Asianet Suvarna News Asianet Suvarna News

Tunisha Sharma Death case; ಗರ್ಭಿಣಿಯಾಗಿದ್ದಳು, ಅಬಾರ್ಷನ್ ಮಾಡಿಸಿದ್ಲು; ಗೆಳತಿಯ ಶಾಕಿಂಗ್ ಹೇಳಿಕೆ

ತನಿಷಾ ಶರ್ಮಾ ಗರ್ಭಿಣಿಯಾಗಿದ್ದು ಅಬಾರ್ಷನ್ ಮಾಡಿಸಿರಬಹುದು ಎಂದು ಗೆಳತಿ ರಯ್ಯಾ ಲಬೀಬ್ ಅಚ್ಚರಿ ಹೇಳಿಕೆ ನೀಡಿದ್ದಾರೆ.

Rayya Labib says Tunisha Sharma could have been pregnant earlier and must have had abortion by consuming pills sgk
Author
First Published Dec 27, 2022, 3:10 PM IST

ಹಿಂದಿ ಕಿರುತೆರೆಯ ಖ್ಯಾತ ನಟಿ ತುನಿಷಾ ಶರ್ಮಾ ಸಾವಿನ ಪ್ರಕರಣ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಮೂಲಗಳ ಪ್ರಕಾರ ಬಾಯ್‌ಫ್ರೆಂಡ್ ಶೀಜಾನ್ ಖಾನ್ ಅವರಿಂದ ದೂರ ಆದ ಬಳಿಕ ತನುಷಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಶೀಜಾನ್ ಖಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ತುನಿಷಾ ಗೆಳತಿ ರಯ್ಯಾ ಲಬೀಬ್ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ. ತುನಿಷಾ ಗರ್ಭಿಣಿ ಆಗಿದ್ದು, ಗರ್ಭಪಾತಕ್ಕೆ ಮಾತ್ರೆಗಳನ್ನು ಸೇವಿಸಿರಬಹುದು ಎಂದು ಹೇಳಿದ್ದಾರೆ. ತುನಿಷಾ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಗರ್ಭಿಣಿಯಲ್ಲ ಎಂದು ವರದಿಯಾಗಿತ್ತು.  

ಆದರೆ ಈ ಬಗ್ಗೆ ಮಾತನಾಡಿರುವ ಗೆಳತಿ ರಯ್ಯಾ ಲಬೀಬ್, ಮರಣೋತ್ತರ ಪರೀಕ್ಷೆಯಲ್ಲಿ ಗರ್ಭಿಣಿ ಅಲ್ಲ ಎಂದು ವರದಿಯಾಗಿದ್ದರೂ ಈ ಮೊದಲೇ ಗರ್ಭಿಣಿಯಾಗಿದ್ದು ಗರ್ಭಪಾತಕ್ಕೆ ಮಾತ್ರೆಗಳನ್ನು ಸೇವಿಸಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 'ತುನೀಶಾ ಶರ್ಮಾ ಗರ್ಭಿಣಿಯಾಗಿರುವ ಸಾಧ್ಯತೆಯಿದೆ. ಬಹುಶಃ ಅವರು ಸಾಯುವ ಸಮಯದಲ್ಲಿ ಗರ್ಭಿಣಿಯಾಗಿರಲಿಲ್ಲ, ಆದರೆ ಮೊದಲೇ ಗರ್ಭಿಣಿಯಾಗಿದ್ದು ಮಾತ್ರೆಗಳನ್ನು ಸೇವಿಸಿ ಗರ್ಭಪಾತ ಮಾಡಿರಬಹುದು. ನನಗೆ ಖಚಿತವಾಗಿ ತಿಳಿದಿಲ್ಲ, ಆದರೆ ಅವಳು ಯಾವುದೋ ವಿಷಯದ ಬಗ್ಗೆ ತುಂಬಾ ಟೆನ್ಷನ್ ಆಗಿದ್ದಳು' ಎಂದು ಹೇಳಿದರು. 

'ತುನೀಶಾ ಶೀಜಾನ್‌ನನ್ನು ಹುಚ್ಚರಂತೆ ಪ್ರೀತಿಸುತ್ತಿದ್ದಳು. ಬಹುಶಃ ಮೊದಲೇ ಗರ್ಭಿಣಿಯಾಗಿದ್ದಳು ಮತ್ತು ಮದುವೆಯಾಗಲು ಬಯಸಿದ್ದಳು. ಅವಳು ಗರ್ಭಿಣಿಯಾಗಿರುವ ಸಾಧ್ಯತೆ ಇದೆ ಆದರೆ ಈ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ಇದೇ ವಿಷಯಕ್ಕೆ ದೊಡ್ಡ ಜಗಳ ಆಗಿರಬಹುದು'ಎಂದು ಹೇಳಿದ್ದಾರೆ. 

ನಟಿ ರಯ್ಯ ಲಬೀಬ್ ಮತ್ತು ತುನೀಷಾ ಶರ್ಮಾ ಇಬ್ಬರೂ ಕಳೆದ 2-3 ವರ್ಷಗಳಿಂದ ಸ್ನೇಹಿತರು. ಸಾಯುವ ಮುನ್ನ ದಿನ ತುನಿಷಾ 'ಖಿನ್ನತೆ ಮತ್ತು ತುಂಬಾ ಟೆನ್ಷನ್ ಆಗಿದ್ದಂತೆ ಕಾಣುತ್ತಿದ್ದಳು' ಎಂದು ಅವರು ಹೇಳಿದರು.

Tunisha Sharma Death Case; ಇದು ಲವ್ ಜಿಹಾದ್ ವಿಷಯ: BJP ನಾಯಕರ ಗಂಭೀರ ಆರೋಪ

ತುನಿಶಾ ಶರ್ಮಾ ಅವರ ತಾಯಿ ವನಿತಾ ಶರ್ಮಾ ನಟ ಶೀಜಾನ್ ಖಾನ್‌ ವಿರುದ್ಧ ಕಿಡಿ ಕಾರಿದ್ದಾರೆ. ತನ್ನ ಮಗಳಿಗೆ ಶೀಜಾನ್ ಖಾನ್ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. ತನ್ನ ಮಗಳನ್ನು ಮದುವೆಯಾಗುವುದಾಗಿ ಹೇಳಿದ್ದ, ಈ ಬಗ್ಗೆ ತುನಿಷಾ ನನಗೆ ಹೇಳಿದ್ದಳು. ಆದರೆ ಅವನು ಬೇರೆ ಯುವತಿ ಜೊತೆ ಸಂಬಂಧ ಹೊಂದಿದ್ದ ಎಂದು ಆಕ್ರೋಶ ಹೊರಹಾಕಿದ್ದಾರೆ. ಶೀಜಾನ್ 3-4 ತಿಂಗಳ ಕಾಲ ತುನಿಷಾಳನ್ನು ಬಳಸಿಕೊಂಡ. ನಂತರ ಬ್ರೇಕಪ್ ಮಾಡಿಕೊಂಡ. ನಾನು ನನ್ನ ಮಗಳನ್ನು ಕಳೆದುಕೊಂಡೆ. ಈತನಿಗೆ ಶಿಕ್ಷೆಯಾಗಬೇಕು' ಎಂದು ಹೇಳಿದ್ದಾರೆ. 

ತುನಿಶಾ ಶರ್ಮಾ ಜತೆ ಬ್ರೇಕಪ್‌ ಆಗಲು ಶ್ರದ್ಧಾ ವಾಕರ್‌ ಹತ್ಯೆ ಕಾರಣ..!

ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

20 ವರ್ಷ ವಯಸ್ಸಿನ ನಟಿ ತುನಿಷಾ ಶೂಟಿಂಗ್ ನಡುವೆ ಚಹಾ ವಿರಾಮದ ವೇಳೆ ವಾಶ್‌ರೂಮ್‌ಗೆ (wash room) ತೆರಳಿದ್ದು, ಅಲ್ಲೇ ನೇಣು ಹಾಕಿಕೊಂಡಿದ್ದರು. ಶೌಚಾಲಯಕ್ಕೆ ಹೋದ ಆಕೆ ಎಷ್ಟೇ ಹೊತ್ತಾದರೂ ಹೊರಗೆ ಬರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ಒಳ ಹೋದಾಗ ಅವರ ದೇಹ ನೇತಾಡುತ್ತಿರುವುದು ಕಾಣಿಸಿದೆ. ಕೂಡಲೇ ಶೂಟಿಂಗ್ ಸಿಬ್ಬಂದಿ ಅವಳನ್ನು ಮಧ್ಯರಾತ್ರಿ 1:30 ರ ಸುಮಾರಿಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು  ವೈದ್ಯರು ಘೋಷಿಸಿದ್ದರು. 

Follow Us:
Download App:
  • android
  • ios