ತಂದೆ ರಣಧೀರ್‌ ಕಪೂರ್‌ ಬರ್ತ್‌ಡೇ ಪಾರ್ಟಿಯಲ್ಲಿ ಕಂಡ ಕರೀನಾ ಕಪೂರ್‌!

First Published Feb 15, 2021, 6:05 PM IST

ಕರೀನಾ ಕಪೂರ್‌ ತಂದೆ ರಣಧೀರ್‌ ಕಪೂರ್‌ 74 ವರ್ಷದ ಸಂಭ್ರಮ. 15 ಫೆಬ್ರವರಿ 1975ರಂದು ಮುಂಬೈಯಲ್ಲಿ ಜನಿಸಿದ್ದರು ರಣಧೀರ್‌. ಈ ಸಂಧರ್ಭದಲ್ಲಿ ಅವರಿಗೆ ವಿಶ್‌ ಮಾಡಲು ಇಡೀ ಫ್ಯಾಮಿಲಿಯೇ ಅವರ ಮನೆಗೆ ಭೇಟಿ ಕೊಟ್ಟಿದ್ದರು. ಕಳೆದ ವಾರ ನಿಧನರಾದ ರಾಜೀವ್‌ ಕಪೂರ್‌ ಆಗಲಿಕೆಯ ಕಾರಣದಿಂದ ಪಾರ್ಟಿಯಲ್ಲಿ ಉತ್ಸಾಹವಿರಲಿಲ್ಲ. ರಾಜ್‌ ಕಪೂರ್‌ರ ಮೂವರು ಮಕ್ಕಳಲ್ಲಿ ರಿಷಿ ಹಾಗೂ ರಾಜೀವ್‌ ಕಪೂರ್‌ ಒಂದು ವರ್ಷದಲ್ಲೇ ನಿಧನರಾಗಿದ್ದಾರೆ.