ಇಡೀ ತೆಲುಗು ಚಿತ್ರರಂಗವೇ ಕಾಯುತ್ತಿದ್ದ 'ಲವ್‌ ಸ್ಟೋರಿ' ಚಿತ್ರ ಕಥೆ ಬಗ್ಗೆ ಟೀಸರ್‌‌ನಲ್ಲಿ ಮೂಲಕ ಸಣ್ಣ ಸುಳಿವು ಸಿಕ್ಕಿದೆ. ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಮೊದಲ ಬಾರಿ ಜೋಡಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಟೀಸರ್‌ ನೋಡಿ ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಚಿತ್ರತಂಡ ಕೇಳಿಕೊಂಡಿದೆ.

ಬಿಲಿಯನ್ ವೀಕ್ಷಣೆ ಮುಟ್ಟಿದ 'ರೌಡಿ ಬೇಬಿ'; ಮಾರಿ 2 ಪೋಸ್ಟರ್‌ನಲ್ಲಿ ಸಾಯಿ ಪಲ್ಲವಿ ಯಾಕಿಲ್ಲ? 

ಟೀಸರ್ ಆರಂಭದಲ್ಲಿ ರೇವಂತ್ ಹಾಗೂ ಮೌನಿಕಾ ಪಾತ್ರದ ಮೂಲಕ ನಾಗ ಮತ್ತು ಪಲ್ಲವಿಯನ್ನು ಪರಿಚಯಿಸಲಾಗಿದೆ. ಫಿಟ್ನೆಸ್‌ ಟ್ರೈನರ್‌ ಅಗಿ ಬ್ಯುಸೆನೆಸ್‌ ಪ್ರಾರಂಭಿಸಲು ರೇವಂತ್ ಶ್ರಮಿಸಿದರೆ, ಐಟಿ ಕೆಲಸ ಪಡೆದು ಜೀವನದಲ್ಲಿ ಸೆಟಲ್ ಆಗಬೇಕು ಎಂಬುದು ಮೌನಿಕಾ ಆಸೆ. ಆದರೆ ಕೆಲಸ ಸಿಗದ ಕಾರಣ ಮೌನಿಕಾ ಡ್ಯಾನ್ಸ್‌ ಕ್ಲಾಸ್‌ಗೆ ಸೇರಿಕೊಳ್ಳುತ್ತಾಳೆ. ಅಲ್ಲಿ ರೇವಂತ್‌ನನ್ನು ಭೇಟಿಯಾಗುತ್ತಿದೆ. ಇಬ್ಬರಲ್ಲಿ ಪ್ರೀತಿ ಹುಟ್ಟಿಕೊಳ್ಳುತ್ತದೆ. 

ಟೀಸರ್‌ ಮೂಲಕವೇ ಚಿತ್ರಕಥೆಯನ್ನು ರಿವೀಲ್ ಮಾಡಿರುವ ಕಾರಣ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. ಇದು ಸಾಧಾರಣ ಲವ್‌ ಸ್ಟೋರಿನೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಪಲ್ಲವಿ ಅಭಿಮಾನಿಗಳು ಮಾತ್ರ ಇನ್ನೂ ವಿಶೇಷತೆ ಹೊಂದಿರುತ್ತದೆ. ಟೀಸರ್‌ನಲ್ಲಿ ರಿವೀಲ್ ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. 

ಅಲ್ಲು ಅರ್ಜುನ್‌ಗೆ ತಂಗಿಯಾಗಲು ಒಪ್ಪಿಕೊಂಡ್ರಾ ಸಾಯಿ ಪಲ್ಲವಿ? 

ಸಾಯಿ ಪಲ್ಲವಿ ಪಾತ್ರ ಆಯ್ಕೆ ಮಾಡಿಕೊಳ್ಳುವುದರಲ್ಲಿ ತುಂಬಾನೇ ಪರ್ಟಿಕ್ಯೂಲರ್. ತಮ್ಮ ಪಾತ್ರ ವೀಕ್ಷಕರ ಮೇಲೆ ಇಂಪ್ಯಾಕ್ಟ್‌ ಬೀರುವಂತೆ ನೋಡಿಕೊಳ್ಳುತ್ತಾರೆ. ಟೀಸರ್‌ನಲ್ಲಿ ಪಲ್ಲವಿ  ಮೇಕಪ್‌ ಇಲ್ಲದೇ ಎಂದಿನಂತೆ ನ್ಯಾಚುರಲ್ ಅಗಿಯೇ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಈ ಚಿತ್ರದಲ್ಲಿ ತುಂಬಾನೇ ಎಕ್ಸಪ್ರೇಷನ್ ನೀಡಿದ್ದಾರೆ, ನೋಡಲು ಆಗುತ್ತಿಲ್ಲವೆಂದು ನೆಟ್ಟಿಗರು ಟೀಸರ್ ವಿಡಿಯೋಗೆ ಕಮೆಂಟ್ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ನಾಗಚೈತನ್ಯ, ಸಾಯಿ ಪಲ್ಲವಿ ಜೋಡಿ ಅದು ಹೇಗೆ ಕಮಾಲ್ ಮಾಡಿದ್ಯೋ ಅಂತ ಚಿತ್ರ ನೋಡಿಯೇ ಹೇಳಬೇಕು.