Asianet Suvarna News Asianet Suvarna News

ಬಿಗ್​ಬಾಸ್​ ಶಾಕ್​! ಪ್ರಬಲ ಸ್ಪರ್ಧಿಯೇ ಔಟ್​? ಯಾರ ಕೈ ಎತ್ತಲಿದ್ದಾರೆ ಸುದೀಪ್​? ಪ್ರೊಮೋ ರಿಲೀಸ್​

ಬಿಗ್​ಬಾಸ್​ ವಿಜೇತರ ಘೋಷಣೆಗೆ ಕೆಲವೇ ಗಂಟೆಗಳು ಬಾಕಿ ಇವೆ. ಈ ನಡುವೆಯೇ ತುಕಾಲಿ ಸಂತೋಷ್​ ಬಳಿಕ ಇನ್ನೋರ್ವ ಪ್ರಬಲ ಸ್ಪರ್ಧಿ ಔಟ್​ ಎನ್ನಲಾಗುತ್ತಿದೆ. ಯಾರಿವರು?
 

after Thukali Santhosh Vinay Gowda eliminated from Bigg Boss finale suc
Author
First Published Jan 28, 2024, 11:54 AM IST

ನಿನ್ನೆ ಜನವರಿ 27ರಿಂದ ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆ  ಶುರುವಾಗಿದೆ. ಇಂದು ಒಬ್ಬರ ಕೈಯನ್ನು ಕಿಚ್ಚ ಸುದೀಪ್​ ಎತ್ತುವ ಮೂಲಕ ಬಿಗ್​ಬಾಸ್​ ವಿಜೇತರನ್ನು ಘೋಷಿಸಲಿದ್ದಾರೆ.  ಈ ಮೂಲಕ  ಬಿಗ್​ಬಾಸ್​ ಕನ್ನಡದ ಸೀಸನ್​ 10ರ ಗ್ರ್ಯಾಂಡ್​ ಫಿನಾಲೆಗೆ ತೆರೆ ಬೀಳಲಿದೆ. 16 ವಾರಗಳಿಂದ ನಡೆದ ಜರ್ನಿಯಲ್ಲಿ 19 ಸ್ಪರ್ಧಿಗಳು ಭಾಗಿಯಾಗಿದ್ದರು. ಸದ್ಯ  6 ಜನ ಫೈನಲ್ ಲಿಸ್ಟ್‌ನಲ್ಲಿ ಇದ್ದರು. ಇದಾಗಲೇ ತುಕಾಲಿ ಸಂತೋಷ್​ ಅವರನ್ನು ಎಲಿಮಿನೇಟ್​ ಮಾಡಲಾಗಿದೆ. ಅಂದರೆ ಈಗ ಉಳಿದಿರುವುದು ಐವರು. ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್ ಮತ್ತು ವರ್ತೂರು ಸಂತೋಷ್. ಇದಕ್ಕೂ ಮೊದಲು ಬಿಗ್ ಬಾಸ್ ಪ್ರತಾಪ್‌ಗೆ ಎಲಿಮಿನೇಷನ್ ಶಾಕ್ ಕೊಟ್ಟಾಗಿತ್ತು. ಆದರೂ ಕೊನೆಯ ಕ್ಷಣದಲ್ಲಿ ಸುದೀಪ್​ ಅವರನ್ನು ಬಚಾವ್​ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ  ಈ ಸಲ ಐದು ಜನ ಅಲ್ಲ, ಆರು ಜನ ಫೈನಲ್‌ ಲಿಸ್ಟ್‌ನಲ್ಲಿ ಇರ್ತಾರೆ ಎನ್ನಲಾಗಿತ್ತು. ಆದರೆ ತುಕಾಲಿ ಅವರನ್ನು ನಾಮಿನೇಟ್​ ಮಾಡುವ ಮೂಲಕ ಐವರನ್ನೆ ಗ್ರ್ಯಾಂಡ್​ ಫಿನಾಲೆಗೆ ಕಳುಸಿಲಾಗಿದೆ.  

ಸತತ 16 ವಾರಗಳು ಟಾಪ್​ ಟಿಆರ್​ಪಿಯಲ್ಲಿಯೇ  ಮುಂದುವರೆದಿರುವ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 10’  ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್‌ ಒಬ್ಬರ ಕೈಯನ್ನು ಎತ್ತಿ ಹಿಡಿಯಲಿದ್ದಾರೆ. ಬಿಗ್‌ ಬಾಸ್ ಮನೆಯೊಳಗೆ ರಾರಾಜಿಸುತ್ತಿರುವ ಕಪ್ ಅವರ ಕೈ ಸೇರಲಿದೆ. ಇವರಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ‘ಬಿಗ್ ಬಾಸ್‌ ಕನ್ನಡ 10’ ವಿಜೇತರಿಗೆ ಕಾನ್ಫಿಡೆಂಟ್‌ ಗ್ರೂಪ್‌ ಕಡೆಯಿಂದ 50 ಲಕ್ಷ ರೂಪಾಯಿ ನಗದು ಬಹುಮಾನ ದೊರೆಯಲಿದೆ. ಇಷ್ಟೇ ಅಲ್ಲದೇ ಜೊತೆಗೆ ಹೊಸ ಮಾರುತಿ ಸುಜುಕಿ ಬ್ರೆಜಾ ಕಾರು ಮತ್ತು ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್‌ ಸಿಗಲಿದೆ. ‘ಬಿಗ್ ಬಾಸ್‌ ಕನ್ನಡ 10’ ರನ್ನರ್‌ ಆದವರಿಗೆ ಬೌನ್ಸ್‌ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್‌ ಲಭಿಸಲಿದೆ.  ಈ ಹಿಂದೆ ವಿಜೇತರಿಗೆ ಸಿಗುವ 50 ಲಕ್ಷ ರೂಪಾಯಿ ನಗದು ಬಹುಮಾನಕ್ಕೆ ಸಂಬಂಧಿಸಿದಂತೆ ಸ್ಪರ್ಧಿಗಳಿಗೆ  ‘ಬಿಗ್ ಬಾಸ್‌’ ಶಾಕ್​ ಕೂಡ ನೀಡಿದ್ದರು.  ಸ್ಥಾನ-ಮಾನ ಟಾಸ್ಕ್‌ನಲ್ಲಿ ಮೌಲ್ಯಗಳ ಫಲಕಗಳನ್ನು ಪಡೆದ ಆಧಾರದ ಮೇಲೆ ಸ್ಪರ್ಧಿಗಳಿಗೆ ನಾಮಿನೇಟ್‌ ಮಾಡುವ ಅಧಿಕಾರವಿತ್ತು. ನಾಮಿನೇಟ್‌ ಆದ ಸ್ಪರ್ಧಿಗಳ ಒಟ್ಟು ಮೌಲ್ಯವನ್ನು ನಗದು ಬಹುಮಾನದಿಂದ ಕಡಿತ ನ್ನ  ಮಾಡಲಾಗಿತ್ತು. ಇದರಿಂದಾಗಿ  50 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿ ಕಡಿತಗೊಂಡಿತ್ತು. 

ನಟಿ ಬೆತ್ತಲಾದ ದೃಶ್ಯ ನೋಡಿದ್ದು ಸಾಕಾಗಿಲ್ವಂತೆ! ರಣಬೀರ್​-ಬಾಬಿ ಕಿಸ್ಸಿಂಗ್​ ನೋಡಲು ಸಿಗದೇ ಅನಿಮಲ್​ ಫ್ಯಾನ್ಸ್​ ಗರಂ

ಇದರ ನಡುವೆಯೇ ಸೋಷಿಯಲ್​  ಮೀಡಿಯಾದಲ್ಲಿ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಇಂಥವರೇ ಗೆಲ್ಲುವುದು ಎಂದು ಹೇಳಲಾಗುತ್ತಿದೆ. ಬಿಗ್​ಬಾಸ್​ ಕಪ್​ ಎತ್ತಲಿರುವ ಪ್ರಮುಖ ಸ್ಪರ್ಧಿ ಪೈಕಿ ವಿನಯ್​ ಗೌಡ ಕೂಡ ಒಬ್ಬರು ಎಂದೇ ಹೇಳಲಾಗಿತ್ತು. ಆದರೆ ಇದಾಗಲೇ ವಿನಯ್​ ಗೌಡ ಅವರನ್ನೂ ಬಿಗ್​ಬಾಸ್​ನಿಂದ ಹೊರಕ್ಕೆ ಇಡಲಾಗಿದೆ ಎನ್ನಲಾಗುತ್ತಿದೆ.   ಬಿಗ್ ಬಾಸ್ ಮನೆಯಲ್ಲಿ ತಾನೇ ಟ್ರೋಫಿ ಗೆಲ್ಲೋದು ಎಂದು ವಿನಯ್​ ಅವರು ಸದಾ ಹೇಳುತ್ತಲೇ ಇದ್ದರು. ಆದರೆ ಮೊದಲಿನಿಂದಲೂ ಇವರು ವಿವಾದ ಮತ್ತು ಜಗಳದಲ್ಲಿಯೇ ಇರುತ್ತಿದ್ದರು. ಇದರ ಹೊರತಾಗಿಯೂ ವಿನಯ್ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಆದರೆ ಇದೀಗ ಅವರೇ ಮನೆಯಿಂದ ಹೊರಕ್ಕೆ ಹೋಗಿದ್ದಾರೆ ಎನ್ನಲಾಗಿದೆ. 

ಇದರ ನಡುವೆಯೇ, ಬಿಗ್​ಬಾಸ್​ ಪ್ರೊಮೋ ರಿಲೀಸ್​ ಆಗಿದೆ. ಕಿಚ್ಚ ಕೈಯೆತ್ತುವ ಕೈ ಯಾರದ್ದು ಎನ್ನುವ ಮೂಲಕ ಈ ಪ್ರೊಮೋ ರಿಲೀಸ್​​ ಮಾಡಲಾಗಿದೆ. ಇದರಲ್ಲಿ ತುಕಾಲಿ ಸಂತೋಷ್​ ಹೊರಕ್ಕೆ ಹೋಗಿರುವುದನ್ನು ತೋರಿಸಲಾಗಿದೆ. ಇದೇ ವೇಳೆ ವಿನಯ್​ ಅವರು ಬಾಯಿಯ ಮೇಲೆ ಕೈ ಇಟ್ಟಿರುವುದನ್ನು ನೋಡಬಹುದು. ಒಟ್ಟಿನಲ್ಲಿ ಈ ಪ್ರೊಮೋ ಕುತೂಹಲ ಕೆರಳಿಸಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಯಾರ ಕೈಗೆ ಟ್ರೋಫಿ ಹೋಗಲಿದೆ ಎನ್ನುವುದಕ್ಕೆ ಉತ್ತರ ಸಿಗಲಿದೆ. 

ಬ್ರಾಲೆಸ್​ ಕರೀನಾ ಕಪೂರ್​ ಖಾನ್​ಗೆ ಇದು ಮದುಮಗಳ ಡ್ರೆಸ್​ ಅಂತೆ! ನಿಮ್ಮಲ್ಲಿ ಹೀಗೇನಾ ಕೇಳ್ತಿದ್ದಾರೆ ನೆಟ್ಟಿಗರು...

Follow Us:
Download App:
  • android
  • ios