ಭಾರತದ ಆರ್ಥಿಕ ತಜ್ಞೆಯ ಸೌಂದರ್ಯ ಹೊಗಳಿದಕ್ಕೆ ಬಿಗ್‌ಬಿ ಕಾಲೆಳೆದ ನೆಟ್ಟಿಗರು

ಭಾರತ-ಅಮೆರಿಕದ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅವರ ಸೌಂದರ್ಯವನ್ನು ಹೊಗಳಿ ಅಮಿತಾಭ್ ಬಚ್ಚನ್ ಸದ್ಯ ಪೇಚಿಗೆ ಸಿಲುಕಿದ್ದಾರೆ. ಕೆಬಿಸಿ ಶೋನಲ್ಲಿ ಏನಾಯ್ತು..? ಇಲ್ಲಿ ಓದಿ

Big B Amitabh Bachchan Gets Flak For Sexist Comment About Indian Economist dpl

ಜನವರಿ 22ರಂದು ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ , ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಆರ್ಥಿಕ ತಜ್ಞೆ ಅಮಿತಾಭ್ ಬಚ್ಚನ್ ಜೊತೆ ಫ್ಯಾನ್ ಮೊಮೆಂಟ್ ಶೇರ್ ಮಾಡಿದ್ದರು. ಗೀತಾ ಅವರು ಶೇರ್ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ.

ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಸ್ಪರ್ಧಿಯ ಬಳಿ ಗೀತಾ ಗೋಪಿನಾಥ್ ಅವರ ಫೋಟೋ ತೋರಿಸಿ ಈಕೆ ಮುಖ್ಯ ಆರ್ಥಿಕ ತಜ್ಞೆಯಾಗಿ ಕೆಲಸ ಮಾಡುತ್ತಿರುವ ಇಲಾಖೆ ಯಾವುದು ಎಂಬ ಪ್ರಶ್ನೆ ಕೇಳಿದ್ದರು.

KBCಯಲ್ಲಿ ಅಮಿತಾಬ್ ಬಚ್ಚನ್ ಜೊತೆ ಉಡುಪಿಯ ದಿನಗೂಲಿ ಕಾರ್ಮಿಕ

ಉತ್ತರದ ನಾಲ್ಕು ಆಪ್ಶನ್ ಕೊಟ್ಟ ಬಿಗ್‌ಬಿ ಅವರ ಮುಖ ಎಷ್ಟು ಸುಂದರವಾಗಿದೆ ಎಂದರೆ ಅದನ್ನು ಆರ್ಥಿಕತೆಯ ಜೊತೆ ಹೋಲಿಸಲು ಸಾಧ್ಯವಿಲ್ಲ ಎಂದಿದ್ದರು. ಇದೇ ವಿಡಿಯೋವನ್ನು ಶೇರ್ ಮಾಡಿದ್ದಾರೆ ಗೀತಾ ಗೋಪಿನಾಥ್.

ಓಕೆ. ನಾನು ಇದರಿಂದ ಹೊರಬರುತ್ತೇನೋ ಇಲ್ಲವೋ. ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅಮಿತಾಭ್ ಬಚ್ಚನ್ ಅವರ ಪ್ರತಿಕ್ರಿಯೆಯನ್ನು ಗೀತಾ ಗೋಪಿನಾಥ್ ಮೆಚ್ಚಿದರೂ, ನೆಟ್ಟಿಗರು ಮಾತು ಇದೊಂದು ಸೆಕ್ಸಿಸ್ಟ್ ಕಮೆಂಟ್ ಎಂದು ಟೀಕಿಸಿದ್ದಾರೆ. 

Latest Videos
Follow Us:
Download App:
  • android
  • ios