ಪ್ರೇಮ್ ಸುಂದರಿ ಸಾಯಿ ಪಲ್ಲವಿ ಇತ್ತೀಚಿಗೆ ಚಿತ್ರಮಂದಿರದಲ್ಲಿ ಕದ್ದು ಸಿನಿಮಾ ವೀಕ್ಷಿಸಿದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದೆ. ಮಹೇಶ್ ಬಾಬು(Mahesh Babu) ನಟನೆಯ ಸರ್ಕಾರು ವಾರಿ ಪಾಟ(Sarkaru Vaari Paata) ಸಿನಿಮಾವನ್ನು ಸಾಯಿ ಪಲ್ಲವಿ ವೀಕ್ಷಿಸಿದ್ದಾರೆ.
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ(Sai Pallavi) ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ಸಾಯಿ ಪಲ್ಲವಿ ಹೊಸ ಸಿನಿಮಾಗಾಗಿ ಕನ್ನಡ ಮಾತನಾಡಿ ಕನ್ನಡಿಗರ ಹೃದಯ ಗೆದ್ದಿದ್ದರು. ಇದರ ಬೆನ್ನಲ್ಲೇ ಸಾಯಿ ಪಲ್ಲವಿ ರಕ್ಷಿತ್ ಶೆಟ್ಟಿ(Rakshith Shetty) ನಟನೆಯ ಬಹುನಿರೀಕ್ಷೆಯ 777 ಚಾರ್ಲಿ(777 charlie) ಸಿನಿಮಾದ ತೆಲುಗು ಟ್ರೈಲರ್ ಬಿಡುಗಡೆ ಮಾಡಿ ಕನ್ನಡಿಗರಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ. ಇದೀಗ ಸಾಯಿ ಪಲ್ಲವಿ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ.
ಪ್ರೇಮ್ ಸುಂದರಿ ಸಾಯಿ ಪಲ್ಲವಿ ಇತ್ತೀಚಿಗೆ ಚಿತ್ರಮಂದಿರದಲ್ಲಿ ಕದ್ದು ಸಿನಿಮಾ ವೀಕ್ಷಿಸಿದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದೆ. ಮಹೇಶ್ ಬಾಬು(Mahesh Babu) ನಟನೆಯ ಸರ್ಕಾರು ವಾರಿ ಪಾಟ(Sarkaru Vaari Paata) ಸಿನಿಮಾವನ್ನು ಸಾಯಿ ಪಲ್ಲವಿ ವೀಕ್ಷಿಸಿದ್ದಾರೆ. ಮುಖ ಮುಚ್ಚಿಕೊಂಡು ಸಿನಿಮಾ ವೀಕ್ಷಿಸಿ ಚಿತ್ರಮಂದಿರದಿಂದ ಹೊರ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಸೆಲೆಬ್ರಿಟಿಗಳು ಬರ್ತಾರೆ ಎಂದರೆ ಅಭಿಮಾನಿಗಳು ಮುಗಿಬೀಳುತ್ತಾರೆ. ಸಿನಿಮಾ ವೀಕ್ಷಣೆಗಿಂತ ಅಭಿಮಾನಿಗಳ ನಿಯಂತ್ರಣ ಮಾಡುವುದೇ ಹರಸಾಹಸವಾಗಲಿದೆ. ಹಾಗಾಗಿ ಕದ್ದು ಬಂದು ಸಿನಿಮಾ ವೀಕ್ಷಿಸಿ ಎಂಜಾಯ್ ಮಾಡುತ್ತಾರೆ.
ಇದೀಗ ಸಾಯಿ ಪಲ್ಲವಿ ಕೂಡ ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಸಿನಿಮಾ ವೀಕ್ಷಿಸಿದ್ದಾರೆ. ಆದರೂ ಅಭಿಮಾನಿಗಳು ಗುರುತು ಹಾಡಿದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸಾಯಿ ಪಲ್ಲವಿ ಸದ್ಯ ಸಿನಿಮಾದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಆದರೂ ಬಿಡುವು ಮಾಡಿಕೊಂಡು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದ್ದಾರೆ. ಮಹೇಶ್ ಬಾಬು ಸಿನಿಮಾ ವೀಕ್ಷಿಸಿರುವುದು ಪ್ರಿನ್ಸ್ ಅಭಿಮಾನಿಗಳಲ್ಲಿ ಖುಷಿ ನೀಡಿದೆ.
ಕನ್ನಡ ಮಾತನಾಡಿ ಕನ್ನಡಿಗರ ಹೃದಯ ಗೆದ್ದ ಸಾಯಿ ಪಲ್ಲವಿ; ವಿಡಿಯೋ ವೈರಲ್
ಅಂದಹಾಗೆ ಸಾಯಿ ಪಲ್ಲವಿ ಸಿನಿಮಾ ವೀಕ್ಷಿಸಿದ್ದು ಹೈದರಾಬಾದ್‌ನಲ್ಲಿ. ಶನಿವಾರ್ ರಾತ್ರಿ ಅವರು ಸರ್ಕಾರು ವಾರಿ ಪಾಟ ಸಿನಿಮಾ ನೋಡಿದ್ದಾರೆ. ಮಹೇಶ್ ಬಾಬು ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ಸದ್ಯ ವಿರಾಟ ಪರ್ವಂ ಸಿನಿಮಾ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಈಗಾಗಲೇ ವೈರಲ್ ಆಗಿವೆ. ಸಾಯಿ ಪಲ್ಲವಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಇತ್ತೀಚಿಗಷ್ಟೆ ಸಾಯಿ ಪಲ್ಲವಿ ಗಾರ್ಗಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಹುಟ್ಟುಹಬ್ಬದ ದಿನ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.
Sai Pallavi; ಹುಟ್ಟುಹಬ್ಬದ ದಿನ ಕೆಂಪು ಸೀರೆಯುಟ್ಟು ಬ್ಯಾಗ್ ಹಿಡಿದು ಹೊರಟ 'ಪ್ರೇಮಂ' ಸುಂದರಿ
ಕನ್ನಡದಲ್ಲಿ ಡಬ್ ಮಾಡಿ ಗಮನ ಸೆಳೆದ ಸಾಯಿ ಪಲ್ಲವಿ
ದಕ್ಷಿಣ ಭಾರತ ಸ್ಟಾರ್ ನಟಿ ಸಾಯಿ ಪಲ್ಲವಿ ಗಾರ್ಗಿ ಸಿನಿಮಾಗಾಗಿ ಕನ್ನಡದಲ್ಲಿ ಡಬ್ ಮಾಡಿ ಗಮನ ಸೆಳೆದಿದ್ದಾರೆ. ನಿರೂಪಕಿ, ನಿರ್ದೇಶಕಿ ಶೀತಲ್ ಶೆಟ್ಟಿ, ಸಾಯಿ ಪಲ್ಲವಿ ಅವರಿಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಶೀತಲ್ ಕನ್ನ ಹೇಳಿಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲ ಬಾರಿಗೆ ಸಾಯಿ ಪಲ್ಲವಿ ಕನ್ನಡದಲ್ಲಿ ಡಬ್ ಮಾಡುವ ಮೂಲಕ ಕನ್ನಡ ಬಂದರೂ ಮಾತನಾಡದೇ ಇರುವ ನಟಿಯರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಅಂದಹಾಗೆ ಬಹುನಿರೀಕ್ಷೆಯ ಗಾರ್ಗಿ ಸಿನಿಮಾ ಈ ವರ್ಷದ ಕೊನೆಯಲ್ಲಿ ತೆರೆಗೆ ಬರುತ್ತಿದೆ.
