ಸೌತ್ ಇಂಡಸ್ಟ್ರಿ ನಟಿ ಸಾಯಿ ಪಲ್ಲವಿ ಆಗಾಗ ಸುದ್ಧಿಯಾಗುತ್ತಿರುತ್ತಾರೆ. ಸಿನಿಮಾಗಳಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಇದೀಗ ವಿರಾಟ ಪರ್ವಂ ಚಿತ್ರದ ಮೂಲಕ ಸುದ್ಧಿಯಾಗಿದ್ದಾರೆ. 

‘ ವಿರಾಟ ಪರ್ವಂ’ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಜೊತೆ ಸಾಯಿ ಪಲ್ಲವಿ ನಟಿಸಬೇಕಿತ್ತು. ಆದರೆ ಚಿತ್ರತಂಡದಿಂದ ಹೊರ ನಡೆಯುವುದಾಗಿ ಹೇಳಿದ್ದಾರೆನ್ನಲಾಗಿದೆ. 

ಐಪಿಎಸ್ ಅಧಿಕಾರಿಯಾಗಲಿದ್ದಾರೆ ‘ಮಗಳು ಜಾನಕಿ’

ಕೆಲ ದಿನಗಳ ಹಿಂದೆ ಸಾಯಿ ಪಲ್ಲವಿ ವಿರಾಟ ಪರ್ವಂ ಚಿತ್ರಕ್ಕೆ ಒಪ್ಪಿಕೊಂಡಿದ್ದರು.  ಚಿತ್ರ ತಂಡ ಇನ್ನೂ ಶೂಟಿಂಗ್ ಶುರು ಮಾಡಿಲ್ಲ. ಈಗಾಗಲೇ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಶೆಡ್ಯೂಲ್ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟವಾಗುತ್ತಿದೆಯಂತೆ. ಶೂಟಿಂಗ್ ಡೇಟ್ ಪಕ್ಕಾ ಮಾಡದಿದ್ದರೆ ಸಿನಿಮಾದಿಂದ ಹೊರನಡೆಯುವುದಾಗಿ ನಿರ್ದೇಶಕರಿಗೆ ಹೇಳಿದ್ದಾರೆ. ಇದುವರೆಗೂ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

ವಿರಾಟ ಪರ್ವಂ 1992 ರ ಕಾಲಘಟ್ಟದ ಐತಿಹಾಸಿಕ ಸಿನಿಮಾ. ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ, ಪ್ರಿಯಾಮಣಿ, ಟಬು ನಟಿಸುತ್ತಿದ್ದಾರೆ. ಸುಧಾಕರ್ ಚೆರುಕುರಿ ಹಾಗೂ ಸುರೇಶ್ ಬಾಬು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.