ನಟ ಯಶ್ ಅವರು ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಟಾಕ್ಸಿಕ್ ಸಿನಿಮಾದ ಆ ಡೈಲಾಗ್ ಅವರನ್ನು ಬಿಟ್ಟೂಬಿಡದೇ ಹಿಂಬಾಲಿಸುತ್ತಿದೆ. ಸದ್ಯಕ್ಕೆ ಈ ಡೈಲಾಗ್ 'ಯುವಜನತೆಯ ಮಂತ್ರ' ಎನ್ನುವಂತಾಗಿದೆ. ಇನ್ನು ಟಾಕ್ಸಿಕ್ ಸಿನಿಮಾ ಬಿಡುಗಡೆ ಬಳಿಕ ಅದ್ಯಾವ ಡೈಲಾಗ್ ಯುಥ್ ಸಮೂಹವನ್ನು ಸೆಳೆಯಲಿದೆಯೋ ಏನೋ!?
ಯಶ್ ಹೇಳಿರೋ ಅದೊಂದು ಡೈಲಾಗ್ ‘ಜಗತ್ತಿನ ಮಂತ್ರ’ ಆಗಿದೆ ಏಕೆ?
ಕನ್ನಡದ ನಟ, ಪ್ಯಾನ್ ಇಂಡಿಯಾ ರಾಕಿಂಗ್ ಸ್ಟಾರ್ ಯಶ್ (Yash) ಅವರು ಈಗ ಜಗತ್ತೇ ಗುರುತಿಸುತ್ತಿರುವ ನಟ. ಕೆಜಿಎಫ್ (KGF) ಬಳಿಕ ನಟ ಯಶ್ ಅವರು ಪ್ಯಾನ್ ಇಂಡಿಯಾ ನಟರಾಗಿ ಗುರುತಿಸಿಕೊಂಡಿದ್ದು ಗೊತ್ತೇ ಇದೆ. ಆದರೆ, ಟಾಕ್ಸಿಕ್ (Toxic) ಸಿನಿಮಾದಲ್ಲಿ ನಟ ಯಶ್ ನಟಿಸುತ್ತಿರುವ ಹೊತ್ತಲ್ಲಿ, ನಟ ಯಶ್ ಅವರು ಪ್ಯಾನ್ ಇಂಡಿಯಾ ಪಟ್ಟದಿಂದ 'ಪ್ಯಾನ್ ವರ್ಲ್ಡ್' ಪಟ್ಟಕ್ಕೆ ಜಿಗಿದಿದ್ದಾರೆ. ಈಗ ಇಡೀ ಹಗತ್ತು ಕನ್ನಡದ ನಟ ಯಶ್ ಬಗ್ಗೆ ಮಾತನ್ನಾಡುತ್ತಿದೆ. ಅದರಲ್ಲೂ ನಟ ಯಶ್ ನಟನೆಯ ಟಾಕ್ಸಿಕ್ ಟೀಸರ್ ಬಿಡುಗಡೆ ಆಗುತ್ತಿದ್ದಂತೆ ಅದರಲ್ಲಿ ಹೇಳಿರುವ ಅದೊಂದು ಡೈಲಾಗ್ ಇಡೀ ಜಗತ್ತಿಗೇ 'ಮಂತ್ರ' ಎನ್ನುವಂತಾಗಿದೆ. ಹಾಗಿದ್ದರೆ ಅದೇನು?
ಹೌದು, ನಟ ಯಶ್ ನಟನೆಯ ಟಾಕ್ಸಿಕ್ ಟೀಸರ್‌ನಲ್ಲಿ ಆ ಒಂದು ಡೈಲಾಗ್ ಹದಿಹರೆಯದ ಹುಡುಗರ ಮಂತ್ರ ಎಂಬಂತಾಗಿಹೋಗಿದೆ. ಅದೇನು ಅಂತ ಹೊಸದಾಗಿ ಯಾರೂ ಹೇಳಬೇಕಾದ ಅಗತ್ಯವೇ ಇಲ್ಲ. ಹೌದು, ಅದು "ಡ್ಯಾಡೀಸ್ ಹೋಮ್" (Daddy's Home) ಎಂಬ ಡೈಲಾಗ್. ಆ ಡೈಲಾಗ್ ಈಗ ಅದೆಷ್ಟು ಫೇಮಸ್ ಆಗಿದೆ ಎಂದರೆ ನಟ ಯಶ್ ಅವರು ಎಲ್ಲೇ ಹೋದರೂ ಅದನ್ನು ಫ್ಯಾನ್ಸ್ ಜೋರಾಗಿ ಘೋಷಣೆ ಎಂಬಂತೆ ಹೇಳತೊಡಗಿದ್ದಾರೆ.
ಆ ಡೈಲಾಗ್ ಈಗ ಘೋಷಣೆ ರೂಪದಲ್ಲಿ ಅಧಿಕೃತವಾಗಿ ಹೇಳಲಾಗುತ್ತಿದೆ!
'ಡ್ಯಾಡೀಸ್ ಹೋಮ್' ಎಂಬ ಆ ಡೈಲಾಗ್ ಈಗ ಘೋಷಣೆ ರೂಪದಲ್ಲಿ ಅಧಿಕೃತವಾಗಿ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರನ್ನು ಎಲ್ಲೆಡೆ ಹಿಂಬಾಲಿಸುತ್ತಿವೆ. ದೆಹಲಿಯಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ 'ಕಾಮಿಕ್-ಕಾನ್'ವರೆಗೆ, ಯಶ್ ಎಲ್ಲೇ ಹೋದರೂ ಅವರ ಫ್ಯಾನ್ಸ್ ಆ ಡೈಲಾಗ್‌ಅನ್ನು ಬಿಟ್ಟೂಬಿಡದೇ ಹೇಳುತ್ತಿದ್ದಾರೆ. ಯಶ್ ಹಾಗೂ ಅವರ ನಟನೆಯಲ್ಲಿ ಮುಂಬರುವ 'ಟಾಕ್ಸಿಕ್' ಹಾಗು 'ರಾಮಾಯಣ' ಚಿತ್ರದ ಬಗ್ಗೆ ಅಭಿಮಾನಿಗಳ ಕ್ರೇಜ್ ಮಿತಿಮೀರಿದೆ. 26 ಆಗಸ್ಟ್ 2026 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ 'ಟಾಕ್ಸಿಕ್' ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳು ಮುಗಿಲು ಮುಟ್ಟಿವೆ.
ಜೊತೆಗೆ, ಈ ವರ್ಷದ ದೀಪಾವಳಿಗೆ ನಟ ಯಶ್, ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಮುಖ್ಯ ಭೂಮಿಕೆಯ 'ರಾಮಾಯಣ' ಸಿನಿಮಾ ಬಿಡುಗಡೆ ಆಗಲಿದೆ. ರಾಮಾಯಣ ಚಿತ್ರದ ಭಾಗ ಒಂದು ದೀಪಾವಳಿಗೆ ಬಿಡುಗಡೆ ಆಗುತ್ತಿದ್ದರೆ, ರಾಮಾಯಣದ ಎರಡನೇ ಭಾಗ ಮುಂದಿನ ವರ್ಷ ಅಂದರೆ, 2027ರಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.
ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಆ ಡೈಲಾಗ್!
ಒಟ್ಟಿನಲ್ಲಿ, ನಟ ಯಶ್ ಅವರು ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಟಾಕ್ಸಿಕ್ ಸಿನಿಮಾದ ಆ ಡೈಲಾಗ್ ಅವರನ್ನು ಬಿಟ್ಟೂಬಿಡದೇ ಹಿಂಬಾಲಿಸುತ್ತಿದೆ. ಸದ್ಯಕ್ಕೆ 'ಡ್ಯಾಡೀಸ್ ಹೋಮ್' ಅನ್ನೋದು 'ಯುವಜನತೆಯ ಮಂತ್ರ' ಎನ್ನುವಂತಾಗಿದೆ. ಇನ್ನು ಟಾಕ್ಸಿಕ್ ಸಿನಿಮಾ ಬಿಡುಗಡೆ ಬಳಿಕ ಅದ್ಯಾವ ಡೈಲಾಗ್ ಯುಥ್ ಸಮೂಹವನ್ನು ಸೆಳೆಯಲಿದೆಯೋ ಏನೋ!? ಜೊತೆಗೆ, ರಾಮಾಯಣ ಚಿತ್ರವು ತೆರೆಗೆ ಬಂದ ಬಳಿಕ ಆ ಚಿತ್ರದ ಯಾವುದಾದರೊಂದು ಡೈಲಾಗ್ 'ಡ್ಯಾಡೀಸ್ ಹೋಮ್' ಅಂತೆ ಅಥವಾ ಅದಕ್ಕಿಂತ ಹೆಚ್ಚು ಫೇಮಸ್ ಆದ್ರೂ ಅಚ್ಚರಿಯೇನಿಲ್ಲ!


