ಜಾತಕ ತಂದ ಆಪತ್ತು: ಸ್ಯಾಂಡಲ್​ವುಡ್​ ತಾರೆ ಮಧುಮಿತಾ ಇಂಟರೆಸ್ಟಿಂಗ್​ ಲವ್​ ಸ್ಟೋರಿ!

ಸ್ಯಾಂಡಲ್​ವುಡ್​ ತಾರೆ ಮಧುಮಿತಾ ಮತ್ತು ಕಾಲಿವುಡ್​ ನಟ ಶಿವ ಬಾಲಾಜಿ ಅವರ ಲವ್​ ಸ್ಟೋರಿ ಯಾವ ಚಿತ್ರಕ್ಕೂ ಕಮ್ಮಿಯೇನಿಲ್ಲ. ಏನಿವರ ಕಹಾನಿ?
 

Real life interesting Love story of Shiv Balaji and Madhumita love breakup and marriage

ಸಿನಿಮಾದಲ್ಲಿ ಬೆಳ್ಳಿ ಪರದೆಯ ಮೇಲೆ ಎಲ್ಲಾ ನಟರೂ ಬೇರೆ ಬೇರೆ ನಟಿಯರ ಜೊತೆ ರೊಮಾನ್ಸ್​ ಮಾಡುತ್ತಾರೆ. ಇದೇ ವೇಳೆ ನಿಜಕ್ಕೂ ಅವರ ಮಧ್ಯೆ ಪ್ರೇಮ ಚಿಗುರುವುದು ಉಂಟು. ಲವ್​ನಲ್ಲಿ (Love) ಬಿದ್ದು ಡೇಟಿಂಗ್​, ಲಿವ್ ಇನ್​ ಸಂಬಂಧ... ಹೀಗೆ ಅದು ಮುಂದುವರೆಯುವ ಘಟನೆಗಳೂ ಸಾಕಷ್ಟು ಇವೆ. ಆದರೆ ಕೆಲವೇ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಸಿರಿ, ಇಂದಿಗೂ ಸುಖ ದಾಂಪತ್ಯ ಜೀವನ ನಡೆಸುತ್ತಿರುವುದು ಉಂಟು. ಅಂಥ ಒಂದು ಜೋಡಿಗಳಲ್ಲಿ ಒಂದು ಕಾಲಿವುಡ್​ನ ಶಿವ ಬಾಲಾಜಿ ಮತ್ತು ಮಧುಮಿತಾ ಜೋಡಿ. ಕಾಲಿವುಡ್​ ನಟಿಯಾದರೂ ಮಧುಮಿತಾ (Madhumitha) ವಿಜಯ ರಾಘವೇಂದ್ರ ಅಭಿನಯದ ನಾನು ನೀನು ಜೋಡಿ ಸಿನಿಮಾದಲ್ಲಿ ಹಾಗೂ ಹುಚ್ಚನ ಮದುವೆಯಲಿ ಉಂಡವನೇ ಜಾಣ ಚಿತ್ರದಲ್ಲಿಯೂ ನಟಿಸಿದ್ದಾರೆ. ಇವರು 2009ರಲ್ಲಿ ಕಾಲಿವುಡ್​ ನಟ ಶಿವ ಬಾಲಾಜಿ ಅವರನ್ನು ಮದುವೆಯಾಗಿ ಇಬ್ಬರು ಮಕ್ಕಳ ಪಾಲಕರಾಗಿದ್ದಾರೆ.

ಆದರೆ ಇವರ ಲವ್​ ಸ್ಟೋರಿಯೇ ಬಹಳ ಇಂಟರೆಸ್ಟಿಂಗ್​ ಆಗಿದ್ದು, ಅದರ ಬಗ್ಗೆ ನಟಿ ಈಗ ಶೇರ್​ ಮಾಡಿಕೊಂಡಿದ್ದಾರೆ. ಇವರಿಬ್ಬರೂ ಮೊದಲಿಗೆ ಭೇಟಿಯಾದದ್ದು 'ಇಂಗ್ಲಿಷ್‌ಕರಣ್‌' ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಪರದೆ ಶೇರ್​ ಮಾಡಿಕೊಂಡಿತ್ತು ಈ ಜೋಡಿ. 2005ರಲ್ಲಿ ಈ ಸಿನಿಮಾ ತೆರೆ ಕಂಡಿತ್ತು. ಸಿನಿ ಸೆಟ್​ನಲ್ಲಿಯೇ ಲವ್​ ಆ್ಯಟ್​ ಫಸ್ಟ್​ ಸೈಟ್​ ಆಗಿ ಒಬ್ಬರನ್ನೊಬ್ಬರು ಪ್ರೀತಿಸತೊಡಗಿದರು. ನಂತರ ಮದುವೆಯ ನಿರ್ಧಾರಕ್ಕೂ ಬಂತು. ಕುತೂಹಲದ ಸಂಗತಿಯೆಂದರೆ ಇವರಿಬ್ಬರು ಕೂಡ ತಾವು ಪರಸ್ಪರ ಪ್ರೀತಿ(Love) ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳಲೇ ಇಲ್ಲವಂತೆ. ಇದರ ಹೊರತಾಗಿಯೂ ಇಬ್ಬರ ಮನಸ್ಸಿಗೂ ತಾವು ಪ್ರೀತಿಯಲ್ಲಿ ಬಿದ್ದದ್ದು ತಿಳಿದಿತ್ತು. ನೇರವಾಗಿ  ಈ ಜೋಡಿ ಮದುವೆಯಾಗುವ ನಿರ್ಧಾರ ಮಾಡಿತ್ತು.  

ಊದಿಕೊಂಡ ದಿಶಾ ಪಟಾಣಿ ಮುಖ! ಎಲ್ಲೆಲ್ಲಿ ಕತ್ತರಿ ಹಾಕಿಸಿಕೊಂಡ್ರಿ ಎಂದ ಟ್ರೋಲಿಗರು

 ಆದರೆ ಎಲ್ಲಾ ಪ್ರೇಮಗಳು ಸುಲಭದಲ್ಲಿ ಯಶಸ್ವಿಯಾಗುವುದು ಕಷ್ಟ. ಅದರಂತೆಯೇ ಈ ಜೋಡಿಯ ಮದುವೆಗೂ  ಅಡ್ಡಿ ಬಂದಿತ್ತು. ಆದರೆ ಆ ಅಡ್ಡಿ ಮನೆಯವರಿಂದ ಅಲ್ಲ, ಬದಲಿಗೆ ಜಾತಕದಿಂದಾಗಿ! ಇಬ್ಬರೂ ಮದುವೆಯ ನಿರ್ಧಾರಕ್ಕೆ ಬಂದಿದ್ದರೂ ಏಕಾಏಕಿ ಶಿವ ಬಾಲಾಜಿ ಮದುವೆಯಿಂದ ಹಿಂದಕ್ಕೆ ಸರಿದಿದ್ದರು. ಇದಕ್ಕೆ ಕಾರಣ ಮಧುಮಿತಾ ಅವರ ಜಾತಕವಂತೆ! ಒಂದು ವೇಳೆ ಆಕೆಯನ್ನು ಮದುವೆಯಾದರೆ  ತಮ್ಮ ತಾಯಿ ಸತ್ತು ಹೋಗುತ್ತಾರೆ ಎನ್ನುವುದು ಜಾತಕದಲ್ಲಿ ಇತ್ತಂತೆ!  ಇಬ್ಬರ ಜಾತಕ ತೋರಿಸಿದಾಗ ಅದು ಹೊಂದಾಣಿಕೆ ಆಗಿರಲಿಲ್ಲವೆಂದು ಶಿವ ಬಾಲಾಜಿ ಮದುವೆ ಮುರಿದಿದ್ದರು! ಈ ಬಗ್ಗೆ ಮಧುಮಿತಾ ಖುದ್ದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 'ನಾವಿಬ್ಬರು  4 ವರ್ಷ ಪ್ರೀತಿಸಿದ್ದೆವು. ಆದರೆ ಪ್ರೀತಿಯ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ.  ಮದುವೆ ಆಗುವ ನಿರ್ಧಾರಕ್ಕೆ ಬಂದೆವು. ಬಾಲಾಜಿ ಮದುವೆಯ ಕುರಿತು ತುಂಬಾ ಉತ್ಸುಕರಾಗಿದ್ದರು. ಆದರೆ ಏಕಾಏಕಿ ಅವರು  ಫೋನ್ ಮಾಡಿ 'ನಮ್ಮಿಬ್ಬರಿಗೂ ಸೆಟ್ ಆಗುವುದಿಲ್ಲ. ಜಾತಕ (Horoscope)ಹೊಂದಾಣಿಕೆ ಆಗ್ತಿಲ್ಲ, ನಾವು ಮದುವೆ ಆದರೆ ನಮ್ಮ ತಾಯಿ ಸಾಯುತ್ತಾರಂತೆ' ಎಂದುಬಿಟ್ಟರು ಎಂದು ಮಧುಮಿತಾ ಹೇಳಿದರು.

ಹೀಗೆ ಹೇಳುತ್ತಿದ್ದಂತೆಯೇ ನನಗೆ ನೆಲವೇ ಕುಸಿದುಹೋದ ಅನುಭವವಾಯ್ತು. ಹೇಳಲು ಏನೂ ಉಳಿದಿರಲಿಲ್ಲ. ಆತನನ್ನು ನನ್ನ ಗಂಡ ಎಂದೇ ಒಪ್ಪಿಕೊಂಡಿದ್ದೆ. ಆದರೆ ಆತ ಮಾತ್ರ ಫ್ರೆಂಡ್ಸ್​ ಆಗಿ ಇರೋಣ ಎಂದುಬಿಟ್ಟ ಎಂದು ಮಧುಮಿತಾ ಹೇಳಿದರು, ನಂತರ  ಒಂದೂವರೆ ವರ್ಷ ಬ್ರೇಕಪ್​ ಆಗಿತ್ತು. ಪುನಃ  ಮನೆಯವರನ್ನು ಒಪ್ಪಿಸಿ ಶಿವ ಬಾಲಾಜಿ (Shiva Balaji) ಮದುವೆ ಆಗಿದ್ದಾರೆ.  ನಮ್ಮ ಮನೆಯಲ್ಲಿ ಜಾತಕದ ಬಗ್ಗೆ ಹೆಚ್ಚು ತಲೆ ಕೆಡೆಸಿಕೊಳ್ಳಲ್ಲ. ಆದರೆ ನಮ್ಮ ಅತ್ತೆ ಮನೆಯಲ್ಲಿ ಅದನ್ನೆಲ್ಲಾ ಬಹಳ ನಂಬ್ತಾರೆ. ಒಂದೂವರೆ ವರ್ಷದ ನಂತರ ಮತ್ತೆ ಇಬ್ಬರು ಒಂದಾದೆವು. ನಂತರ ಪುನಃ ಜಾತಕ ತೋರಿಸಿದಾಗ, ಅಡ್ಡಿ ಏನೂ ಇಲ್ಲ ಚೆನ್ನಾಗಿದೆ ಎಂದರು ಜ್ಯೋತಿಷಿಗಳು.

Shweta Changappa: ಬೀಚ್​ನಲ್ಲಿ ಪತಿಯೊಂದಿಗೆ ನಟಿ ಶ್ವೇತಾ ಚಂಗಪ್ಪ​- ವಿಡಿಯೋ ವೈರಲ್ 

ಆ ಒಂದೂವರೆ ವರ್ಷ ತಾವು ಅನುಭವಿಸಿದ ಕಹಿ ಅನುಭವ ಬಿಚ್ಚಿಟ್ಟ ಬಾಲಾಜಿಯವರು, ಮಧುಮಿತಾ ಬೇರೆಯವರನ್ನು ಮದುವೆಯಾಗಲಿ ಎಂದುಕೊಂಡೆ. ಆದರೆ  ಎಷ್ಟೇ ಸಂಬಂಧಗಳನ್ನು ತೋರಿಸಿದರೂ ಆಕೆ ರಿಜೆಕ್ಟ್ ಮಾಡ್ತಿದ್ದಾಳೆ ಅಂತ ಗೊತ್ತಾಯಿತು. ಅದೇ ಸಮಯದಲ್ಲಿ  ಇಬ್ಬರೂ ಮತ್ತೆ ಭೇಟಿ ಆಗಿ ಬಂದು ನಿರ್ಧಾರಕ್ಕೆ ಬಂದೆವು. ಪುನಃ ಜಾತಕ ತೋರಿಸಿದಾಗ ಎಲ್ಲವೂ ಸರಿ ಇದೆ ಎಂದಾಗ ಮದುವೆ ಮಾಡಿಕೊಂಡು ಇಬ್ಬರು ಮಕ್ಕಳ ಪಾಲಕರಾಗಿದ್ದೇವೆ ಎಂದರು.
 

Latest Videos
Follow Us:
Download App:
  • android
  • ios