'ಈಗ ಭಯ ಪಡುವ ಸರದಿ ಬೇರೆಯವರದ್ದು' ಎಂದು ಭರ್ಜರಿ ಎಂಟ್ರಿ ಕೊಟ್ಟ ರಿಯಾ; ಸುಶಾಂತ್ ಅಭಿಮಾನಿಗಳ ತರಾಟೆ

'ಈಗ ಭಯ ಪಡುವ ಸರದಿ ಬೇರೆಯವರದ್ದು' ಎಂದು ರಿಯಾ ಚಕರ್ವರ್ತಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಸುಶಾಂತ್ ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದಾರೆ.  

Rhea Chakraborty gest trolled makes a comeback with Roadies 19 sgk

ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ನಿಧನ ಹೊಂದಿ ಮೂರು ವರ್ಷ ಸಮೀಪಿಸುತ್ತಿದೆ. ಆದರೇ ಸುಶಾಂತ್ ಸಾವಿನ ಹಿಂದಿನ ರಹಸ್ಯ ಇನ್ನೂ ಬಹಿರಂಗವಾಗಿಲ್ಲ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಾ ಭಾರಿ ಚರ್ಚೆಗೆ ಕಾರಣವಾಗಿದ್ದ ಸುಶಾಂತ್ ಸಿಂಗ್ ಪ್ರಕರಣ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಆದರೆ ನ್ಯಾಯಕ್ಕಾಗಿ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ. ಸುಶಾಂತ್ ಸಿಂಗ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಪ್ರೇಯಸಿ ರಿಯಾ ಚಕ್ರವರ್ತಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿದ್ದ ರಿಯಾ ಬಳಿಕ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ., ಆಗಾಗ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗುತ್ತಿದ್ದ ರಿಯಾ ಚಕ್ರವರ್ತಿ ಇದೀಗ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸುಶಾಂತ್ ನಿಧನದ ಬಳಿಕ ಮೊದಲ ಬಾರಿಗೆ ರಿಯಾ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.  

ರಿಯಾ ಚಕ್ರವರ್ತಿ ರೋಡೀಸ್ 19 ಮೂಲಕ ಮತ್ತೆ ಮಿಂಚಲು ಸಜ್ಜಾಗಿದ್ದಾರೆ. ಸದ್ಯ ರೋಡೀಸ್ ಪ್ರೋಮೋ ರಿಲೀಸ್ ಆಗಿದ್ದು ರಿಯಾ ಕಾಣಿಸಿಕೊಂಡಿದ್ದಾರೆ. ರಿಯಾ ಎಂಟ್ರಿ ನೋಡಿ ಸುಶಾಂತ್ ಸಿಂಗ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಆಕೆಯನ್ನು ಯಾಕೆ ಸೇರಿಸಿಕೊಂಡಿದ್ದು ಎಂದು ಕೆಂಡಕಾರುತ್ತಿದ್ದಾರೆ. ರಿಯಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ದಯವಿಟ್ಟು ರೋಡೀಸ್ ಬಹಿಷ್ಕರಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಆಕೆಯನ್ನು ಹೇಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ರಿಯಾ ಬದಲಿಗೆ ಬೇರೆ ಯಾರನ್ನಾದರೂ ಆಯ್ಕೆ ಮಾಡಬಹುದಿತ್ತಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬ್ಯಾನ್ ರಿಯಾ ಎಂದು ಟ್ರೆಂಡ್ ಮಾಡುತ್ತಿದ್ದಾರೆ. ರಿಯಾ ಚಕ್ರವರ್ತಿ ರೋಡೀಸ್‌ನಲ್ಲಿ ಗ್ಯಾಂಗ್‌ನ ಲೀಡರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಮತ್ತೆ ಪ್ರೀತಿ ಕಂಡುಕೊಂಡ ಸುಶಾಂತ್‌ ಗರ್ಲ್‌ಫ್ರೆಂಡ್‌ ರಿಯಾ ಚಕ್ರವರ್ತಿ; ಯಾರಿದು ಬಂಟಿ ಸಜ್ದೇಹ್?

ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ 'ನಾನು ಹಿಂತಿರುಗುವುದಿಲ್ಲ ಎಂದು ನೀವು ಭಾವಿಸಿದ್ದೀರಾ? ನಾನು ಹೆದರುತ್ತೇನೆಯೇ? ಈಗ, ಭಯಪಡುವ ಸರದಿ ಬೇರೆಯವರದು. ಆಡಿಷನ್‌ನಲ್ಲಿ ಭೇಟಿಯಾಗೋಣ' ಎಂದು ಹೇಳಿದ್ದಾರೆ. ಪ್ರೋಮೋ ಮುಗಿಯುತ್ತಿದ್ದಂತೆ 'ಗ್ಯಾಂಗ್ ನಾಯಕಿ ರಿಯಾ ಚಕ್ರವರ್ತಿ' ಎಂದು ಟ್ಯಾಗ್ ಲೈನ್ ಬರುತ್ತಿದೆ. 

ಎಂಟಿವಿ ರೋಡೀಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಎಚ್ಚರಿಕೆಯಿಂದ ಅಥವಾ ಭಯದಿಂದ ಜೀವಿಸಿ? ಅದು ಏನೇ ಇರಲಿ, ನೀವು ನಿರ್ಲಕ್ಷಿಸಲು ಸಾಧ್ಯವಿಲ್ಲ' ಎಂದು ಕ್ಯಾಪ್ಷನ್ ನೀಡಲಾಗಿದೆ. ಸದ್ಯ ಆಡಿಷನ್ ನಡಯುತ್ತಿದೆ.

 
 
 
 
 
 
 
 
 
 
 
 
 
 
 

A post shared by MTV Roadies (@mtvroadies)

ಸುಶಾಂತ್ ಸಾವಿಗೆ ಮತ್ತೊಂದು ಟ್ವಿಸ್ಟ್‌; ಪ್ರಭಾವಿ ರಾಜಕಾರಣಿಯಿಂದ ಬಂದಿತ್ತು ನಟಿಗೆ 44 ಸಾಲ ಕರೆ

ಸುಶಾಂತ್ ಸಿಂಗ್ ಅಭಿಮಾನಿಗಳು ಟ್ರೋಲ್ ಮಾಡಿದರೂ ಸಹ ರಿಯಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಿಯಾ ಪೋಸ್ಟ್‌ಗೆ ಕಾಮೆಂಟ್ ಮಾಡಿ ಈ ಕಾರ್ಯಕ್ರಮವನ್ನು ನೋಡಲು ಕಾಯುತ್ತಿರುವುದಾಗಿ ಹೇಳಿದ್ದಾರೆ. ಇನ್ನೂ ಅನೇಕರು ವಾವ್ ಎಂದು ಹೇಳುತ್ತಿದ್ದಾರೆ. 
 

Latest Videos
Follow Us:
Download App:
  • android
  • ios