ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ಮತ್ತು ಸೀಮಾ ದಂಪತಿ ದೂರ ದೂರ ಆಗುತ್ತಿದ್ದಾರೆ. ಇಬ್ಬರು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಇಂದು (ಮೇ 13) ಅರ್ಜಿ ಸಲ್ಲಿಸಿದ್ದಾರೆ.
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಕುಟುಂಬದಲ್ಲಿ ಮತ್ತೊಂದು ಡಿವೋರ್ಸ್ ವಿಚಾರ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಪತ್ನಿ ಮಲೈಕಾ ಅರೋರಾ ಅವರಿಂದ ದೂರ ಆದ ಬಳಿಕ ಇದೀಗ ಸಲ್ಮಾನ್ ಅವರ ಮತ್ತೋರ್ವ ಸಹೋದರ ಸೋಹೈಲ್ ಖಾನ್ ಕೂಡ ಪತ್ನಿಯಿಂದ ದೂರ ಆಗುವ ನಿರ್ಧಾರ ಮಾಡಿದ್ದಾರೆ. ಹೌದು, ಸೋಹೈಲ್ ಖಾನ್ ಮತ್ತು ಸೀಮಾ ದಂಪತಿ ದೂರ ದೂರ ಆಗುತ್ತಿದ್ದು ಇಂದು (ಮೇ 13) ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಇಬ್ಬರು ಕೌಟುಂಬಿಕ ನ್ಯಾಯಾಲಯದಿಂದ ಹೊರಬರುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮೂಲಗಳ ಪ್ರಕಾರ, 'ಸೋಹೈಲ್ ಖಾನ್ ಮತ್ತು ಸೀಮಾ ಖಾನ್ ಇಂದು (ಮೇ 13) ಕೌಟುಂಬಿಕ ನ್ಯಾಯಾಲಯದ ಮುಂದೆ ಹಾಜರಾಗಿದ್ದು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರು ಕೂಡ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ' ಎಂಬ ಮಾಹಿತಿ ಸಿಕ್ಕಿದೆ. ಈ ಮೂಲಕ ಸೋಹೈಲ್ ಖಾನ್ ಮತ್ತು ಸೀಮಾ ಇಬ್ಬರು 24 ವರ್ಷಗಳ ದಾಂಪತ್ಯ ಜೀವನಕ್ಕೆ ಎಳ್ಳು-ನೀರು ಬಿಡುತ್ತಿದ್ದಾರೆ.
ಸೋಹೈಲ್ ಖಾನ್ ದೀಪಾವಳಿ ಪಾರ್ಟಿಯಲ್ಲಿ ಗರ್ಲ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸಲ್ಮಾನ್ ಮತ್ತು ಅರ್ಬಾಜ್!
ಸೋಹೈಲ್ ಮತ್ತು ಸೀಮಾ ಖಾನ್ 1998ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ನಿರ್ವಾನ್ ಮತ್ತು ಯೋಹಾನ್ ಎಂದು ಹೆಸರಿಟ್ಟಿದ್ದಾರೆ. 24 ವರ್ಷಗಳ ಕಾಲ ಜೊತೆಯಲ್ಲಿದ್ದ ಈ ಜೋಡಿ ಇದೀಗ ಬೇರೆ ಬೇರೆ ಆಗುವ ನಿರ್ಧಾರ ಮಾಡಿದ್ದಾರೆ. ಮೂಲಗಳ ಪ್ರಕಾರ ಸೋಹೈಲ್ ಮತ್ತು ಸೀಮಾ ದಂಪತಿ 2017ರಲ್ಲಿಯೇ ದೂರ ಆಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಯಾಕೆಂದರೆ ಈ ಜೋಡಿ 2017ರಿಂದ ಬೇರೆ ಬೇರೆ ವಾಸಿಸುತ್ತಿದ್ದರು ಎಂದು ಆಂಗ್ಲ ಮಾಧ್ಯಮ ವರದಿ ಮಾಡಿತ್ತು. ಇದೀಗ ಇಬ್ಬರೂ ದೂರ ಆಗುತ್ತಿರುವುದು ನಿಜವಾಗಿದೆ.
ಸಹೋದರ ಸಲ್ಮಾನ್ ಜೀವನ ನಾಶಮಾಡಿದ್ದು ಐಶ್ವರ್ಯಾ ಎಂದು ಅರೋಪಿಸಿದ ಸೊಹೈಲ್ ಖಾನ್
ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೋಹೈಲ್ ಖಾನ್ ಪತ್ನಿ ಸೀಮಾ ಖಾನ್ ಮಾತನಾಡಿ, ಕೆಲವೊಮ್ಮೆ ನೀವು ದೊಡ್ಡವರಾದಾಗ ನಿಮ್ಮ ಸಂಬಂಧಗಳು ಬೇರೆ ಬೇರೆ ದಿಕ್ಕುಗಳಿಗೆ ಹೋಗುತ್ತವೆ. ನಾನು ಅದರ ಬಗ್ಗೆ ಕ್ಷಮೆಯಾಚಿಸುವುದಿಲ್ಲ. ಏಕೆಂದರೆ ನಾವು ಸಂತೋಷವಾಗಿದ್ದೇವೆ. ನನ್ನ ಮಕ್ಕಳು ಸಹ ಸಂತೋಷವಾಗಿದ್ದಾರೆ. ಸೋಹೈಲ್ ಮತ್ತು ನಾನು ಸಾಂಪ್ರದಾಯಿಕ ಮದುವೆಯಲ್ಲ, ಆದರೆ ನಾವು ಕುಟುಂಬ. ನಾವು ಒಂದು ಯೂನಿಟ್ ಎಂದು ಹೇಳಿದ್ದರು.
