ಬಾಲಿವುಡ್ ನಟಿ ರವೀನಾ ಟಂಡನ್ ಇಂದು ಹುಟ್ಟಿದ ಹಬ್ಬ ಆಚರಿಸುತ್ತಿದ್ದು, ಕೆಜಿಎಫ್‌ 2 ಸಿನಿಮಾದಲ್ಲಿ ತಮ್ಮ ಫಸ್ಟ್ ಲುಕ್ ರಿವೀಲ್ ಮಾಡಿ ಫ್ಯಾನ್ಸ್‌ಗೆ ಸರ್ಪೈಸ್ ಕೊಟ್ಟಿದ್ದಾರೆ. ಕೆಜಿಎಫ್‌2 ಮೂಲಕ ಬೆಳ್ಳಿ ತೆರೆಗೆ ಮರಳಲಿರುವ ನಟಿ ರವೀನಾ ರಮಿಕಾ ಸೆನ್ ಎನ್ನುವ ಪಾತ್ರದಲ್ಲಿ ಮಿಂಚಲಿದ್ದಾರೆ.

ತಮ್ಮ ಲುಕ್ ಶೇರ್ ಮಾಡಿದ ನಟಿ, ಪ್ರಸೆಂಟಿಂಗ್ ರಮಿಕಾ ಸೆನ್ ಕೆಜಿಎಫ್ ಚಾಪ್ಟರ್ 2 ಎಂದು ಬರೆದಿದ್ದಾರೆ. ಈ ಗಿಫ್ಟ್‌ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಕೆಜಿಎಫ್ ಟೀಂ ಎಂದಿದ್ದಾರೆ ನಟಿ. ತುಂಬಿದ ಕಣ್ಣುಗಳು, ಮೆರೂನ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ ರವೀನಾ.

KGF2 ಸೇರಿದ ಪ್ರಕಾಶ್ ರಾಜ್: ಶೂಟಿಂಗ್ ಶುರು

ಸಿನಿಮಾದಲ್ಲಿ ಸಂಜಯ್ ದತ್ ಕೂಡಾ ನಟಿಸುತ್ತಿದ್ದು ಈಗಾಗಲೇ ಫಸ್ಟ್‌ ಲುಕ್ ರಿಲೀಸ್ ಆಗಿದೆ. ನವೆಂಬರ್‌ನಲ್ಲಿ ಸಂಜಯ್ ದತ್ ಕೆಜಿಎಫ್ 2 ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಸದ್ಯ ರವೀನಾ ಟಂಡನ್ ಹಿಮಾಚಲ ಪ್ರದೇಶದ ಡಾಲ್‌ಹೌಸಿಯಲ್ಲಿ ವೆಬ್ ಸಿರೀಸ್ ಶೂಟಿಂಗ್‌ನಲ್ಲಿದ್ದಾರೆ.

ನಾನು ಶೂಟಿಂಗ್ ಆರಂಭಿಸುವ ತಯಾರಿಯಲ್ಲಿದ್ದೇನೆ. ಎಲ್ಲರೂ ಕೊರೋನಾ ಸೇಫ್ಟಿ ಗೈಡ್‌ಲೈನ್ಸ್ ಪಾಲಿಸಬೇಕಾದ್ದು ಬಹಳ ಮುಖ್ಯ. ನಾವು ಎಲ್ಲ ಗೈಡ್‌ಲೈನ್ಸ್ ಅನುಸರಿಸಿಕೊಂಡೇ ಪ್ರಯಾಣಿಸಿದ್ದೇವೆ ಎಂದಿದ್ದಾರೆ ನಟಿ

"