ಏನು, ಮಲೈಕಾ ಅರೋರಾ ಮತ್ತೆ ಪ್ರೆಗ್ನೆಂಟ್ ಹಾ..! ತಂದೆಯಾಗ್ತಿದ್ದಾರೆ ಅರ್ಜುನ್ ಕಪೂರ್?

ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತೆ ತಾಯಿ ಆಗ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅರ್ಜುನ್ ಕಪೂರ್ ತಂದೆ ಆಗ್ತಿದ್ದಾರೆ ಎನ್ನಲಾಗಿದೆ.   

Rumours on Malaika Arora and Arjun Kapoor To Be Parents Soon sgk

ಬಾಲಿವುಡ್ ನಟಿ ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಮೊದಲು ಕದ್ದು ಮುಚ್ಚಿ ಓಡಾಡುತ್ತಿದ್ದ ಈ ಜೋಡಿ ಇದೀಗ ರಾಜರೋಷವಾಗಿ ಸುತ್ತಾಡುತ್ತಿದ್ದಾರೆ. ಇಬ್ಬರೂ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಕಳೆದ ಒಂದು ವರ್ಷದಿಂದ ಕೇಳಿಬರುತ್ತಿದೆ. ಆದರೆ ಇದೂವರೆಗೂ ಇಬ್ಬರೂ ಮದುವೆಯಾಗಿಲ್ಲ. ಹಾಗಂತ ಇಬ್ಬರೂ ದೂರ ದೂರ ಇಲ್ಲ. ಸದಾ ಜೊತೆಯಲ್ಲೇ ಇರುತ್ತಾರೆ, ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿರುತ್ತಾರೆ. ಇದೀಗ ಮಲೈಕಾ ಮತ್ತು ಅರ್ಜುನ್ ಕಪೂರ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಮಲೈಕಾ ಮತ್ತೆ ತಾಯಿಯಾಗುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಮಲೈಕಾ ಅರೋರಾ ಪ್ರಿಯತಮ ಅರ್ಜುನ್ ಕಪೂರ್ ಮಗುವಿಗೆ ತಾಯಿ ಆಗ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. 

ಮಲೈಕಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಸಂತಸದ ವಿಚಾರವನ್ನು ಸದ್ಯದಲ್ಲೇ ಶೇರ್ ಮಾಡುತ್ತಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ ಅಂತ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಮಲೈಕಾ ಅರೋರಾ ಅವರಿಗೆ ಈಗಾಗಲೇ ಒಬ್ಬ ಮಗನಿದ್ದಾನೆ. ಮೊದಲ ಪತಿ ಅರ್ಜಾನ್ ಖಾನ್ ಮತ್ತು ಮಲೈಕಾ ಮಗ ಅರ್ಹಾನ್ ಖಾನ್‌ಗೆ 20 ವರ್ಷ. ಇದೀಗ ಅರ್ಜುನ್ ಕಪೂರ್ ಜೊತೆ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಸದ್ಯ ಅರ್ಜುನ್ ಮತ್ತು ಮಲೈರಾ ಅರೋರಾ ಕುಟುಂಬಕ್ಕೆ ಮಾತ್ರ ತಿಳಿದಿದೆ. ಅಕ್ಟೋಬರ್ ತಿಂಗಳಲ್ಲಿ ಇಬ್ಬರೂ ವಿದೇಶಕ್ಕೆ ಹಾರಿದ್ದರು. ಆಗ ಈ ಸಂತಸದ ವಿಚಾರವನ್ನು ಕುಟುಂಬಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ. 

ಚೈಯ್ಯಾ ಚೈಯ್ಯಾಯಿಂದ ಅಪ್‌ ಜೈಸಾ ಕೋಯಿ: ಯುವಕರ ನಿದ್ರೆಗೆಡಿಸಿದ ಮಲೈಕಾ ಐಟಂ ನಂಬರರ್ಸ್

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಇಬ್ಬರೂ ತುಂಬಾ ಸಂತೋಷವಾಗಿದ್ದಾರೆ. ನಟಿ ಈಗಾಗಲೇ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮತ್ತೆ ತಾಯ್ತನ ಆನಂದಿಸಲು ಸಜ್ಜಾಗಿದ್ದಾರೆ. ಆದರೆ ಈ ಬಗ್ಗೆ ಮಲೈಕಾ ಅಥವಾ ಅರ್ಜುನ್ ಕಪೂರ್ ಕಡೆಯಿಂದ ಅಧಿಕೃತವಾಗಿಲ್ಲ. ಮಲೈಕಾ ಮಾತ್ರ ಆಗಾಗ ಜಿಮ್ ಮತ್ತು ಯೋಗ ಅಂತ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಮಲೈಕಾ ನಿಜಕ್ಕೂ ಪ್ರೆಗ್ನೆಂಟ್‌ ಆಗಿದ್ದಾರಾ ಅಥವಾ ಇದು ಕೇವಲ ಗಾಳಿ ಸುದ್ದಿನಾ ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.  

ಮಲೈಕಾ ಅರೋರಾ Yes ಅಂದಿದ್ದು ಅರ್ಜುನ್ ಕಪೂರ್‌ಗಲ್ಲ: ಮತ್ಯಾರಿಗೆ?

ಇತ್ತೀಚಿಗಷ್ಟೆ ಮಲೈಕಾ ನಾನು ಎಸ್ ಹೇಳಿದೆ ಎನ್ನುವ ಪೋಸ್ಟ್ ಹಾಕಿದ್ದರು. ಮಲೈಕಾ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮಲೈಕಾ ಮತ್ತು ಅರ್ಜುನ್ ಇಬ್ಬರೂ ಮದುವೆಗೆ ಸಜ್ಜಾದ್ರು ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಈ ಪೋಸ್ಟ್ ಹಾಕಿ ಕೆಲವೇ ದಿನಕ್ಕೆ ಎಸ್ ಅಂತ ಹೇಳಿದ್ದು ರಿಯಾಲಿಟಿ ಶೋಗೆ ಎಂದು ಬಹಿರಂಗ ಪಡಿಸಿದ್ದರು. ಈ ಮೂಲಕ ಮದುವೆ ವದಂತಿಗೆ ತೆರೆ ಎಳೆದಿದ್ದರು. ಇದೀಗ ಮಗು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.   
 

Latest Videos
Follow Us:
Download App:
  • android
  • ios