ಬಾಲಿವುಡ್ ನಟ ಸಲ್ಮಾನ್ ಖಾನ್ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವು 2020 ರಲ್ಲಿ ನಡೆದ ಗಲ್ವಾನ್ ಕಣಿವೆ ಘರ್ಷಣೆಯನ್ನು ಆಧರಿಸಿದೆ. ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಲ್ಮಾನ್ ಖಾನ್ ಅವರ ಹೊಸ ಲುಕ್ ಅನ್ನು ಬಹಿರಂಗಪಡಿಸಿದೆ.
ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಒಂದು ದೊಡ್ಡ ಒಳ್ಳೆಯ ಸುದ್ದಿ ಬಂದಿದೆ. 'ಸಿಕಂದರ್' ನಂತರ, ಬಾಲಿವುಡ್‌ನ ಭಾಯ್ ತಮ್ಮ ಮುಂದಿನ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಅವರ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ ಅಧಿಕೃತ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಇದರಲ್ಲಿ ಸಲ್ಮಾನ್ ಖಾನ್ ಅವರ ಲುಕ್ ಬಹಿರಂಗವಾಗಿದೆ. ಈ ಚಿತ್ರವನ್ನು ಅಪೂರ್ವ ಲಖಿಯಾ ನಿರ್ದೇಶಿಸಲಿದ್ದಾರೆ.
ಸಲ್ಮಾನ್ ಖಾನ್ ಕೂಡ ತಮ್ಮ ಮುಂಬರುವ ಚಿತ್ರ 'ಬ್ಯಾಟಲ್ ಆಫ್ ಗಾಲ್ವಾನ್' ನ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಇದು ಮುಖದ ಮೇಲೆ ರಕ್ತದ ಕಲೆಗಳು, ಹೆಮ್ಮೆಯ ಮೀಸೆ ಮತ್ತು ಕಣ್ಣುಗಳಲ್ಲಿ ದೇಶಭಕ್ತಿಯೊಂದಿಗೆ ಸಲ್ಮಾನ್ ಖಾನ್ ಅವರನ್ನು ಚಿತ್ರಿಸಿದೆ. ಒಂದೇ ಒಂದು ಗುಂಡು ಹಾರಿಸದೆ ನಡೆದ ಭಾರತದ ಅತ್ಯಂತ ಕ್ರೂರ ಯುದ್ಧಗಳಲ್ಲಿ ಒಂದನ್ನು ಆಧರಿಸಿದ ಚಿತ್ರದ ಥೀಮ್ ಅನ್ನು ಇದು ಮತ್ತಷ್ಟು ವಿವರಿಸುತ್ತದೆ.
ಸಮುದ್ರಮಟ್ಟದಲ್ಲಿ 15 ಸಾವಿರ ಫೀಟ್ ಎತ್ತರದಲ್ಲಿ ನಡೆದ ಈ ಯುದ್ಧದಲ್ಲಿ ಭಾರತದ ಸೈನಿಕರ ಅದಮ್ಯ ಸ್ಪೂರ್ತಿಗೆ ಸಾಕ್ಷಿಯಾಗಿದೆ. ಗಲ್ವಾನ್ ಬಗ್ಗೆ ಭಾರತ ಹೊಂದಿರುವ ತೀವ್ರತೆ ಹಾಗೂ ಹೆಮ್ಮೆಯನ್ನು ಸಲ್ಮಾನ್ ಖಾನ್‌ನ ಮೋಷನ್ ಪೋಸ್ಟರ್‌ನಲ್ಲಿ ಚಿತ್ರಸಿಲಾಗಿದೆ.
ಈಗ, ಗಲ್ವಾನ್ ಕದನದಲ್ಲಿ ಸಲ್ಮಾನ್ ಖಾನ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ನೋಡುವ ಉತ್ಸಾಹ ಅವರ ಅಭಿಮಾನಿಗಳಲ್ಲೂ ಉತ್ತುಂಗಕ್ಕೇರಿದರ. ಇದು ನಿಜಕ್ಕೂ ಒಂದು ವಿಶಿಷ್ಟ ಅನುಭವವಾಗಲಿದೆ, ಪ್ರತಿಯೊಬ್ಬ ಭಾರತೀಯನೂ ವೀಕ್ಷಿಸಲು ಅರ್ಹವಾದ ಕಥೆ ಇದು.
2020 ರಲ್ಲಿ ನಡೆದ ಗಾಲ್ವಾನ್ ಕಣಿವೆ ಘರ್ಷಣೆಯು ಭಾರತದ ಲಡಾಖ್‌ನಲ್ಲಿರುವ ವಿವಾದಿತ ಗಡಿ ಪ್ರದೇಶವಾದ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಮಾರಕ ಘರ್ಷಣೆಯಾಗಿತ್ತು. ಜೂನ್ 15 ರಂದು ನಡೆದ ಈ ಘರ್ಷಣೆಯಲ್ಲಿ ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸಿದವು, ಇದು ಸುಮಾರು 45 ವರ್ಷಗಳಲ್ಲಿ ಚೀನಾ-ಭಾರತ ಗಡಿ ಸಂಘರ್ಷದಲ್ಲಿ ಮೊದಲ ಸಾವುನೋವು ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಬಂದೂಕುಗಳನ್ನು ನಿಷೇಧಿಸಲಾಗಿರುವುದರಿಂದ ಈ ಹೋರಾಟದಲ್ಲಿ ಎರಡೂ ಪಡೆಯ ಸೈನಿಕರು ಕೋಲುಗಳು ಮತ್ತು ಕಲ್ಲುಗಳನ್ನು ಬಳಸಿ ಕೈ ಕೈ ಮಿಲಾಯಿಸಿ ಹೊಡೆದಾಟ ನಡೆಸಿದ್ದರು.
ಸಲ್ಮಾನ್ ಖಾನ್ ಅವರು ಈ ಪಾತ್ರಕ್ಕೆ ಮಾಡಿಕೊಂಡಿರುವ ಬೃಹತ್ ಚೇಂಜ್‌ಓವರ್‌ಅನ್ನು ಗಮನಿಸಿದರೆ, ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ವಹಿಸುವುದು ಖಚಿತವಾಗಿದೆ. ಇದಕ್ಕೂ ಮೊದಲು, ನಟ ತನ್ನ ಫೋಟೋವನ್ನು ಹಂಚಿಕೊಂಡಿದ್ದರು, ಅದು ಗಮನಾರ್ಹವಾಗಿ ತೆಳ್ಳಗಿನ ಮತ್ತು ಫಿಟ್ಟರ್ ಲುಕ್ ಅನ್ನು ಪ್ರದರ್ಶಿಸಿತು.
20 ಭಾರತೀಯ ಸೈನಿಕರು ಹುತಾತ್ಮ
ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ರಾತ್ರಿಯ ವೇಳೆ ಚೀನಾದ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಆರಂಭದಲ್ಲಿ ಸೇನೆಯು ಒಬ್ಬ ಅಧಿಕಾರಿ ಹಾಗೂ ಇಬ್ಬರು ಸೈನಿಕರು ಸಾವು ಕಂಡಿದ್ದಾರೆ ಎಂದು ಹೇಳಿತ್ತು. ಆದರೆ, ಕರ್ತವ್ಯದ ವೇಳೆ ಶೂನ್ಯಕ್ಕಿಂತ ಕಡಿಮೆ ತಾಪಮಾನಕ್ಕೆ ಒಡ್ಡಿಕೊಂಡಿದ್ದ 17 ಜನರು ತಮ್ಮ ಗಾಯಗಳಿಂದಾಗಿ ಸಾವನ್ನಪ್ಪಿದರು ಎಂದು ಮಾಹಿತಿ ನೀಡಿತ್ತು.
