ಸೈಫ್ ಮೇಲಿನ ಚೂರಿ ಇರಿತ ಪ್ರಕರಣದ ತನಿಖೆಯಲ್ಲಿ ಅಮಾಯಕ ಯುವಕನ ಬಂಧನ, ಮದುವೆ ರದ್ದತಿ ಮತ್ತು ಉದ್ಯೋಗ ನಷ್ಟಕ್ಕೆ ಕಾರಣವಾಯಿತು. ಘಟನೆಯ ಸತ್ಯಾಸತ್ಯತೆ ಪ್ರಶ್ನಾರ್ಹವಾಗಿದ್ದು, ಸೈಫ್ ಕತಾರ್ನಲ್ಲಿ ಮನೆ ಖರೀದಿಸಿ "ಅಲ್ಲಿ ಸುರಕ್ಷಿತ" ಎಂಬ ಹೇಳಿಕೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸೈಫ್, ಕರೀನಾ ಜೊತೆಗಿನ ಎರಡನೇ ವಿವಾಹ, ಹಿಂದಿನ ಅಮೃತಾ ಸಿಂಗ್ ಜೊತೆಗಿನ ವಿಚ್ಛೇದನ ಚರ್ಚಿತ ವಿಷಯವಾಗಿದೆ.
ಕಳೆದ ಜನವರಿ 15ರಂದು ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಚೂರಿ ಇರಿತದ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿಸಿಟಿವಿ ಫುಟೇಜ್ನಲ್ಲಿ ಆರೋಪಿಯ ಮುಖ ಅಷ್ಟು ಚೆನ್ನಾಗಿ ಕಾಣಿಸುತ್ತಿದ್ದರೂ, ಘಟನೆ ನಡೆದಿರುವುದು ಸೆಲೆಬ್ರಿಟಿಯ ಮನೆಯಲ್ಲಿ ಆಗಿದ್ದರೂ, ಪೊಲೀಸರು ನಿಜವಾದ ಆರೋಪಿಯನ್ನು ಹಿಡಿಯುವ ಬದಲು ಅಮಾಯಕರ ಜೀವ ಹಿಂಡುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಇದಾಗಲೇ 31 ವರ್ಷದ ಆಕಾಶ್ ಕೈಲಾಶ್ ಕನೋಜಿಯಾ ಅನ್ನೋ ಯುವಕನನ್ನು ಅರೆಸ್ಟ್ ಮಾಡಿ ಆತನ ಜೀವನವನ್ನೇ ನರಕದಲ್ಲಿ ತಳ್ಳಿದ್ದಾರೆ ಪೊಲೀಸರು. ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಈತನನ್ನು ಪೊಲಿಸರು ಅರೆಸ್ಟ್ ಮಾಡಿದ್ದರು. ಛತ್ತೀಸ್ಗಢದ ಈ ಯುವಕ ತನ್ನ ಅಜ್ಜಿಯ ಆರೋಗ್ಯ ಹದಗೆಟ್ಟ ಕಾರಣ ಅಲ್ಲಿಗೆ ಹೋದಾಗ, ಪೊಲೀಸರು ಅರೆಸ್ಟ್ ಮಾಡಿದ್ದರು. ಆಮೇಲೆ ಆತನಲ್ಲ ಎಂದು ತಿಳಿದು ಬಿಟ್ಟಿರುವ ಕಾರಣ, ಈಗ ಯುವಕನ ಮದುವೆಯೂ ಕ್ಯಾನ್ಸಲ್ ಆಗಿದೆ, ಇದ್ದ ಉದ್ಯೋಗವೂ ಹೋಗಿದೆ.
ಕೊನೆಗೆ ಎಲ್ಲವೂ ಗುಮಾನಿ ಎನ್ನುವ ರೀತಿಯಲ್ಲಿ ನಡೆದು, ನಿಜವಾಗಿಯೂ ಸೈಫ್ ಮೇಲೆ ದಾಳಿ ಆಗಿದ್ದೇ ಸುಳ್ಳಾ ಎನ್ನುವ ಮಟ್ಟಿಗೆ ಸುದ್ದಿಯಾಗುತ್ತಿದೆ. ಏಕೆಂದರೆ ಘಟನೆಗಳು ಒಂದಕ್ಕೊಂದು ಸಿಂಕ್ ಆಗುತ್ತಲೇ ಇಲ್ಲ. ಎಲ್ಲವೂ ಗೊಂದಲ ಗೊಂದಲ ಎನ್ನಿಸುತ್ತಿದೆ. ಇದರ ನಡುವೆಯೇ ಇದೀಗ ಸೈಫ್ ಅಲಿ ಖಾನ್ ಕತಾರ್ನಲ್ಲಿ ಮತ್ತೊಂದು ಬಂಗಲೆ ಖರೀದಿಸಿದ್ದಾರಂತೆ. ಈ ಬಗ್ಗೆ ಮಾತನಾಡಿರುವ ಅವರು, ನಾನು ಕತಾರ್ನಲ್ಲಿ ಎರಡನೆಯ ಮನೆ ಖರೀದಿಸಿದ್ದೇನೆ, ಅಲ್ಲಿಯೇ ಸೇಫ್ ಎನ್ನಿಸುತ್ತದೆ ಎಂದಿದ್ದಾರೆ. ಮುಂಬೈನಲ್ಲಿ ಇರುವ ಅವರ ಮನೆಯ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.
ಸೈಫ್ ಅಲಿ ಇರಿತದ ಕೇಸ್ಗೆ ರೋಚಕ ಟ್ವಿಸ್ಟ್! 'ಅಕ್ರಮ' ಮಹಿಳೆ ಅರೆಸ್ಟ್- ಯಾರೀಕೆ? ಹಿನ್ನೆಲೆ ಏನು?
ಕಾಶ್ಮೀರದ ಘಟನೆಯ ಬಳಿಕ ಈ ವಿಡಿಯೋ ವೈರಲ್ ಆಗ್ತಿರೋ ಹಿನ್ನೆಲೆಯಲ್ಲಿ, ನೆಟ್ಟಿಗರು ಅದಕ್ಕಾಗಿಯೇ ಸೈಫ್ ಅಲಿ ಹೀಗೆ ಹೇಳ್ತಿರೋದು ಎಂದುಕೊಂಡಂತಿದೆ. ಸರಿಯಾಗಿ ನಿರ್ಧಾರ ಮಾಡಿರುವೆ, ಭಾರತ ಬಿಟ್ಟು ತೊಲಗು, ಬೇಕಿದ್ರೆ ಪಾಕಿಸ್ತಾನಕ್ಕೆ ಹೋಗು ಎನ್ನುತ್ತಿದ್ದಾರೆ. ಭಾರತದ ಸಿನಿಮಾಗಳಲ್ಲಿ ಯಾಕೆ ನಟಿಸ್ತಾ ಇರುವೆ? ಇಲ್ಲಿಯ ಅನ್ನ ಉಂಡು, ಇಲ್ಲಿ ಉಸಿರಾಡಿ ಕತಾರ್ ಸೇಫ್ ಎನ್ನಿಸಿದ್ರೆ, ಮತ್ಯಾಕೆ ಇಲ್ಲಿ ಇನ್ನೂ ಇದ್ಯಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಸೈಫ್ ಅಲಿಯ ಈ ಮಾತು ನೆಟ್ಟಿಗರನ್ನು ಕೆರಳಿಸಿದೆ. ಆದಷ್ಟು ಬೇಗ ನಿನ್ನ ತವರಿಗೆ ಹೋಗು ಎಂದು ಹೇಳುತ್ತಿದ್ದಾರೆ.
ಇನ್ನು ಸೈಫ್ ಅಲಿಯ ಖಾಸಗಿ ವಿಷಯಕ್ಕೆ ಬರುವುದಾದದರೆ, ಬಾಲಿವುಡ್ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಇವರ ಮತ್ತು ಕರೀನಾ ಕಪೂರ್ ಅವರ ಜೋಡಿ. ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.
Kapoor Sisters: ಮಗಳೇ ಅಂದ ಸೈಫ್ ಮೇಲೆನೇ ಲವ್: ಕರೀನಾ ರೆಸ್ಪಾನ್ಸ್ ಹೇಗಿತ್ತೆಂದು ವಿವರಿಸಿದ ಕರಿಷ್ಮಾ ಕಪೂರ್...
