Asianet Suvarna News Asianet Suvarna News

ದಿಲೀಪ್ ಕುಮಾರ್ ಪರವಾಗಿ ಅಂಬೇಡ್ಕರ್ ಅವಾರ್ಡ್ ಸ್ವೀಕರಿಸಿ ಕಣ್ಣೀರಿಟ್ಟ ಪತ್ನಿ ಸಾಯಿರಾ ಬಾನು

ಬಾಲಿವುಡ್‌ನ ಹಿರಿಯ ನಟಿ ಸಾಯಿರಾ ಬಾನು(Saira Banu) ತನ್ನ ಪತಿ, ದಿವಂಗತ ನಟ ದಿಲೀಪ್ ಕುಮಾರ್ (Dilip Kumar)ಪರವಾಗಿ ಭಾರತ ರತ್ನ ಅಂಬೇಡ್ಕರ್ ಪ್ರಶಸ್ತಿ (Bharat Ratna Dr Ambedkar Award) ಸ್ವೀಕರಿಸಿ ಕಣ್ಣೀರಿಟ್ಟಿದ್ದಾರೆ. ಮಂಗಳವಾರ (ಜೂನ್ 14) ನಡೆದ ಪ್ರಶಸ್ತಿ ಸಮಾರಂಭದಲ್ಲಿ ಹಿರಿಯ ನಟಿ, ದಿಲೀಪ್ ಕುಮಾರ್ ಪತ್ನಿ ಪ್ರಶಸ್ತಿ ಸ್ವೀಕರಿಸಿದರು. 

Saira Banu breaks down in memory of Dilip Kumar as she accepts Bharat Ratna Dr Ambedkar Award for him sgk
Author
Bengaluru, First Published Jun 15, 2022, 5:59 PM IST

ಬಾಲಿವುಡ್‌ನ ಹಿರಿಯ ನಟಿ ಸಾಯಿರಾ ಬಾನು(Saira Banu) ತನ್ನ ಪತಿ, ದಿವಂಗತ ನಟ ದಿಲೀಪ್ ಕುಮಾರ್ (Dilip Kumar)ಪರವಾಗಿ ಭಾರತ ರತ್ನ ಅಂಬೇಡ್ಕರ್ ಪ್ರಶಸ್ತಿ (Bharat Ratna Dr Ambedkar Award) ಸ್ವೀಕರಿಸಿ ಕಣ್ಣೀರಿಟ್ಟಿದ್ದಾರೆ. ಮಂಗಳವಾರ (ಜೂನ್ 14) ನಡೆದ ಪ್ರಶಸ್ತಿ ಸಮಾರಂಭದಲ್ಲಿ ಹಿರಿಯ ನಟಿ, ದಿಲೀಪ್ ಕುಮಾರ್ ಪತ್ನಿ ಪ್ರಶಸ್ತಿ ಸ್ವೀಕರಿಸಿದರು. ಪತಿಯ ಪರವಾಗಿ ಪ್ರಶಸ್ತಿ ಪಡೆದು ದಿಲೀಪ್ ಕುಮಾರ್ ಇನ್ನುಇಲ್ಲೇ ಇದ್ದಾರೆ ಎಂದು ಹೇಳುತ್ತಾ ಭಾವುಕರಾದರು. ಹಿರಿಯ ನಟ ದಿಲೀಪ್ ಕುಮಾರ್ 2021 ಜುಲೈನಲ್ಲಿ ಇಹಲೋಕ ತ್ಯಜಿಸಿದರು. ಪತಿಯ ನಿಧನದ ಬಳಿಕ ಸಾಯಿರಾ ಬಾನು ಕುಸಿದು ಹೋಗಿದ್ದಾರೆ. ಪತಿಯ ನೆನಪಲ್ಲೇ ಜೀವನ ಕಳೆಯುತ್ತಿದ್ದಾರೆ. ಪ್ರಶಸ್ತಿ ಸಮಾರಂಭದಲ್ಲೂ ಸೈಯಿರಾ ಬಾನು ಕಣ್ಣೀರಾಕಿದ್ದಾರೆ. 

ಇತ್ತೀಚಿಗಷ್ಟೆ ದಿಲೀಪ್ ಅವರಿಗೆ ಭಾರತ ರತ್ನ ಡಾ.ಅಂಬೇಡ್ಕರ್ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಮುಂಬೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ದಿಲೀಪ್ ಕುಮಾರ್ ಪತ್ನಿ ಸಾಯಿರಾ ಬಾನು ಪತಿಯ ಪರವಾಗಿ ಪ್ರಶಸ್ತಿ ಪಡೆದರು. ಈ ಸಮಯದಲ್ಲಿ ಪತಿಯ ಮೇಲಿನ ಪ್ರೀತಿಯನ್ನು ವ್ಯಕ್ತಡಿಸಿದರು. ದಿಲೀಪ್ ನನ್ನ ಕೊಹಿನೂರ್ ಎಂದು ಹೇಳಿದರು. ಅದೇ ಸಮಯದಲ್ಲಿ ಪತಿ ದಿಲೀಪ್ ಅವರಿಗೆ ಬಾರತ ರತ್ನ ನೀಡಬೇಕೆಂದು ಎಂದು ಹೇಳಿದರು. 

ಪ್ರಶಸ್ತಿಯನ್ನು ಕೇಂದ್ರ ಸಚಿವ ರಾಮದಾಸ್ ಅಠವಾಲೆ ಅವರು ಪ್ರದಾನ ಮಾಡಿದರು. ರಾಮದಾಸ್ ಜೊತೆ ಫೋಟೋಗೆ ಪೋಸ್ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆ ಸಮಯದಲ್ಲಿ ತನ್ನ ಪತಿಯ ಪೋಸ್ಟರ್ ಕವರ್ ಆಗಿಲ್ಲ ಎಂದು ಖಚಿತ ಪಡಿಸಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಸಾಯಿರಾ ಅವರ ಕ್ಯೂಟ್ ವಿಡಿಯೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ದಿಲೀಪ್ ಹೇಗೆ ತನ್ನ ಜೀವನದಲ್ಲಿ ಬೆಂಬಲವಾಗಿ ನಿಂತಿದ್ದರು ಎಂದು ಬಹಿರಂಗ ಪಡಿಸಿದರು, ಭಾವುಕಲಾಗುತ್ತೇನೆ ಎನ್ನುವ ಕಾರಣಕ್ಕೆ ಈ ಸಮಾರಂಭದಲ್ಲಿ ಭಾಗಿಯಾಗಲು ಇಷ್ಟಪಡುವಿದಲ್ಲ ಎಂದು ಹೇಳಿದರು. 

ದಿಲೀಪ್ ಕುಮಾರ್ ನಿಧನದ ನಂತರ ಪತ್ನಿ ಸಾಯಿರಾ ಎಲ್ಲಿದ್ದಾರೆ?  ಹೇಗಿದ್ದಾರೆ? 

ಮಾಧ್ಯಮದ ಜೊತೆ ಮಾತನಾಡಿದ ಸಾಯಿರಾ, ದಿಲೀಪ್ ಇನ್ನು ನನಗೆ ಹತ್ತರವಾಗಿದ್ದಾರೆ. ಎಲ್ಲವನ್ನು ನೋಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದರು ಇದೆ ಸಮಯದಲ್ಲಿ ದಿಲೀಪ್ ಅವರಿಗೆ ಭಾರತ ರತ್ನ ನೀಡಬೇಕೆಂದು ಹೇಳಿದರು. ದಿಲೀಪ್ ಹಿಂದೂಸ್ತಾನಕ್ಕೆ ಕೊಹಿನೂರ್ ಆಗಿದ್ದಾರೆ. ಕೊಹಿನೂರ್‌ಗೆ ಖಂಡಿತವಾಗಿಯೂ ಭಾರತ ರತ್ನ ಸಿಗಬೇಕು ಎಂದು ಹೇಳಿದರು. ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆ ಇರುತ್ತಾರೆ. ಅವರು ಇಲ್ಲ ಎಂದು ನಾನು ಯಾವತ್ತು ಯೋಚಿಸಿಲ್ಲ ಎಂದು ಸಾಯಿರಾ ಹೇಳಿದ್ದಾರೆ. 

12ನೇ ವಯಸ್ಸಿಗೆ ದಿಲೀಪ್ ಕುಮಾರ್‌ಗೆ ಮನಸೋತ ಸೈರಾ ಬಾನು ಲವ್‌ಸ್ಟೋರಿ

ಸಾಯಿರಾ ಬಾನು ಮತ್ತು ದಿಲೀಪ್ ಕುಮಾರ್ 1966ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 55 ವರ್ಷಗಳ ಕಾಲ ಒಬ್ಬರು ಒಟ್ಟಿಗೆ ಸಂಸಾರ ನಡೆಸಿದ್ದಾರೆ. 2021, ಜುಲೈ 7ರಂದು ಇಹಲೋಕ ತ್ಯಜಿಸಿದರು. ದಿಲೀಪ್ ಕುಮಾರ್ ಅವರಿಗೆ  98 ವರ್ಷವಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳದರು.         

Follow Us:
Download App:
  • android
  • ios