Asianet Suvarna News Asianet Suvarna News

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಿಲ್ ಕಪೂರ್ ಕಿರಿಯ ಪುತ್ರಿ ರಿಯಾ ಕಪೂರ್ ಮತ್ತು ಕರಣ್ ಬೂಲಾನಿ!

ಒಂದು ವಾರದಿಂದ ಕಪೂರ್‌ ಮನೆಯಲ್ಲಿ ಮದುವೆ ಸಂಭ್ರಮ. ಕೊನೆಗೂ ಫೋಟೋ ರಿವೀಲ್ ಮಾಡಿದ ರಿಯಾ ಕಪೂರ್.
 

Rhea kapoor calls husband Karan Boolani best friend shares wedding  picture vcs
Author
Bangalore, First Published Aug 17, 2021, 11:46 AM IST

ಬಾಲಿವುಡ್ ಎವರ್ ಗ್ರೀನ್ ನಟ ಅನಿಲ್ ಕಪೂರ್ ಮತ್ತು ಸುನೀತಾ ಕಪೂರ್ ಕಿರಿಯ ಪುತ್ರಿ ರಿಯಾ ಕಪೂರ್ ಆಗಸ್ಟ್‌ 14ರಂದು ಬಹು ದಿನದ ಗೆಳೆಯ ಕರಣ್ ಬೂಲಾನಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು ನಾಲ್ಕು ದಿನಗಳಿಂದ ಮನೆಯ ಮುಂದೆ ಪ್ಯಾಪರಾಜಿಗಳು ನಿಂತಿದ್ದರೂ, ನವ ಜೋಡಿಗಳು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಸ್ವತಃ ರಿಯಾನೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. 

'12 ವರ್ಷಗಳ ನಂತರ. ಈ ಸಮಯದಲ್ಲಿ ನಾನು ಆತಂಕಕ್ಕೆ ಒಳಗಾಗಬಾರದು. ಏಕೆಂದರೆ ನೀವು ನನ್ನ ಬೆಸ್ಟ್‌ ಫ್ರೆಂಡ್ಸ್ ಹಾಗೂ ಅತ್ಯುತ್ತಮ ವ್ಯಕ್ತಿ. ಆದರೆ ತಡೆದುಕೊಳ್ಳಲಾಗದೆ ಅಳು ಮತ್ತು ಆತಂಕ ನನ್ನಲ್ಲಿತ್ತು. ಹೊಟ್ಟೆಯೊಳಗೆ ಯಾವುದೋ ಹುಳ ಇದ್ದಂತೆ, ಇದೊಂದು ಅದ್ಭುತ ಅನುಭವ. ನನ್ನ ಪೋಷಕರು ನಿದ್ರಿಸುವ ಮೊದಲು ನಾನು ರಾತ್ರಿ 11 ಗಂಟೆಯೊಳಗೆ ಜುಹು ಮನೆಗೆ ಬರಬೇಕಾದ ಹುಡುಗಿಯಾಗಿರುತ್ತೇನೆ. ಈ ಸಂತೋಷ ಅನುಭವಿಸಲು ಎಷ್ಟು ಅದೃಷ್ಟಶಾಲಿ ಎಂದು ನನಗೆ ಇದುವರೆಗೂ ತಿಳಿದಿರಲಿಲ್ಲ. ನಾವು ನಮ್ಮ ಕುಟುಂಬವನ್ನು ತುಂಬಾ ಹತ್ತಿರವಾಗಿಸುತ್ತೇವೆ ಎಂದು ನಾನು ಭಾವಿಸುತ್ತೇನೆ, ನಮ್ಮ ಜೀವನದಲ್ಲಿ ನಮಗೆ ಅನೇಕರು ಪ್ರೀತಿ ಕೊಡುವವರಿದ್ದಾರೆ,' ಎಂದು ರಿಯಾ ಬರೆದುಕೊಂಡಿದ್ದಾರೆ. 

ಅನಿಲ್‌ ಕಪೂರ್‌ ಪುತ್ರಿ ರಿಯಾ ಮದುವೆ: ಹುಡುಗ ಯಾರು ಗೊತ್ತಾ?

ಕಳೆದ  12 ವರ್ಷಗಳಿಂದ ರಿಯಾ ಮತ್ತು ಕರಣ್ ಬೂಲಾನಿ ಪ್ರೀತಿಸುತ್ತಿದ್ದರು. ಇಬ್ಬರೂ ತಮ್ಮ ರಿಲೇಷನ್‌ಶಿಪ್‌ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಮಾಧ್ಯಮಗಳಲ್ಲಿ ಓಪನ್ ಅಪ್ ಆಗಿದ್ದರು. ಕರಣ್ ಬೂಲಾನಿ ನಿರ್ದೇಶಕರಾಗಿದ್ದು, ಅನೇಕ ಜಾಹೀರಾತುಗಳನ್ನು ಮಾಡಿದ್ದಾರೆ. 'ಐಷಾ', 'ವೇಕಪ್ ಸಿದ್' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನೂ ರಿಯಾ ಕಪೂರ್ ಕೂಡ ಫ್ಯಾಷನ್ ಡಿಸೈನರ್ ಹಾಗೂ ಉದ್ಯಮಿ. ಇತ್ತೀಚಿಗೆ ತಮ್ಮದೇ ಆದ ಇಸ್ ಕ್ರೀಮ್ ಬ್ರ್ಯಾಂಡ್ ತೆರೆದಿದ್ದಾರೆ. ಅಲ್ಲದೆ ಐಷಾ, ಖೂಬ್‌ ಸೂರತ್‌, ವೀರ್ ದಿ ವೆಡ್ಡಿಂಗ್' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Rhea Kapoor (@rheakapoor)

Follow Us:
Download App:
  • android
  • ios