ಈ ಬಾರಿಯೂ ಆಸ್ಕರ್ ವೇದಿಕೆ ಮೇಲೆ ಮಿಂಚಿದ ನಾಟು ನಾಟು! RRRಗೆ ಸಂದಿತು ವಿಶೇಷ ಗೌರವ
ಈ ಬಾರಿಯೂ ಆಸ್ಕರ್ ವೇದಿಕೆ ಮೇಲೆ ಮಿಂಚಿದ ನಾಟು ನಾಟು! RRRಗೆ ಸಂದಿತು ವಿಶೇಷ ಗೌರವ. ವೇದಿಕೆಯ ಮೇಲೆ ನಡೆದಿದ್ದೇನು?
2022ರಲ್ಲಿ ರಿಲೀಸ್ ಆದ ‘ಆರ್‌ಆರ್‌ಆರ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರ ದಾಖಲೆ ಮೇಲೆ ದಾಖಲೆ ಸೃಷ್ಟಿ ಮಾಡುತ್ತಲೇ ಇದೆ. ವಿದೇಶಿ ನೆಲದಲ್ಲಿ ಈ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ. ‘ಗೋಲ್ಡನ್ ಗ್ಲೋಬ್’ ಸೇರಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಿನಿಮಾ ಗೆದ್ದಿದೆ. ಈ ಚಿತ್ರದ ‘ನಾಟು ನಾಟು..’ ಹಾಡಿಗೆ ಕಳೆದ ವರ್ಷ ಆಸ್ಕರ್ ಅವಾರ್ಡ್ ಸಿಕ್ಕಿದೆ. ಆಗಿದೆ. ನಾಟು ನಾಟುಗೆ ಆಸ್ಕರ್ ಪ್ರಶಸ್ತಿಯೇ ಬಂದಿದೆ.
ಚಂದ್ರಬೋಸ್ ಸಾಹಿತ್ಯ ಬರೆದಿರುವ 'ನಾಟು ನಾಟು' ಹಾಡನ್ನು ಗಾಯಕರಾದ ರಾಹುಲ್ ಸಿಪ್ಲಿಗಿಂಜ್ ಹಾಗೂ ಕೀರವಾಣಿಯವರ ಮಗ ಕಾಲ ಭೈರವ ಹಾಡಿದ್ದರು. 'ನಾಟು ನಾಟು' ಹಾಡು ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲಿಯೇ ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ಕಥೆ ಸ್ವಾತಂತ್ರ್ಯಪೂರ್ವ ಕಾಲಘಟ್ಟದ್ದು. ಆ ಕಾಲದಲ್ಲಿದ್ದ ಜಾನಪದ ಮಾದರಿಯ ಹಾಡನ್ನೇ ಟಪ್ಪಾಂಗುಚ್ಚಿ ಸ್ಟೈಲ್‌ನಲ್ಲಿ ಬಹಳ ಸೊಗಸಾಗಿ ಪ್ರೆಸೆಂಟ್ ಮಾಡಿದ್ದು, ಈ ಹಾಡಿನ ಹೆಚ್ಚುಗಾರಿಕೆ. ಈ ಹಾಡಿಂದು ಒಂದು ತೂಕವಾದರೆ, ಅದಕ್ಕೆ ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ಹಾಕಿರೋ ಜಬರ್ದಸ್ತ್ ಸ್ಟೆಪ್ಸ್‌ಗೆ ಮತ್ತೊಂದು ತೂಕ. ಈ ಇಬ್ಬರೂ ದಿಗ್ಗಜ ನಟರ ಅದ್ಭುತ ಸ್ಟೆಪ್ಸ್ ಹಾಡಿನ ಹೆಚ್ಚುಗಾರಿಕೆಯನ್ನು ಹೆಚ್ಚಿಸಿದೆ. ಜಗತ್ಪ್ರಸಿದ್ಧವಾಗುವಂತೆ ಮಾಡಿದ್ದಾರೆ.
ಆಸ್ಕರ್ನಲ್ಲಿ 87 ವರ್ಷಗಳ ದಾಖಲೆ ಮುರಿದ 22 ವರ್ಷದ ಗಾಯಕಿ: ವಿಜೇತರ ಫುಲ್ ಡಿಟೇಲ್ಸ್ ಇಲ್ಲಿದೆ...
ಇದೀಗ ನಾಟು ನಾಟುಗೆ ಪ್ರಶಸ್ತಿ ಬಂದು ವರ್ಷವಾದರೂ, ವಿಶೇಷ ಏನೆಂದ್ರೆ ಈ ಬಾರಿಯ ಆಸ್ಕರ್ ವೇದಿಕೆಯಲ್ಲಿಯೂ ನಾಟು ನಾಟು ಮತ್ತು ಆರ್ಆರ್ಆರ್ಗೆ ವಿಶೇಷ ಗೌರವ ಸಂದಿದೆ. 96ನೇ ಸಾಲಿನಲ್ಲಿ ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ಅಮೆರಿಕದ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ ‘ಆರ್‌ಆರ್‌ಆರ್’ ಚಿತ್ರಕ್ಕೆ ವಿಶೇಷ ಗೌರವ ಸಲ್ಲಿಸಲಾಗಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಇದಿಷ್ಟೇ ಅಲ್ಲದೇ, ಆ್ಯಕ್ಷನ್ ಸಿನಿಮಾಗಳಲ್ಲಿ ಹಿರೋಗಳು ಎಷ್ಟು ಕಷ್ಟಪಡುತ್ತಾರೆ ಎಂಬುದಕ್ಕೆ ವಿಶೇಷ ಗೌರವ ಅರ್ಪಿಸಲು ಕೂಡ ಕೆಲವು ಚಿತ್ರಗಳನ್ನು ವಿಡಿಯೋ ಮೂಲಕ ವೇದಿಕೆ ಮೇಲೆ ತೋರಿಸಲಾಗಿತ್ತು. ಅದರಲ್ಲಿ ‘ಆರ್‌ಆರ್‌ಆರ್’ ಚಿತ್ರದ ಆ್ಯಕ್ಷನ್ ದೃಶ್ಯ ಕೂಡ ಇದ್ದುದು ತಂಡಕ್ಕೆ ಇನ್ನಷ್ಟು ಖುಷಿ ಕೊಟ್ಟಿದೆ. ರಾಜಮೌಳಿ ನಿರ್ದೇಶನದ, ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ನಟನೆಯ ‘ಆರ್‌ಆರ್‌ಆರ್’ ಚಿತ್ರ ಮಾಡಿದ ದಾಖಲೆಗಳು ಹಲವು. ಈ ವರ್ಷವೂ ಆಸ್ಕರ್ ಅವಾರ್ಡ್ನಲ್ಲಿ ‘ಆರ್‌ಆರ್‌ಆರ್’ ಚಿತ್ರವನ್ನು ನೆನಪಿಸಿಕೊಂಡಿದ್ದು ವಿಶೇಷ.
ಇದೇ ಸಂದರ್ಭದಲ್ಲಿ ನಾಟು ನಾಟು ಹಾಡಿನ ಕುರಿತು ಈ ಹಿಂದೆ ಸಾಹಿತ್ಯ ಬರೆದ ಚಂದ್ರಬೋಸ್ ಅವರು ಆಡಿದ ಮಾತುಗಳು ವೈರಲ್ ಆಗುತ್ತಿವೆ.ಆರ್‌ಆರ್‌ಆರ್ ಚಿತ್ರಕ್ಕೆ ನಾಟು ನಾಟು ಹಾಡು ಬರೆಯಲು ಎಷ್ಟು ಕಷ್ಟವಾಗಿತ್ತು ಎಂದು ಪ್ರಶ್ನೆ ಮಾಡಿದಾಗ 'ತೆಲುಗು ಭಾಷೆಯಲ್ಲಿ ಒಟ್ಟು 56 ಅಕ್ಷರಗಳಿವೆ. ನಮ್ಮ ಭಾಷೆಯಲ್ಲಿ ತುಂಬಾ ಪದಗಳಿದೆ, ತುಂಬಾ ಎಕ್ಸ್‌ಪ್ರೆಷನ್ ಮತ್ತು ಫೀಲಿಂಗ್‌ಗಳಿಂದ ತುಂಬಿಕೊಂಡಿವೆ. ತೆಲುಗು ಮ್ಯೂಸಿಕಲ್ ಭಾಷೆಯಾಗಿದ್ದು, ತುಂಬಾ ಸಾಹಿತ್ಯಗಳನ್ನು ಹೊಂದಿದೆ. ಸಾಮಾನ್ಯ ಪದ ಬರೆದರೂ ಸಂಗೀತದ ತರ ಇರುತ್ತೆ. ಭಾಷೆ ಗೊತ್ತಿರುವವರು ಹಾಡು ಇಷ್ಟ ಪಡುತ್ತಾರೆ. ಭಾಷೆ ಗೊತ್ತಿಲ್ಲದವರು ಅದರಲ್ಲಿರುವ ಮ್ಯೂಸಿಕ್ ಇಷ್ಟ ಪಡುತ್ತಾರೆ' ಎಂದಿದ್ದರು ಚಂದ್ರಬೋಸ್. ಕಳೆದ ವರ್ಷ 'Original Song' ಕ್ಯಾಟಗರಿಯಲ್ಲಿ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಒಲಿದರೆ, elephant whisperers ಎಂಬ ನೈಜ ಕಥೆಯಾಧಾರಿತ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ಒಲಿದಿತ್ತು.
ಮಿಸ್ ವರ್ಲ್ಡ್ ಟಾಪ್ 8ಗೆ ಏರಿದ ಕನ್ನಡತಿ ಸಿನಿ ಶೆಟ್ಟಿಗೆ ಆತ್ಮೀಯ ಸ್ವಾಗತ: ಜಸ್ಟ್ ಮಿಸ್ಗೆ ಕಣ್ಣೀರಾದ ಸುಂದರಿ