Asianet Suvarna News Asianet Suvarna News

ಸೈಫ್‌ ಅಲಿ ಡಿಸ್‌ಚಾರ್ಜ್‌: ರಾಮನ ಪ್ರಾಣಪ್ರತಿಷ್ಠೆ ವೇಳೆ ರಾವಣ ಪಾತ್ರಧಾರಿಗೆ ಏನಾಯ್ತು? ನಟ ಹೇಳಿದ್ದೇನು?

ಆಸ್ಪತ್ರೆಗೆ ದಿಢೀರ್‌ ದಾಖಲಾಗಿ ಆತಂಕ ಮೂಡಿಸಿದ್ದ ನಟ ಸೈಫ್‌ ಅಲಿ ಖಾನ್‌ ಡಿಸ್‌ಜಾರ್ಜ್‌ ಆಗಿದ್ದಾರೆ. ಅವರು ಹೇಳಿದ್ದೇನು?
 

Saif Ali Khan to be discharge from hospital after tricep surgery What Actor says about this suc
Author
First Published Jan 23, 2024, 2:09 PM IST

ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಅವರು ಭಾರಿ ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ. ಸೈಫ್‌ ಹಾಗೂ ಕರೀನಾ ಕಪೂರ್‌ ಅಭಿಮಾನಿಗಳು ಈಗ ನಿರಾಳರಾಗಿದ್ದಾರೆ. ನಿನ್ನೆ  ಬೆಳಿಗ್ಗೆ ಸುಮಾರು 8 ಗಂಟೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಧಿಕೃತವಾಗಿ ಅವರು ಮಾಹಿತಿ ನೀಡಿರಲಿಲ್ಲ. ಆದರೆ ವಿಷಯ ತಿಳಿಯುತ್ತಿದ್ದಂತೆಯೇ  ​ ಅಭಿಮಾನಿಗಳು ಆತಂಕಗೊಂಡಿದ್ದರು. ನಟನ ಭುಜದಲ್ಲೂ ಮೂಳೆ ಮುರಿತವಾಗಿದೆ, ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದೇ ಎಲ್ಲೆಡೆ ವರದಿಯಾಗಿತ್ತು. ಆದರೆ ನಿಜಾಂಶ ಮಾತ್ರ ಎಲ್ಲಿಯೂ ಬಹಿರಂಗವಾಗಿರಲಿಲ್ಲ. ಅತ್ತ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯುತ್ತಿದ್ದ ಸಂದರ್ಭದಲ್ಲಿ ಇತ್ತ ರಾವಣ ಪಾತ್ರಧಾರಿಯಾಗಿದ್ದ ಸೈಫ್‌ ಅಲಿ ಅವರು ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದೂ ಸೋಷಿಯಲ್‌ ಮೀಡಿಯಾಗಳಲ್ಲಿ ಸದ್ದು ಮಾಡಿತ್ತು.  

ಇದೀಗ ನಟ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿ ಹೊರಗೆ ಬಂದಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ.  ಕರೀನಾ ಕಪೂರ್​ ಅವರನ್ನೂ ವಿಡಿಯೋದಲ್ಲಿ ನೋಡಬಹುದು. ಇದೀಗ ತಮಗೆ ಏನಗಿತ್ತು ಎಂದು ನಟ ಹೇಳಿದ್ದಾರೆ. ‘ಜೂಮ್’ಗೆ ನೀಡಿದ ಸಂದರ್ಶನದಲ್ಲಿ ಸೈಫ್ ಅಲಿಖಾನ್, ನನ್ನ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ನೋಡಿ ಆಶ್ಚರ್ಯವಾಯಿತು.  ನನಗೆ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಲಾಗಿಲ್ಲ ಅಥವಾ ನನ್ನ ಬೆನ್ನು ಮೂಳೆಯೂ ಮುರಿದಿಲ್ಲ. ಆದರೆ ಆ ಕ್ಷಣದಲ್ಲಿ ಏನಾಯಿತು ಎಂದು ನನಗೂ ಸರಿಯಾಗಿ ಗೊತ್ತಿಲ್ಲ. ಭುಜದಲ್ಲಿ ವಿಪರೀತ ನೋವಿತ್ತು ಅಷ್ಟೇ.  ನಾನು ಬಹಳ ಸಮಯದಿಂದ ಅದರಲ್ಲಿ ನೋವು ಅನುಭವಿಸುತ್ತಿದ್ದೆ.  ಕೆಲವೊಮ್ಮೆ ನೋವು ಅಸಹನೀಯವಾಗುತ್ತಿತ್ತು. ಇದಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದೆ ಎಂದಿದ್ದಾರೆ.

ಇಸ್ಲಾಂನಲ್ಲಿ ನಂಬಿಕೆಯಿಲ್ಲ ಎಂದಿದ್ದ ಉರ್ಫಿಯಿಂದ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಹೋಮ-ಹವನ
 
 ನನಗೆ ಈ ಸಮಸ್ಯೆ ಬಹಳ ದಿನಗಳಿಂದ ಇದೆ. ಆದರೆ ಇದು ಎಷ್ಟು ಗಂಭೀರವಾಗಿದೆ ಎಂದು ನನಗೂ ನಿಜವಾಗಿ ತಿಳಿದಿಲ್ಲ. ನಿನ್ನೆ ಕೂಡ ಏನು ಆಯಿತು ಎಂದು ಸರಿಯಾಗಿ ಗೊತ್ತಿಲ್ಲ. ಆದರೆ ನೋವು ಹೆಚ್ಚಾಯಿತು. ದೇವಾರ ಚಿತ್ರಕ್ಕೆ ಆ್ಯಕ್ಷನ್ ಸೀಕ್ವೆನ್ಸ್ ಮಾಡುವಾಗ ನನಗೆ ತೀವ್ರ ಪೆಟ್ಟಾಗಿತ್ತು. ಆಗ ನನ್ನ ಗಮನಕ್ಕೆ ಬಂದಿರಲಿಲ್ಲ.  ಎಲ್ಲವೂ ಸರಿಯಾಗಿದೆ ಎಂದು ನಾನು ಭಾವಿಸಿದೆ. ಹೇಗೋ ಕೆಲಸ ನಡೆಯುತ್ತಿತ್ತು.   ನಾನು ಕೆಲಸ ಮಾಡುತ್ತಿದ್ದಾಗ ನೋವು ಹೆಚ್ಚಾಗುತ್ತಿತ್ತು.  ನಾನು ಶ್ರಮದಾಯಕವಾಗಿ ಏನಾದರೂ ಮಾಡಿದರೆ, ಅದು ನೋವುಂಟುಮಾಡುತ್ತದೆ. ರಾವಣನ ಪಾತ್ರಕ್ಕೆ action ಮಾಡುವಾಗಲೂ ಕಷ್ಟವಾಗಿತ್ತು. ಹಾಗಾಗಿ ಎಂಆರ್‌ಐ ಮಾಡಿಸಲು ಯೋಚಿಸಿದ್ದೆ, ಅದಕ್ಕಾಗಿ ದಾಖಲಾಗಿದ್ದೆ ಅಷ್ಟೇ ಎಂದಿದ್ದಾರೆ. 

ಇದೀಗ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿರುವ ನಟ ಎಲ್ಲರತ್ತ ಕೈಬೀಸುವುದನ್ನು ನೋಡಬಹುದು. ಜೊತೆಗೆ ಒಂದು ಕೈಗೆ ಬ್ಯಾಂಡೇಜ್‌ ಹಾಕಿರುವುದನ್ನು ಕಾಣಬಹುದಾಗಿದೆ.  

ಇಂದಿರಾಗಾಂಧಿಯಾಗಿ ಕಂಗನಾ ರಣಾವತ್- ಅಯೋಧ್ಯೆ ಭೇಟಿ ಬೆನ್ನಲ್ಲೇ ಎಮರ್ಜೆನ್ಸಿ ಬಿಡುಗಡೆಗೆ ಡೇಟ್‌ ಫಿಕ್ಸ್‌!

Follow Us:
Download App:
  • android
  • ios