ಮುಂಬೈ(ಮೇ 26): ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ಇದೀಗ ಬಿಡುಗಡೆಯಾದ ಹಿಂದಿ ಚಿತ್ರ 'ರಾಧೆ' ಕುರಿತು ವಿಮರ್ಶೆ ಮಾಡಿರುವ ಬಗ್ಗೆ ನಟ ಕಮಲ್ ಆರ್ ಖಾನ್ ವಿರುದ್ಧ ಮುಂಬೈ ನ್ಯಾಯಾಲಯದಲ್ಲಿ ಮಾನನಷ್ಟ ದೂರು ದಾಖಲಿಸಿದ್ದಾರೆ.

'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ನಟ ಸಲ್ಲು ಕಾನೂನು ತಂಡವು ಕಮಲ್ ಖಾನ್‌ಗೆ ದೂರಿಗೆ ಸಂಬಂಧಿಸಿದಂತೆ ಲೀಗಲ್ ನೋಟಿಸ್ ಕಳುಹಿಸಿದೆ. ಕಮಲ್ ಖಾನ್ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ. "ಸಲ್ಮಾನ್ ಖಾನ್ ರಾಧೆ ಅವರ ವಿಮರ್ಶೆಗಾಗಿ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಟಾಪ್ ನಟಿಯ ಮನೆಗೆ ಅತಿಕ್ರಮಿಸಿ ಚಾಕು ಇರಿದವ ಅರೆಸ್ಟ್

ನೋಟಿಸ್ ಪ್ರಕಾರ, ಸಲ್ಮಾನ್ ಖಾನ್ ಅವರ ಕಾನೂನು ತಂಡವು ಗುರುವಾರ ನಗರ ಸಿವಿಲ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಮುಂದೆ ತುರ್ತು ವಿಚಾರಣೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಿದೆ.

ರಾಧೆ ಸಿನಿಮಾ ಫ್ಲಾಪ್ ಆಗಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಅಷ್ಟಾಗಿ ಸೌಂಡ್ ಮಾಡಿಲ್ಲ. ಇನ್ನು ಸಿನಿಮಾ ಪೈರಸಿ ಕಾಟದ ಬಗ್ಗೆಯೂ ಸಲ್ಮಾನ್ ಈ ಹಿಂದೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದರು.