Shweta Changappa: ಬೀಚ್​ನಲ್ಲಿ ಪತಿಯೊಂದಿಗೆ ನಟಿ ಶ್ವೇತಾ ಚಂಗಪ್ಪ​- ವಿಡಿಯೋ ವೈರಲ್

ನಟಿ ಶ್ವೇತಾ ಚಂಗಪ್ಪ ವಿದೇಶದಲ್ಲಿ ಪತಿಯ ಜೊತೆ ರೊಮಾನ್ಸ್​ ಮಾಡುತ್ತಿದ್ದು ಅದರ ವಿಡಿಯೋ ವೈರಲ್​ ಆಗಿದೆ.  ಏನಿದೆ ವಿಡಿಯೋದಲ್ಲಿ? 
 

Actress Shweta Changappas romance vedio on the beach with her husband has gone viral

ನಟಿ, ನಿರೂಪಕಿ ಶ್ವೇತಾ ಚಂಗಪ್ಪ (Shweta Changappa) ಅವರು ಸದ್ಯ ಸಿನಿಮಾ, ಟಿವಿ ಶೋ ನಿರೂಪಣೆಯಲ್ಲಿ ಬ್ಯುಸಿ ಆಗಿದ್ದಾರೆ. ಕಿರುತೆರೆ ಧಾರಾವಾಹಿ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲಿ ಕೂಡ ಅವರು ನಟಿಯಾಗಿ ಮಿಂಚಿದ್ದಾರೆ. ಅನೇಕ ಕಾರ್ಯಕ್ರಮಗಳಿಗೆ ನಿರೂಪಣೆ ಕೂಡ ಮಾಡುತ್ತಿದ್ದಾರೆ.  ಶ್ವೇತಾ ಚಂಗಪ್ಪಾ ಟಿವಿ ಹಾಗೂ ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷ ಕಳೆದಿದೆ. 2 ದಶಕಗಳಿಂದಲೂ ನಟಿ ಶ್ವೇತಾ ತನ್ನ ಅಭಿನಯದಿಂದ ಜನರ ಮನಸ್ಸು ಕದ್ದಿದ್ದಾರೆ.  ಕೊಡಗಿನ ಸೋಮವಾರಪೇಟೆ ಮೂಲದ ಶ್ವೇತಾ ಚಂಗಪ್ಪ ಎಸ್.‌ ನಾರಾಯಣ್‌ ನಿರ್ದೇಶನದ ಸುಮತಿ ಧಾರಾವಾಹಿ ಮೂಲಕ ನಟನೆಗೆ ಬಂದರು. 2003 ರಿಂದ 2005ವರೆಗೆ ಈ ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗಿತ್ತು. ಶ್ವೇತಾ, ಮೊದಲ ಧಾರಾವಾಹಿಯಲ್ಲೇ ಮನಸ್ಸು ಗೆದ್ದಿದ್ದರು. ಇದಾದ ನಂತರ ಮತ್ತೆ ಕಾದಂಬರಿ ಧಾರಾವಾಹಿ ಮೂಲಕ ಕಿರುತೆರೆಪ್ರಿಯರಿಗೆ ಮತ್ತಷ್ಟು ಹತ್ತಿರವಾದರು. ಸುಕನ್ಯಾ, ಅರುಂಧತಿ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 

ಸೋಷಿಯಲ್‌ ಮೀಡಿಯಾದಲ್ಲಿ (Social Media) ಹೆಚ್ಚು ಆಕ್ಟಿವ್‌ ಇರುವ ಶ್ವೇತಾ, ಅಭಿಮಾನಿಗಳೊಂದಿಗೆ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ.  ಕಿರುತೆರೆಯಲ್ಲಿ `ಯಾರಿಗುಂಟು ಯಾರಿಗಿಲ್ಲಾ', `ಕುಣಿಯೋಣ ಬಾರಾ', ಚಿಣ್ಣರ ನೃತ್ಯ ಶೋ, `ಡ್ಯಾನ್ಸ್ ಜ್ಯೂನಿಯರ್ಸ್ ಡ್ಯಾನ್ಸ್' ಮುಂತಾದ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ಜೀ ಕನ್ನಡದಲ್ಲಿ ಸೂಪರ್ ಕ್ವೀನ್ ಕಾರ್ಯಕ್ರಮ ನಡೆಸಿಕೊಡ್ತಾ ಇದ್ದಾರೆ. 2006ರಲ್ಲಿ ತೆರೆಕಂಡ ‘ತಂಗಿಗಾಗಿ’ ಸಿನಿಮಾದಲ್ಲಿ ಕೊನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದ ಶ್ವೇತಾ, ಇತ್ತೀಚಿಗೆ ಶಿವಣ್ಣ ಅಭಿನಯದ ವೇದ ಸಿನಿಮಾದಲ್ಲಿ ನಟಿಸಿದ್ದರು. 

ಸುಧಾಮೂರ್ತಿ ಎದುರು ಕಪಿಲ್​ಗೆ ಕಿಸ್​ ಕೊಟ್ಟ ರವೀನಾ: ಶುರುವಾಯ್ತು ಹೊಸ ಚರ್ಚೆ

ಸದ್ಯ ಶ್ವೇತಾ ಚಂಗಪ್ಪ ಪತಿ ಜೊತೆ ವಿದೇಶದಲ್ಲಿ ಎನ್​ಜಾಯ್​ (Enjoy) ಮಾಡುತ್ತಿದ್ದಾರೆ. ಕಳೆದ ವಾರ ಶ್ವೇತಾ ಹಾಗೂ ಕಿರಣ್‌ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.  ಸದ್ಯಕ್ಕೆ ವಿದೇಶದಲ್ಲಿ ಈ ಜೋಡಿ ಟ್ರಿಪ್ ಎಂಜಾಯ್ ಮಾಡುತ್ತಿದೆ.  ಅವುಗಳ  ಫೋಟೋಗಳನ್ನು ಚಂಗಪ್ಪ ಶೇರ್ ಮಾಡಿದ್ದಾರೆ.  ಪತಿ ವಿಕ್ರಮ್‌ ರವಿಚಂದ್ರನ್‌ ಅಭಿನಯದ ತ್ರಿವಿಕ್ರಮ ಚಿತ್ರದ ಸಂಜಿತ್‌ ಹೆಗ್ಡೆ ಹಾಡಿರುವ ನಿನ್ನೆ ತನಕ.. ಹಾಡಿಗೆ ಶ್ವೇತಾ ಚಂಗಪ್ಪ ಹಾಗೂ ಪತಿ ಕಿರಣ್‌ ಜೊತೆ ಸೇರಿ ರೀಲ್ಸ್‌ ಮಾಡಿದ್ದಾರೆ.  ಸಮುದ್ರ ತೀರದಲ್ಲಿ ರೀಲ್ಸ್‌ ಮಾಡಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.  ನನ್ನ ಜೀವನದ ಭಾಗವಾಗಿದ್ದಕ್ಕೆ ಧನ್ಯವಾದಗಳು ಎಂದು ಶ್ವೇತಾ, ತಮ್ಮ ಪತಿಗೆ ಥ್ಯಾಂಕ್ಸ್‌ ಹೇಳಿದ್ದಾರೆ. ಈ ವಿಡಿಯೋಗೆ ನೆಟಿಜನ್ಸ್‌ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೀಗೇ ನೂರು ಕಾಲ ಜೊತೆಯಾಗಿ ಸಂತೋಷದಿಂದ ಬಾಳಿ ಎಂದು ಹಾರೈಸುತ್ತಿದ್ದಾರೆ.
 
 ಅಂದಹಾಗೆ ಶ್ವೇತಾ, `ತಂಗಿಗಾಗಿ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ ಸಾಹಸಸಿಂಹ ವಿಷ್ಣುವರ್ಧನ ಅಭಿನಯದ `ವರ್ಷ' ಚಿತ್ರದಲ್ಲಿ ನಟಿಸಿದ್ದಾರೆ. `ಕೃಷ್ಣನ್ ಮ್ಯಾರೇಜ್ ಸ್ಟೋರಿ', `ಗನ್' ಮುಂತಾದ ಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿ ಕೂಡ ಮೆಚ್ಚುಗೆ ಗಳಿಸಿದ್ದಾರೆ.  ಮಜಾ ಟಾಕೀಸ್‌ನಲ್ಲಿ ಸೃಜನ್‌ ಲೋಕೇಶ್‌ (Srajan Lokesh) ಪತ್ನಿ ರಾಣಿ ಪಾತ್ರದಲ್ಲಿ ಜನರಿಗೆ ಕಾಮಿಡಿ ಕಚಗುಳಿ ನೀಡಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 2ರಲ್ಲಿ ಶ್ವೇತಾ ಚಂಗಪ್ಪ ಸ್ಪರ್ಧಿಯಾಗಿ ಭಾಗವಹಿಸಿದ್ದರು.   

ಊದಿಕೊಂಡ ದಿಶಾ ಪಟಾಣಿ ಮುಖ! ಎಲ್ಲೆಲ್ಲಿ ಕತ್ತರಿ ಹಾಕಿಸಿಕೊಂಡ್ರಿ ಎಂದ ಟ್ರೋಲಿಗರು

ಶ್ವೇತಾ ಹಾಗೂ ಕಿರಣ್‌ ದಂಪತಿಗೆ ಜಿಯಾನ್‌ ಅಯ್ಯಪ್ಪ (Jian ayyappa) ಎಂಬ ಮಗ ಇದ್ದಾನೆ. ಮಾಲ್ಡೀವ್ಸ್​ನಲ್ಲಿ ತುಂಡು ಬಟ್ಟೆ ತೊಟ್ಟ ಶ್ವೇತಾ ಚಂಗಪ್ಪ, ತಮ್ಮ ಟ್ರಿಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಈಚೆಗೆ ಹಂಚಿಕೊಂಡಿದ್ದರು.
 

Latest Videos
Follow Us:
Download App:
  • android
  • ios