ಸೀರಿಯಲ್ ಲೋಕದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿರುವ ಧಾರಾವಾಹಿ ಮಗಳು ಜಾನಕಿ. ಟಿ ಎನ್ ಸೀತಾರಾಂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿ ಕುತೂಹಲದ ಉತ್ತುಂಗಕ್ಕೆ ಬಂದು ನಿಂತಿದೆ.

ಮಗಳು ಜಾನಕಿ ಜೀವನದಲ್ಲಿ ಪ್ರಮುಖ ತಿರುವೊಂದು ಸಿಗಲಿದೆ. ಕಾಟನ್ ಸೀರೆಯುಟ್ಟು, ಅಳುಮುಂಜಿಯಾಗಿ ಕಾಣಿಸಿಕೊಳ್ಳುತ್ತಿದ್ದ ಜಾನಕಿ ಈಗ ಬದಲಾಗಿದ್ದಾರೆ. ಜಾನಕಿ ಐಪಿಎಸ್ ಅಧಿಕಾರಿಯಾಗಿ ಎಂಟ್ರಿ ಕೊಡಲಿದ್ದಾರೆ. ಜಾನಕಿ, ಸಿಎಸ್ ಪಿ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. 

ಮುಂದಿನ ಸೋಮವಾರದಿಂದ ಮಗಳು ಜಾನಕಿ ಹೊಸ ಅಧ್ಯಾಯ ಆರಂಭವಾಗಲಿದೆ. ಪೊಲೀಸ್ ಅಧಿಕಾರಿಯಾಗಲು ಜಾನಕಿ ತಯಾರಿ ನಡೆಸುತ್ತಿದ್ದಾರೆ. ಜಾನಕಿಯ ಹೊಸ ಅಧ್ಯಾಯ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. 

 

ಇನ್ನೊಂದು ಕಡೆ ಸಿಎಸ್ ಪಿ ಮಗ ಮಧುಕರ್ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದಾರೆ. ಚಂಚಲ ವಿದೇಶದಿಂದ ಮನೆಗೆ ವಾಪಸ್ಸಾಗಿದ್ದಾರೆ. ನಿರಂಜನ್ ಬ್ಯುಸಿನೆಸ್ ಕಡೆ ಗಮನ ಹರಿಸುತ್ತಿದ್ದಾರೆ. ಜಾನಕಿ-ನಿರಂಜನ್ ಡಿವೋರ್ಸ್ ಬಗ್ಗೆ ಮಾತನಾಡುತ್ತಿದ್ದರೂ ಇಬ್ಬರೂ ಮುಂದೆ ಹೋಗುತ್ತಿಲ್ಲ. ಒಟ್ಟಿನಲ್ಲಿ  ಮಗಳು ಜಾನಕಿ ಯಲ್ಲಿ ಹೊಸ ಅಧ್ಯಾಯ  ಮೇ 06 ಸೋಮವಾರದಿಂದ ಆರಂಭವಾಗಲಿದೆ.