದಾರೆ.

ಇನ್ನು, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಕುರಿತು ಹೇಳುವುದಾದರೆ ಇದರಲ್ಲಿ, ವೆಂಕಟೇಶ್ (Venkatesh), ಜಗಪತಿ ಬಾಬು, ಪೂಜಾ ಹೆಗ್ಡೆ, ಶೆಹನಾಜ್ ಗಿಲ್, ವಿಜೇಂದರ್ ಸಿಂಗ್, ಸಿದ್ಧಾರ್ಥ್ ನಿಗಮ್, ರಾಘವ್ ಜೂಯಲ್, ಜೆಸ್ಸಿ ಗಿಲ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಾಮ್ ಚರಣ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಸಲ್ಮಾನ್‌ ಖಾನ್‌ ನನ್ನ ಅಪ್ಪನಂತೆ ಎಂದ ನಟಿ ಪಾಲಕ್​: ಬಿಡ್ತಾರೆಯೇ ಟ್ರೋಲಿಗರು?