ಜಪಾನ್​ ಪಬ್​ನಲ್ಲಿ ಆಮೀರ್​​ ಪುತ್ರ ಜುನೈದ್​ ಜೊತೆ ಕುಣಿದು ಕುಪ್ಪಳಿಸಿದ ಸಾಯಿ ಪಲ್ಲವಿ! ಅಸಲಿ ವಿಷಯ ಏನು? 

ಜಪಾನ್​ನ ಪಬ್ ಒಂದರಲ್ಲಿ ಆಮೀರ್​ ಖಾನ್​ ಪುತ್ರ ಜುನೈದ್​ ಖಾನ್​ ಹಾಗೂ ಇತರರ ಜೊತೆ ನ್ಯಾಚುರಲ್​ ಬ್ಯೂಟಿ ಸಾಯಿ ಪಲ್ಲವಿ ಕುಣಿದು ಕುಪ್ಪಳಿಸಿದ್ದು ಅದರ ವಿಡಿಯೋ ವೈರಲ್​ ಆಗಿದೆ. ಆಮೀರ್​​ ಪುತ್ರನ ಜೊತೆ ಸಾಯಿ ಪಲ್ಲವಿ ಇಲ್ಲೇನು ಮಾಡುತ್ತಿದ್ದಾರೆ ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದೂ ಪಬ್​ನಲ್ಲಿ ಕುಣಿಯುವುದು ಎಂದರೆ ಏನೋ ಇರಲೇಬೇಕು ಎನ್ನುತ್ತಿದ್ದಾರೆ. ಅದೂ ಸಾಲದು ಎನ್ನುವುದಕ್ಕೆ ಜಪಾನ್​ಗೆ ಖಾನ್​ ಮಗನ ಜೊತೆ ಹೋಗಿರುವುದು ಏಕೆ ಎನ್ನುವ ಚರ್ಚೆ ಶುರುವಾಗಿದೆ. ತಾವು ಮದುವೆಯಾಗಲಿರುವ ಪುರುಷ ಮುಗ್ದನಾಗಿರಬೇಕು, ಹೆಣ್ಣನ್ನು ಗೌರವಿಸುವಂತವನಾಗಿರಬೇಕು ಎನ್ನುವುದು ಸಾಯಿ ಪಲ್ಲವಿ ಆಸೆ. ಹೀಗಿರುವಾಗ ಇದೇನಿದು ಎನ್ನುತ್ತಿದ್ದಾರೆ. ಜುನೈದ್ ಖಾನ್ ಜೊತೆ ಜಪಾನ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿ ಸಕತ್​ ಚರ್ಚೆ ಶುರುವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಸಲಿಗೆ ಇಲ್ಲಿ ವಿಷಯ ಹಲವರು ಅಂದುಕೊಂಡಂತೆ ಅಲ್ಲ. ಅಸಲಿಗೆ ಇರುವುದೇ ಬೇರೆ. ಅಷ್ಟಕ್ಕೂ ತಮ್ಮ ಮಗ ಜುನೈದ್ ಚಿತ್ರರಂಗಕ್ಕೆ ಬರುವುದು ಯಾವಾಗ ಎಂಬ ಪ್ರಶ್ನೆಗೆ ಆಮೀರ್ ಖಾನ್​ ತುಟಿ ಪಿಟಿಕ್​ ಅಂದಿರಲಿಲ್ಲ. ಆದರೆ ಇದೀಗ ಸಾಯಿ ಪಲ್ಲವಿ ಜೊತೆ ಜಪಾನ್​ನಲ್ಲಿ ಕಾಣಿಸಿಕೊಂಡಿರೋದು ಚಿತ್ರದ ಉದ್ದೇಶಕ್ಕಾಗಿಯೇ ಎನ್ನಲಾಗಿದೆ. ಇನ್ನೂ ಹೆಸರು ಇಡದ ಚಿತ್ರದ ಶೂಟಿಂಗ್​ ಜಪಾನ್​ನಲ್ಲಿ ನಡೆಯುತ್ತಿದೆ. ಈ ಚಿತ್ರದ ಚಿತ್ರೀಕರಣ ಜಪಾನ್ ನಲ್ಲಿ ಭರದಿಂದ ನಡೆಯುತ್ತಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಜುನೈದ್ ಜೊತೆ ಸಾಯಿ ಪಲ್ಲವಿ ಕಾಣಿಸಿಕೊಳ್ತಿದ್ದಾರೆ. ಈ ಮೂಲಕ ಸಾಯಿ ಪಲ್ಲವಿ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ. ಆಮೀರ್​ ಪುತ್ರನೂ ಇದೀಗ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದ್ದು, ಇದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬರಬೇಕಿದೆ.

ಹೆಣ್ಣಿನ ದೌರ್ಜನ್ಯ, ಅಶ್ಲೀಲತೆ ವಿಜೃಂಭಿಸುವ ಚಿತ್ರ ರಶ್ಮಿಕಾಗೆ ಒಳ್ಳೆಯ ಸಂದೇಶ ಕೊಡುವ ಸಿನಿಮಾವಂತೆ!

 ಜುನೈದ್ ಅವರು ಇದಾಗಲೇ ಮಹಾರಾಜ್ ಎಂಬ ಚಿತ್ರದಲ್ಲಿ ನಟಿಸಿದ್ದು, ಅದು ನೆಟ್ ಫ್ಲಿಕ್ಸ್ ನಲ್ಲಿ ಸದ್ಯದಲ್ಲಿಯೇ ಪ್ರಸಾರವಾಗಲಿದೆ. ಚಿತ್ರಮಂದಿರದಲ್ಲಿ ಪ್ರಸಾರ ಆಗ್ತಿರೋ ಮೊದಲ ಚಿತ್ರದ ಚಿತ್ರೀಕರಣ ಜಪಾನ್​ನಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಜಪಾನ್​ನಲ್ಲಿ ಕಳೆದ ಕೆಲ ದಿನಗಳಿಂದಲೂ ಸಿನಿಮಾ ಚಿತ್ರೀಕರಣದಲ್ಲಿದ್ದ ತಂಡ ಇತ್ತೀಚೆಗಷ್ಟೆ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಶೂಟಿಂಗ್ ಸಾಂಗವಾಗಿ ಮುಗಿದ ಖುಷಿಯಲ್ಲಿ ಪಾರ್ಟಿ ಮಾಡಿದೆ. ಪಾರ್ಟಿಯಲ್ಲಿ ನಟಿ ಸಾಯಿ ಪಲ್ಲವಿ ಚಿತ್ರತಂಡದ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ ಅಷ್ಟೇ. 

ಬಹುಭಾಷಾ ನಟಿ ಸಾಯಿ ಪಲ್ಲವಿ ತಮ್ಮ ಸಿಂಪಲ್​ ಬ್ಯೂಟಿಯಿಂದಲೇ (Simple Beauty) ಮನೆ ಮಾತಾಗಿರುವ ತಾರೆ. ಮುಗ್ಧ ಮೊಗದ, ಅಷ್ಟೇ ಮುಗ್ಧ ನಗುವಿನ ಚೆಲುವೆ ಸಾಯಿ ಪಲ್ಲವಿಯನ್ನು ಇಷ್ಟಪಡದವರು ಇಲ್ಲವೆಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಕಡಿಮೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ತುಂಬ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕೆ ಇವರು ಸ್ಪಷ್ಟ ಕಾರಣ ನೀಡಿಲ್ಲ. ಅದೊಮ್ಮೆ ಈಕೆ ಸಿನಿಮಾ ರಂಗವನ್ನೇ ತೊರೆಯಲಿದ್ದಾರೆ ಎಂದೂ ಸುದ್ದಿಯಾಗಿಬಿಟ್ಟಿತು. ವೈದ್ಯೆಯಾಗುವ ಕನಸು ಹೊತ್ತಿದ್ದ ನಟಿ ಸಾಯಿ ಪಲ್ಲವಿ, ಸಿನಿಮಾ ರಂಗದಿಂದ ದೂರವಾಗಿ ವೈದ್ಯ ವೃತ್ತಿಯನ್ನು ಕೈಗೊಳ್ಳಲಿದ್ದಾರೆ ಎಂದೂ ಕೇಳಿಬಂದಿತ್ತು. ಆದರೂ ಅವರು ನಟನೆಯನ್ನು ಮುಂದುವರೆಸಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ನೀಡುವ ನಟರನ್ನು ಸೆಳೆಯುವ ಯಾವುದೇ ಕಮರ್ಷಿಯಲ್ ಚಿತ್ರಗಳಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿಲ್ಲ. ಮಲಯಾಳಂ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸಾಯಿ ಪಲ್ಲವಿ ತಮ್ಮ ವೈಯಕ್ತಿಕ ಜೀವನದಲ್ಲೂ ವಿಭಿನ್ನರಾಗಿದ್ದಾರೆ. 

ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್ ಕುಮಾರ್​ಗೆ ಮಿದುಳಿಗೆ ಸರ್ಜರಿ ಆಯ್ತಾ? ನಟ ಈಗ ಹೇಗಿದ್ದಾರೆ?

Scroll to load tweet…