ಬಾಲಿವುಡ್ ನಟ ಸಲ್ಮಾನ್ ಖಾನ್‌ನ ವಿಡಿಯೋ ಒಂದು ವೈರಲ್ ಆಗಿದೆ. ಸೊಸೆ ಆಯತ್ ಜೊತೆಗಿನ ವಿಡಿಯೋ ಕ್ಯೂಟ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಓಡಾಡ್ತಿದೆ. ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶೇರ್ ಮಾಡಿದ್ದ ವಿಡಿಯೋವನ್ನು ರೀಶೇರ್ ಮಾಡಿದ್ದಾರೆ.

ವಿಡಿಯೋದಲ್ಲಿ ಪುಟ್ಟ ಸೊಸೆಯೊಂದಿಗೆ ಸಲ್ಮಾನ್ ಖಾನ್ ಡ್ಯಾನ್ಸ್ ಮಾಡುವುದನ್ನು ನೋಡಬಹುದು. ಈ ವಿಡಿಯೋ ಸಲ್ಮಾನ್ ಖಾನ್ ಮತ್ತು ಭಾಗ ಅರ್ಪಿತಾ ಖಾನ್ ಪತಿ ಆಯುಷ್ ಶರ್ಮಾನ ಹೊಸ ಸಿನಿಮಾ ಆಂಟಿಮ್‌: ದಿ ಫೈನಲ್ ಟ್ರುತ್ ಸಿನಿಮಾ ಸೆಟ್‌ನಲ್ಲಿ ಮಾಡಲಾಗಿದೆ ಎನ್ನಲಾಗಿದೆ.

ಭಾರತದ ಆರ್ಥಿಕ ತಜ್ಞೆಯ ಸೌಂದರ್ಯ ಹೊಗಳಿದಕ್ಕೆ ಬಿಗ್‌ಬಿ ಕಾಲೆಳೆದ ನೆಟ್ಟಿಗರು

ಭಜರಂಗಿ ಭಾಯಿಜಾನ್ ಸಿನಿಮಾದ ತು ಜೊ ಮಿಲಾ ಹಾಡಿಗೆ ಸೊಸೆಯನ್ನು ಹಿಡಿದು ಡ್ಯಾನ್ಸ್ ಮಾಡಿದ್ದಾರೆ ಸಲ್ಮಾನ್. ವಿಡಿಯೋ ಶೇರ್ ಮಾಡಿದ ಅರ್ಪಿತಾ ಅನ್‌ಕಂಡೀಷನಲ್ ಲವ್ ಎಂದು ಬರೆದಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು, ಸೊಸೆಯೊಂದಿಗಿನ ಸಲ್ಮಾನ್ ಡ್ಯಾನ್ಸ್ ಸಿಕ್ಕಾಪಟ್ಟೆ ಕ್ಯೂಟ್ ಅಂತಿದ್ದಾರೆ ನೆಟ್ಟಿಗರು.

ಸಲ್ಮಾನ್ ಖಾನ್ ದಬಾಂಗ್ 3ನಲ್ಲಿ ಕಾಣಿಸಿಕೊಂಡಿದ್ದು, ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಮತ್ತು ಕಿಕ್ 2 ಸಿನಿಮಾ ಮಾಡುತ್ತಿದ್ದಾರೆ ಸಲ್ಮಾನ್ ಖಾನ್. ರಾಧೆ ಶೂಟಿಂಗ್ ಮುಗಿದಿದ್ದು, ಈ ವರ್ಷ ಈದ್‌ಗೆ ಥಿಯೇಟರ್‌ಗೆ ಬರಲಿದೆ ಎನ್ನಲಾಗಿದೆ.