RRR Movie: ಸಾಹಸಮಯ ಟ್ರೇಲರ್ ರಿಲೀಸ್ಗೆ ಹೊಸ ದಿನಾಂಕ ಹಂಚಿಕೊಂಡ ಜ್ಯೂ.ಎನ್‌ಟಿಆರ್
ನಟ ಜ್ಯೂ.ಎನ್‌ಟಿಆರ್ 'ಭಾರತದ ಅತಿ ದೊಡ್ಡ ಸಾಹಸಮಯ ಚಲನಚಿತ್ರದ ಟ್ರೇಲರ್ ನೋಡಲು ಸಿದ್ಧರಾಗಿ. ಡಿಸೆಂಬರ್ 9ಕ್ಕೆ 'ಆರ್‌ಆರ್‌ಆರ್' ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡು ಚಿತ್ರದ ಪೋಸ್ಟರ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಎಸ್.ಎಸ್.ರಾಜಮೌಳಿ (SS Rajamouli) ನಿರ್ದೇಶನದ ಜ್ಯೂ.ಎನ್‌ಟಿಆರ್ (Jr.NTR) ಮತ್ತು ರಾಮ್ ಚರಣ್ (Ram Charan) ಕಾಂಬಿನೇಷನ್‌ನ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್' (RRR) (ರೈಸ್–ರೋರ್–ರಿವೋಲ್ಟ್) ಚಿತ್ರ ಈಗಾಗಲೇ ಸಿನಿರಸಿಕರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 'ಆರ್‌ಆರ್‌ಆರ್' ಚಿತ್ರದ ಟ್ರೇಲರ್ (Tariler) ಡಿಸೆಂಬರ್ 3ರಂದು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಟ್ರೇಲರ್ ರಿಲೀಸ್ ಆಗಿಲ್ಲ. ಈ ಬಗ್ಗೆ 'ಅನಿರೀಕ್ಷಿತ ಕಾರಣಗಳಿಂದಾಗಿ ನಾವು ಡಿ.3ರಂದು 'ಆರ್‌ಆರ್‌ಆರ್' ಟ್ರೇಲರ್ ಬಿಡುಗಡೆ ಮಾಡುತ್ತಿಲ್ಲ. ಹೊಸ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುತ್ತೇನೆ' ಎಂದು 'ಆರ್‌ಆರ್‌ಆರ್' ಚಿತ್ರದ ಅಧಿಕೃತ ಟ್ವಿಟರ್ (Twitter) ಖಾತೆ ಮೂಲಕ ಚಿತ್ರತಂಡ ತಿಳಿಸಿತ್ತು.
ದೇಶದಲ್ಲಿ ಕೋವಿಡ್ (Covid) ಪ್ರಕರಣಗಳು ನಿಧಾನವಾಗಿ ಹೆಚ್ಚುತ್ತಿದ್ದು, ಈ ಕಾರಣಕ್ಕೆ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲು ಚಿತ್ರತಂಡ ನಿರ್ಧರಿಸಿದ್ದು, ಹೀಗಾಗಿ ಟ್ರೇಲರ್ ರಿಲೀಸ್ ಮಾಡಿಲ್ಲ ಎನ್ನುವ ಮಾತು ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡಿತ್ತು. ಆದರೆ, ಇದೀಗ ಚಿತ್ರತಂಡ ಇದಕ್ಕೆ ಸ್ಪಷ್ಟನೆ ನೀಡಿದೆ. ಡಿಸೆಂಬರ್ 9ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗುತ್ತಿದ್ದು, ಈ ವಿಚಾರ ಸಿನಿರಸಿಕರಿಗೆ ಖುಷಿ ನೀಡಿದೆ. ಈ ಬಗ್ಗೆ ನಟ ಜ್ಯೂ.ಎನ್‌ಟಿಆರ್ 'ಭಾರತದ ಅತಿ ದೊಡ್ಡ ಸಾಹಸಮಯ ಚಲನಚಿತ್ರದ ಟ್ರೇಲರ್ ನೋಡಲು ಸಿದ್ಧರಾಗಿ. ಡಿಸೆಂಬರ್ 9ಕ್ಕೆ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಎಂದು ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಬರೆದುಕೊಂಡು ಚಿತ್ರದ ಪೋಸ್ಟರ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
'ಆರ್‌ಆರ್‌ಆರ್' ಚಿತ್ರದ ಹೊಸ ಹಾಡು ರಿಲೀಸ್: ರಾಮ್ ಚರಣ್, ಜ್ಯೂ.ಎನ್‌ಟಿಆರ್ ಜಬರ್ದಸ್ತ್ ಡ್ಯಾನ್ಸ್
ಈಗಾಗಲೇ 'ಆರ್‌ಆರ್‌ಆರ್' ಚಿತ್ರದ ಫಸ್ಟ್‌ಲುಕ್, ಪೋಸ್ಟರ್, ಪ್ರೋಮೋ ಹಾಗೂ ಹಾಡುಗಳು ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಸಂಚಲನವನ್ನುಂಟು ಮಾಡಿದೆ. ಇತ್ತೀಚೆಗಷ್ಟೇ 'ಆರ್‌ಆರ್‌ಆರ್' ಚಿತ್ರದ ಗ್ಲಿಂಪ್ಸ್ (Glimpse) ವಿಡಿಯೋ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ (Youtube) ಭರ್ಜರಿ ವೀಕ್ಷಣೆ ಪಡೆದಿತ್ತು.ಗ್ಲಿಂಪ್ಸ್ ವಿಡಿಯೋದಲ್ಲಿ (Glimpse Video) ಅಪ್ಪಟ ದೇಶಿ ಸಿನಿಮಾದಂತಿರುವ ಪಾತ್ರಗಳು ಸಿನಿರಸಿಕರ ಮನಸೆಳೆದಿತ್ತು. ಡಿವಿವಿ ದಾನಯ್ಯ (DVV Danayya) ಚಿತ್ರವನ್ನು ನಿರ್ಮಾಣ ಮಾಡಿದ್ದು, ಈ ಚಿತ್ರವು 1920ನೇ ಇಸವಿಯ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಜೂನಿಯರ್ ಎನ್‌ಟಿಆರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು 'ಆರ್‌ಆರ್‌ಆರ್' ಟ್ರೇಲರ್ ರಿಲೀಸ್ ಆದ ನಂತರ ಚಿತ್ರದ ಪ್ರಮೋಷನ್‌ಗಳನ್ನು ನಡೆಸುವುದಾಗಿ ಚಿತ್ರತಂಡ ತಿಳಿಸಿದೆ. ವಿಶೇಷವಾಗಿ ಕರ್ನಾಟಕದಲ್ಲಿ (Karnataaka) ಗ್ರ್ಯಾಂಡ್ ಆಗಿ ಪ್ರೀ-ರಿಲೀಸ್ ಇವೆಂಟ್ ನಡೆಸಲು ಚಿತ್ರತಂಡ ನಿರ್ಧರಿಸಿದ್ದು, ಈ ಬಗ್ಗೆ ರಾಜಮೌಳಿ ಇತ್ತೀಚೆಗೆ ತಿಳಿಸಿದ್ದರು. ಚಿತ್ರದ 'ಜನನಿ' (Janani) ಸಾಂಗ್ ರಿಲೀಸ್ ಮಾಡುವುದಕ್ಕೆ ಬೆಂಗಳೂರಿಗೆ ಆಗಮಿಸಿ, ಎಲ್ಲರಿಗೂ ಸಂದರ್ಶನ ಕೊಡುತ್ತೇನೆ. ಕಂಪ್ಲೀಟ್ ಟೀಮ್ ಜೊತೆಗೆ ಮುಂದಿನ ತಿಂಗಳು ಕರ್ನಾಟಕಕ್ಕೆ ಬರುತ್ತೇವೆ. 'ಆರ್‌ಆರ್‌ಆರ್' ಸಿನಿಮಾದಲ್ಲಿ ಎಲ್ಲಾ ಆ್ಯಕ್ಷನ್‍ಗಳು ಸೂಪರ್ ಆಗಿದೆ. ಎಮೋಷನಲ್ ದೃಶ್ಯಗಳು ತುಂಬಾ ಇದೆ. ಬ್ಯಾಂಗ್ ಗ್ರೌಂಡ್ ಮ್ಯೂಸಿಕ್ ಸಹ ಚೆನ್ನಾಗಿದೆ. ಇವತ್ತು ನಿಮ್ಮ ಜೊತೆ ಅನುಭವ ಶೇರ್ ಮಾಡಿದಕ್ಕೆ ಖುಷಿಯಾಗುತ್ತಿದೆ ಎಂದು ಸಿನಿಮಾ ಕುರಿತಾಗಿ ಕೆಲವು ಮಾಹಿತಿಯನ್ನು ರಾಜಮೌಳಿ ತಿಳಿಸಿದ್ದರು.
ಜ್ಯೂ.NTR ಹಣೆಯಿಂದ ರಕ್ತ, ರಾಮ್ ಚರಣ್ ಪೊಲೀಸ್: RRR ಚಿತ್ರದ ಸಣ್ಣ ತುಣುಕು
ಡಿವಿವಿ ಎಂಟರ್‌ಟೈನ್ಮೆಂಟ್ (DVV Entertainment) ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಬಿಗ್ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ (M.M. Keeravaani) ಸಂಗೀತ ಸಂಯೋಜಿಸಿದ್ದಾರೆ. ಇನ್ನು ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಒಲಿವಿಯಾ ಮೋರಿಸ್, ಸಮುದ್ರಕನಿ, ಅಲಿಸನ್ ಡೂಡಿ ಹಾಗೂ ರೇ ಸ್ಟೀವನ್ಸನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಜನವರಿ 7ರಂದು 'ಆರ್‌ಆರ್‌ಆರ್' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.