ಸಿಹಿ ಸ್ಕೂಲ್​ಡೇ ಫಂಕ್ಷನ್​ಗೆ ಎಂಟ್ರಿ ಕೊಟ್ಟಿರೋ ನಟ ರವಿಚಂದ್ರನ್​, ಪುಟಾಣಿ ಜೊತೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಪ್ರೊಮೋ ರಿಲೀಸ್​​ ಆಗಿದೆ.  

ಡ್ರಾಮಾ ಜ್ಯೂನಿಯರ್ಸ್​-4 ನೋಡಿದವರಿಗೆ ಸೀತಾರಾಮ ಸೀರಿಯಲ್​ ಪುಟಾಣಿ ರಿತು ಸಿಂಗ್​ ಮತ್ತು ಜಡ್ಜ್​ ಆಗಿದ್ದ ಕ್ರೇಜಿ ಸ್ಟಾರ್​ ರವಿಚಂದ್ರನ್​ ಅವರ ಫ್ರೆಂಡ್​ಷಿಪ್​ ಅರಿವು ಇದ್ದೇ ಇದೆ. ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಶೋ ಮೂಲಕ ಕಿರುತೆರೆ ಜನರಿಗೆ ಪರಿಚಿತರಾದ ರಿತು ಸಿಂಗ್ ಕ್ರೇಜಿಸ್ಟಾರ್​ ರವಿಚಂದ್ರನ್ ಅವರ ಫೇವರೆಟ್​ ನಟಿ. ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಮುದ್ದು ಮುದ್ದಾಸಿಹಿ ಸ್ಕೂಲ್​ಡೇ ಫಂಕ್ಷನ್​ಗೆ ಎಂಟ್ರಿ ಕೊಟ್ಟಿರೋ ನಟ ರವಿಚಂದ್ರನ್​, ಪುಟಾಣಿ ಜೊತೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಪ್ರೊಮೋ ರಿಲೀಸ್​​ ಆಗಿದೆ. 


ಮುದ್ದುಮುದ್ದಾಗಿ ಮಾತನಾಡುತ್ತ, ಸದಾ ರವಿಚಂದ್ರನ್ ಗರ್ಲ್‌ಫ್ರೆಂಡ್ ನಾನು ಎಂದು ಹೇಳುತ್ತಿದ್ದ ಈ ಪುಟ್ಟ ಪೋರಿ ಈಗ ಸೀತಾರಾಮ ಸೀರಿಯಲ್‌ನ ಕೇಂದ್ರ ಬಿಂದು. ಐದು ವರ್ಷದ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ. ನೇಪಾಳ ಮೂಲದ ಪುಟಾಣಿ ಈಗ ಕನ್ನಡಿಗರ ಕಣ್ಮಣಿ. ಸಿಹಿ ಎಂದರೆ ಸಾಕು ಸೀರಿಯಲ್​ ಪ್ರಿಯರ ಕಣ್ಣ ಮುಂದೆ ಬರುವುದು ಸೀತಾರಾಮ ಧಾರಾವಾಹಿಯ ರಿತು ಸಿಂಗ್​. ಮುದ್ದು ಮುದ್ದು ಮಾತುಗಳಿಂದ ಪಟಪಟ ಎನ್ನುತ್ತ ಎಲ್ಲರನ್ನೂ ಮರಳುಮಾಡುವ ಸಿಹಿಯ ಶಾಲೆಯಲ್ಲಿ ಈಗ ವಾರ್ಷಿಕೋತ್ಸವ. ಈ ವಾರ್ಷಿಕೋತ್ಸವಕ್ಕೆ ಕ್ರೇಜಿ ಸ್ಟಾರ್​ ರವಿಚಂದ್ರನ್​ ಎಂಟ್ರಿಯಾಗಿದೆ.

ಭಾಗ್ಯಳಿಗೆ ಹೇಳಲಾಗ್ತಿಲ್ಲ, ಲಕ್ಷ್ಮಿಗೆ ಹೇಳಿಕೊಳ್ಳದೇ ಬಿಡಲಾಗ್ತಿಲ್ಲ! ಇಲ್ಲಿ ಬೆಂಕಿ, ಅಲ್ಲಿ ತಂಗಾಳಿ... ಇದೆಂಥ ವೈರುಧ್ಯ?

ಸಿಹಿಯ ಶಾಲಾ ವಾರ್ಷಿಕೋತ್ಸವದಲ್ಲಿ ನಟ ರವಿಚಂದ್ರನ್​ ಆಗಮಿಸಿದ್ದು, ಶಾಲೆಯಲ್ಲಿ ಸಿಹಿಯ ಜೊತೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ನಿನ್ನೆಯಷ್ಟೇ ಸಿಹಿ ಒಂದು ಮನವಿ ಮಾಡಿಕೊಂಡಿದ್ದಳು. ತನ್ನ ಸ್ಕೂಲ್​ಡೇ ಫಂಕ್ಷನ್​ಗೆ ತನ್ನ ಫ್ರೆಂಡ್​ ರಾಮ್​ ಬರುತ್ತಾನೆ ಎಂದು ಕಾಯುತ್ತಿರುವುದಾಗಿ ಹೇಳಿದ್ದ ಸಿಹಿ, ನಿಮಗೆಲ್ಲಾ ಸರ್​ಪ್ರೈಸ್​ ಇದೆ. ರವಿಚಂದ್ರನ್​ ಸರ್​ ಅವರು ಶಾಲೆಯ ಫಂಕ್ಷನ್​ಗೆ ಗೆಸ್ಟ್​ ಆಗಿ ಬರುತ್ತಿದ್ದಾರೆ. ನನ್ನ ಫ್ರೆಂಡ್​ ರಾಮ್​ ಕೂಡ ಬಂದ್ರೆ ಚೆನ್ನಾಗಿತ್ತಲ್ವಾ ಎಂದಿದ್ದಳು. ನನ್ನ ಸ್ಕೂಲ್​ ಡೇ ಫಂಕ್ಷನ್​ ಅನ್ನು ತಪ್ಪದೇ ನೋಡಿ ಎಂದಿದ್ದಳು. ಇದೀಗ ರವಿಚಂದ್ರನ್​ ಎಂಟ್ರಿ ಕೊಟ್ಟಿದ್ದು, ಅದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ರಿಲೀಸ್​ ಮಾಡಿದೆ. ಇದರಲ್ಲಿ ಕ್ರೇಜಿಸ್ಟಾರ್​, ಸಿಹಿಯ ಜೊತೆ ಡ್ಯಾನ್ಸ್​ ಮಾಡುವುದನ್ನು ನೋಡಬಹುದು.

ಇನ್ನು ಸೀತಾರಾಮ ಸೀರಿಯಲ್​ ಕುರಿತು ಹೇಳುವುದಾದರೆ, ಸೀತಾ ಮತ್ತು ರಾಮರ ನಡುವೆ ಬಿರುಕು ಹೆಚ್ಚುತ್ತಲೇ ಸಾಗಿದೆ. ತಾನು ಶ್ರೀಮಂತ ಎಂದು ಹೇಳದೇ ಸತ್ಯ ಮುಚ್ಚಿಟ್ಟ ಬಗ್ಗೆ ಸೀತಾಳಿಗೆ ರಾಮನ ಮೇಲೆ ಕೋಪ. ಆದರೆ ರಾಮನಿಗೋ ಸೀತಾಳ ಮೇಲೆ ಲವ್​ ಶುರುವಾಗಿದೆ. ಅಮ್ಮ ರಾಮನ ಮೇಲೆ ಕೋಪ ಮಾಡಿಕೊಂಡರೂ ಪುಟಾಣಿ ಸಿಹಿಗೆ ರಾಮ್​ನನ್ನು ಬಿಟ್ಟು ಇರಲು ಆಗುತ್ತಿಲ್ಲ. ಆದರೆ ಅಮ್ಮನ ಕೋಪದ ಮುಂದೆ ಏನೂ ಮಾಡದ ಸ್ಥಿತಿ. ತನ್ನ ಸ್ಕೂಲ್​ ಡೇ ಫಂಕ್ಷನ್​ಗೆ ಬರುವಂತೆ ರಾಮ್​ಗೆ ಸೀಕ್ರೇಟ್​ ಆಗಿ ಸಿಹಿ ಪತ್ರ ಬರೆದಿದ್ದು, ಅದು ರಾಮ್​ಗೆ ತಲುಪಿದೆ. ಅದೇ ಇನ್ನೊಂದೆಡೆ ಕಾಕತಾಳೀಯ ಎನ್ನುವಂತೆ ರಾಮ್​ ಆ ಶಾಲೆಯ ಫಂಕ್ಷನ್​ಗೆ ಗೆಸ್ಟ್​ ಆಗಲು ಹೋಗುತ್ತಿದ್ದಾನೆ.

ಬಿಗ್​ಬಾಸ್​ ಶಾಕ್​! ಪ್ರಬಲ ಸ್ಪರ್ಧಿಯೇ ಔಟ್​? ಯಾರ ಕೈ ಎತ್ತಲಿದ್ದಾರೆ ಸುದೀಪ್​? ಪ್ರೊಮೋ ರಿಲೀಸ್​

ಇನ್ನು ಸಿಹಿ ಅಂದ್ರೆ, ರಿತು ಸಿಂಗ್​ ಕುರಿತು ಹೇಳುವುದಾದರೆ, ರೀತು ನೇಪಾಳದವಳು. ನೇಪಾಳ ಮೂಲದ ರಿತು ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಈಕೆಗೆ ವೇದಿಕೆಯ ಮೇಲೆ ರವಿಚಂದ್ರನ್​ ಅವರೇ ಧೈರ್ಯ ತುಂಬಿದ್ದರು, ಜೊತೆಗೆ ರಿತು ತಾಯಿಗೂ ಧೈರ್ಯ ಹೇಳಿದ್ದರು. 

View post on Instagram