ಬಾಲಿವುಡ್ ನಟಿ ಶ್ರದ್ಧಾ ಕಪೂರ್‌ನನ್ನು ಎನ್‌ಸಿಬಿ ವಿಚಾರಣೆ ಮಾಡಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಆಂಗಲ್‌ನಲ್ಲಿ ತನಿಖೆ ನಡೆಸುತ್ತಿರುವ ಎನ್‌ಸಿಬಿ ಸೇರಿ ಹಲವು ಸೆಲೆಬ್ರಿಟಿಗಳ ವಿಚಾರಣೆ ನಡೆಸಿದೆ.

ಈ ನಡುವೆ ನಟಿ ಶ್ರದ್ಧಾ ಕಪೂರ್ ತಂದೆ ಹಿರಿಯ ನಟ ಶಕ್ತಿ ಕಪೂರ್ ಎನ್‌ಸಿಬಿ ಅಧಿಕಾರಿಯಾಗಲಿದ್ದಾರೆ. ನಟ ಸುಶಾಂತ್ ಜೀವನದಿಂದ ಪ್ರೇರೇಪಿತವಾದ ಸಿನಿಮಾದಲ್ಲಿ ಎನ್‌ಸಿಬಿ ಅಧಿಕಾರಿಯಾಗಿದ್ದಾರೆ ಶ್ರದ್ಧಾ ತಂದೆ.

ನಾನ್ ಡ್ರಗ್ಸ್ ತಗೊಂಡಿಲ್ಲ, ಸುಶಾಂತ್ ತುಂಬಾ ತಗೊಳ್ತಿದ್ದ ಎಂದ ನಟಿಯರಿಗೆ ಟಾಂಗ್ ಕೊಟ್ಟ ನಟನ ಗೆಳೆಯ

ನ್ಯಾಯ: ದ ಜಸ್ಟೀಸ್ ಸಿನಿಮಾದಲ್ಲಿ ಶಕ್ತಿ ಕಪೂರ್ ಹಿರಿಯ ಎನ್‌ಸಿಬಿ ಅಧಿಕಾರಿಯಾಗಿ ನಟಿಸಲಿದ್ದಾರೆ. ಅಮನ್ ವರ್ಮಾ ಇಡಿ ಆಫೀಸರ್ ಆಗಿ ಕೆಲಸ ಮಾಡಲಿದ್ದು, ಶಕ್ತಿ ಕಪೂರ್ ಎನ್‌ಸಿಬಿ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿಮಾ ಬಗ್ಗೆ ಮಾತನಾಡಿದ ಝುಬೆರ್ ಕೆ ಖಾನ್ ಹೇಳಿದ್ದಾರೆ.

ಪಾತ್ರಗಳು ಫೈನಲ್ ಆಗಿದ್ದರೂ ಚಿತ್ರೀಕರಣ ಇನ್ನೂ ಆರಂಭವಾಗಬೇಕಷ್ಟೆ. ಝುಬೇರ್ ಸುಶಾಂತ್‌ ಪಾತ್ರ ಮಾಡಲಿದ್ದು, ಶ್ರೇಯಾ ಶುಕ್ಲ ರಿಯಾ ಚಕ್ರವರ್ತಿ ಪಾತ್ರ ಮಾಡಲಿದ್ದಾರೆ. ಸಾರಾ ಅಲಿ ಖಾನ್, ಅಂಕಿತಾ ಲೋಖಂಡೆ ಪಾತ್ರವೂ ಪಕ್ಕಾ ಆಗಿದೆ.