ತೆಲುಗು ಸಿನಿರಂಗ ಕಡೆಗಣಿಸುತ್ತಿದ್ದಾರಾ ಸಮಂತಾ: ಪುಷ್ಪ-2 ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ ಸ್ಯಾಮ್?
ತೆಲುಗು ಸಿನಿರಂಗ ಕಡೆಗಣಿಸುತ್ತಿದ್ದಾರಾ ಸಮಂತಾ ಎನ್ನುವ ಮಾತು ಕೇಳಿ ಬರುತ್ತಿದೆ. ಪುಷ್ಪ-2 ಸಿನಿಮಾ ರಿಜೆಕ್ಟ್ ಮಾಡಿದ ಸಮಂತಾ ಬಗ್ಗೆ ಈ ಮಾತು ಕೇಳಿಬರುತ್ತಿದೆ.
ಟಾಲಿವುಡ್ ಸ್ಟಾರ್ ನಟಿ ಸಮಂತಾ ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸದ್ಯ ಚಿಕಿತ್ಸೆಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅನೇಕ ತಿಂಗಳ ಬಳಿಕ ಸಮಂತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮುಂಬೈನಲ್ಲಿರುವ ಸಮಂತಾ ಹಿಂದಿಯ ವೆಬ್ ಸೀರಿಸ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸಿಟಾಡೆಲ್ ಚಿತ್ರೀಕರಣದಲ್ಲಿ ನಿರತರಾಗಿರುವ ಸಮಂತಾ ಮುಂಬೈನಲ್ಲಿ ಖರೀದಿಸಿದ್ದ ಹೊಸ ಮನೆಯಲ್ಲೇ ವಾಸವಾಗಿದ್ದಾರೆ.
ಈ ನಡುವೆ ಸಮಂತಾ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಫ್ಯಾಮಿಲಿ ಮ್ಯಾನ್ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಮಂತಾ ಹಿಂದಿ ಕಡೆ ಮುಖ ಮಾಡಿದ್ದಾರೆ. ಸಕ್ಸಸ್ ಸಿಗುತ್ತಿದ್ದಂತೆ ತೆಲುಗು ಸಿನಿಮಾರಂಗವನ್ನು ಕಡೆಗಣಿಸಿದ್ರಾ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಮಾತಿಗೆ ಪುಷ್ಠಿ ನೀಡುವಂತೆ ಸಮಂತಾ ಭಾರಿ ನಿರೀಕ್ಷೆಯ ಪುಷ್ಪ-2 ಸಿನಿಮಾದ ಆಫರ್ ರಿಜೆಕ್ಟ್ ಮಾಡಿರುವುದು. ಪುಷ್ಪ ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಸಮಂತಾ ಪಾರ್ಟ್-2ನಲ್ಲಿ ನಟಿಸಲು ಒಲ್ಲೆ ಎಂದಿದ್ದಾರಂತೆ. ಹೂಂ ಅಂತೀಯಾ ಮಾವ...ಎಂದು ಕುಣಿದು ಮೋಡಿ ಮಾಡಿದ್ದ ಸಮಂತಾ ಪಾರ್ಟ್ 2 ನಲ್ಲಿ ನಟಿಸಲು ನೋ ಎಂದಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ.
ನಿರ್ದೇಶಕ ಸುಕುಮಾರ್ ಈ ಮೊದಲು ಪಾರ್ಟ್-2ನಲ್ಲೂ ಒಂದು ಐಟಂ ಹಾಡು ಇದೆ ಎಂದು ಹೇಳಿದ್ದರು. ಸಮಂತಾ ಅವರಿಗೆಯೇ ಆಫರ್ ಮಾಡಲಾಗಿತ್ತಂತೆ. ಆದರೀಗ ಸಮಂತಾ ನೋ ಎಂದಿರುವುದು ಚಿತ್ರತಂಡದ ಅಸಮಾಧಾನಕ್ಕೂ ಕಾರಣವಾಗಿದೆ ಎನ್ನಲಾಗಿದೆ. ಇದೊಂದೆ ಅಲ್ಲ ಸಮಂತಾ ಈಗಾಗಲೇ ವಿಜಯ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೂಡ ಅರ್ಧಕ್ಕೆ ನಿಂತಿದೆ. ಸಮಂತಾ ಡೇಟ್ ಸಿಗದೇ ಸಿನಿಮಾತಂಡ ಸುಸ್ತಾಗಿದೆಯಂತೆ. ಈ ನಡುವೆ ಪುಷ್ಪ-2 ರಿಜೆಕ್ಟ್ ಮಾಡಿರುವುದು ಅಚ್ಚರಿ ಮೂಡಿಸಿದೆ. ಹಾಗಾಗಿ ಸಮಂತಾ ಟಾಲಿವುಡ್ ಅನ್ನು ಕಡೆಕಣಿಸುತ್ತಿದ್ದಾರಾ ಎನ್ನುವ ಮಾತು ಕೇಳಿ ಬರುತ್ತಿದೆ.
ಹೆಲ್ತ್ ಅಪ್‌ಡೇಟ್ ನೀಡಿದ ಸಮಂತಾ; ಚಿಕಿತ್ಸೆ ಬಗ್ಗೆ ಹೇಳಿದ್ದೇನು?
ಪುಷ್ಪ ಮೊದಲ ಭಾಗದಲ್ಲಿ ಸಮಂತಾ ಡಾನ್ಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂ ಅಂತಿಯಾ ಮಾವ ಹಾಡು ಗಮನ ಸೆಳೆದಿತ್ತು. ಈ ಬಗ್ಗೆ ಸಮಂತಾ ಮಾತನಾಡಿ, ಜನರು ತನ್ನ ದಶಕದ ಕೆಲಸದ ಬಗ್ಗೆ ಮಾತನಾಡುತ್ತಿಲ್ಲ, ಈ ಹಾಡಿನ ಬಗ್ಗೆ ಮತನಾಡುತ್ತಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ಮತ್ತೆ ಐಟಂ ಹಾಡಿಗೆ ಹೆಜ್ಜೆ ಹಾಕಿದ್ರೆ ಅದಕ್ಕೆ ಫಿಕ್ಸ್ ಆಗಬಹುದು ಎನ್ನುವ ಕಾರಣಕ್ಕೆ ಸಮಂತಾ ಪಾರ್ಟ್-2 ಅನ್ನು ರಿಜೆಕ್ಟ್ ಮಾಡಿರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಸಮಂತಾನೇ ಸ್ಪಷ್ಟನೆ ನೀಡಬೇಕಿದೆ.
ರಾಮ್ ಚರಣ್ಗೆ ಇಷ್ಟವಿಲ್ಲದಿದ್ರೂ ಲಿಪ್ಲಾಕ್ ಮಾಡಿದ್ರಾ ಸಮಂತಾ?
ಪಳನಿ ಮುರುಗನ್ ದೇವಸ್ಥಾನಕ್ಕೆ ಹರಕೆ ತೀರಿಸಿದ ಸಮಂತಾ
ನಟಿ ಸಮಂತಾ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ. ಇತ್ತೀಚಿಗೆ ಸಮಂತಾ ಆಧ್ಯಾತ್ಮಿಕ ಕಡೆ ಹೆಚ್ಚು ವಾಲುತ್ತಿದ್ದಾರೆ. ಇದೀಗ ಸಮಂತಾ ತಮಿಳುನಾಡಿನ ಪಳನಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ. ದೇವಸ್ಥಾನದ ಸುಮಾರು 600 ಮೆಟ್ಟಿಗಳನ್ನು ಸಮಂತಾ ಹತ್ತಿ ಕರ್ಪೂರ ಹಚ್ಚಿ ದೇವರ ದರ್ಶನ ಪಡೆದರು. ಸಮಂತಾ ಜೊತೆಗೆ ಸ್ನೇಹಿತರು ಮತ್ತು ನಿರ್ದೇಶಕರು ಸೇರಿದಂತೆ ಸಿನಿಮಾತಂಡ ಕೂಡ ಜೊತೆಯಲ್ಲಿತ್ತು. ದೇವರ ದರ್ಶನ ಪಡೆದು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ರು. ಸಮಂತಾ ಸದ್ಯ ಶಾಕುಂತಲಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.