Asianet Suvarna News Asianet Suvarna News

ಅಬ್ಬಬ್ಬಾ! ಇವರೆಲ್ಲಾ ಬೇರೊಬ್ಬರ ಪತಿಯನ್ನೇ ಕದ್ದುಬಿಟ್ಟಿದ್ರಾ? ಬಾಲಿವುಡ್​ ಬೆಡಗಿಯರ ರಹಸ್ಯ ಬಯಲಿಗೆ!

ಇದಾಗಲೇ ಮದುವೆಯಾಗಿರುವ ನಟರನ್ನು ಓಲೈಸಿಕೊಂಡು ಅವರನ್ನು ಕದ್ದ ಆರೋಪ ಎದುರಿಸುತ್ತಿದ್ದಾರೆ ಕೆಲ ನಟಿಯರು, ಯಾರವರು?
 

kangana Hansika to Nayanatara Actress who faced the allegation of stealing someones husband suc
Author
First Published Aug 11, 2024, 5:47 PM IST | Last Updated Aug 11, 2024, 5:47 PM IST

ಸಿನಿ ಕ್ಷೇತ್ರದಲ್ಲಿ  ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವುದು ಜನಜನಿತ ಮಾತು. ಇಲ್ಲಿ ಡೇಟಿಂಗ್​, ಮದುವೆ, ಡಿವೋರ್ಸ್​, ಕಿಸ್ಸಿಂಗ್​... ಹೀಗೆ ಎಲ್ಲವೂ ನಿಜ ಜೀವನದಲ್ಲಿಯೂ ಬೆಲೆಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಆಗುವುದು ಇದೆ. ಕೆಲ ತಿಂಗಳ ಹಿಂದೆ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರು ಬೇರೊಬ್ಬರ ಗಂಡನನ್ನು ಕದ್ದಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿತ್ತು.  ಅದೇ ರೀತಿ ಕಂಗನಾ ರಣಾವತ್​ ಅವರು ಸಂಸದೆಯಾಗಿ ಆಯ್ಕೆಯಾದ ಬಳಿಕ ಅವರ ಸಂಬಂಧಗಳ ಕುರಿತು ಆಕೆಗೆ ಆಗದವರು ಕೆದಕಿದ್ದರು. ಸೂಸೇನ್​ ಖಾನ್​ ಪತಿಯಾಗಿದ್ದ ನಟ ಹೃತಿಕ್​ ರೋಷನ್​, ನಟಿ ಜರೀನಾ ವಹಾಬ್ ಪತಿ ಆದಿತ್ಯ ಪಂಚೋಲಿಯವರ ಜೊತೆ ಕಂಗನಾ (Kangana Ranaut) ಹೆಸರು ಥಳಕು ಹಾಕಿಕೊಂಡಿತ್ತು. ಇದಾದ ಬಳಿಕ ಬಾಲಿವುಡ್​ನ ಇಂಥ ಆರೋಪ ಹೊತ್ತ ನಟಿಯರ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಬೇರೊಬ್ಬರ ಪತಿಯನ್ನು ಕದ್ದಿರುವವರ ಬಗ್ಗೆ ಕೆಲವು ಸಿನಿ ಪ್ರಿಯರು ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವು ನಟಿಯರ ಹೆಸರು ಕೇಳಿಬಂದಿದೆ.

ಮೊದಲಿಗೆ ಕಂಗನಾ ಅವರ ಕುರಿತೇ ನೋಡೋಣ. ಇವರ ಮತ್ತು ಹೃತಿಕ್​ ರೋಷನ್​ ಸಂಬಂಧ ಬಾಲಿವುಡ್​ನಲ್ಲಿ ಎಲ್ಲರಿಗೂ ತಿಳಿದದ್ದೇ.  ಮದುವೆಯಾದ ಮೇಲೂ ಹೃತಿಕ್​ ರೋಷನ್​ ಕಂಗನಾ ಅವರ ಹಿಂದೆ ಬಿದ್ದದ್ದು, ಕಂಗನಾ ಅವರಿಗಾಗಿ ಪತ್ನಿಯನ್ನು ಬಿಡಲು ರೆಡಿಯಾಗಿದ್ದು ಈಗ ಹಳೆಯ ವಿಷಯ. ಅದೇ ರೀತಿ ಕಂಗನಾ ಕೂಡ ಹೃತಿಕ್​ ರೋಷನ್​ (Hruthik Roshan) ಮಾತಿಗೆ ಮರುಳಾಗಿ ಅವರ ಎರಡನೆಯ ಪತ್ನಿಯಾಗಲು ರೆಡಿ ಆಗಿದ್ದು, ಆಮೇಲೆ ಎಲ್ಲವೂ ಅಯೋಮಯವಾಗಿ ಹೃತಿಕ್​ ರೋಷನ್​ ಕಂಗನಾಗೆ ಕೈಕೊಟ್ಟಿರೋ ಸುದ್ದಿ ಹಿಂದೊಮ್ಮೆ ಬಲು ಚರ್ಚಿತ ವಿಷಯವಾಗಿತ್ತು. ನಟ ಹೃತಿಕ್​ ರೋಷನ್​ ಮತ್ತು ನಟಿ ಕಂಗನಾ ರಣಾವತ್​ ನಡುವೆ ನಂತರ ಬಹಳ ದಿನಗಳ ಕಾಲ ಕಿತ್ತಾಟ ನಡೆದಿತ್ತು. ಕಿತ್ತಾಟದ ಬಳಿಕವಷ್ಟೇ ಇವರಿಬ್ಬರೂ  ಡೇಟಿಂಗ್​ ಮಾಡುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿತ್ತು.  

ಇದಾದ ಬಳಿಕ ನಟಿಯ ಹೆಸರು ಬಾಲಿವುಡ್​​ ನಟ ಆದಿತ್ಯ ಪಾಂಚೋಲಿ (Adithya Pancholi) ಜೊತೆ ಕೇಳಿಬಂದಿತ್ತು.  ಕಂಗನಾ ತಮ್ಮ ಪತಿಯನ್ನು ಕದ್ದಿರುವುದಾಗಿ ಆದಿತ್ಯ ಪಂಚೋಲಿಯವರ ಪತ್ನಿ ಜರೀನಾ ವಹಾಬ್ ಹೇಳಿಕೊಂಡಿದ್ದರು. ಆದಿತ್ಯ ಅವರ ಜೊತೆ ಕಂಗನಾ ಸುಮಾರು ಒಂದೂವರೆ ವರ್ಷ ಡೇಟಿಂಗ್​ನಲ್ಲಿದ್ದು. ತಾವಿಬ್ಬರೂ ಒಟ್ಟಿಗೇ ದಂಪತಿಯಂತೆ ಬದುಕಿದ್ದನ್ನು ಖುದ್ದು ಆದಿತ್ಯ ಪಂಚೋಲಿಯವರೂ ಒಪ್ಪಿಕೊಂಡಿದ್ದಾರೆ. ಈ ಮೂಲಕ ಕಂಗನಾ ಬೇರೊಬ್ಬರ ಪತಿಯನ್ನು ಕದ್ದಿರುವ ಆರೋಪ ಎದುರಿಸುತ್ತಿದ್ದಾರೆ. 

600 ವರ್ಷಕ್ಕೊಮ್ಮೆ ಸಂಭವಿಸೋ ಜಾತಕದಲ್ಲಿ ಹುಟ್ಟಿದ ಐಶ್​ ದಾಂಪತ್ಯಕ್ಕೆ ಈ ಡಾಕ್ಟರೇ ಬಿರುಗಾಳಿ?

ಇನ್ನು ಹಂಸಿಕಾ ಮೋಟ್ವಾನಿ. ಈಕೆಯ  ನಿಶ್ಚಿತಾರ್ಥದ ನಂತರ ಬೇರೊಬ್ಬರ ಪತಿ ಅಪಹರಿಸಿರುವ ವಿಷಯ ಬೆಳಕಿಗೆ ಬಂದಿತ್ತು. ಆಕೆಯ ಪತಿ ಸೊಹೈಲ್ ಖತುರಿಯಾ ಹಂಸಿಕಾ ಅವರ  ಆತ್ಮೀಯ ಸ್ನೇಹಿತೆ ರಿಂಕಿಯ ಪತಿ.  ಈ ಮೂಲಕ ಹಂಸಿಕೆ  ತನ್ನ ಆತ್ಮೀಯ ಸ್ನೇಹಿತೆಯ ಪತಿಯನ್ನು ಕದ್ದಿದ್ದಾರೆ ಎಂಬ ಆರೋಪವಿದೆ. ಆದರೆ, ಇದನ್ನು ನಟಿ ಅಲ್ಲಗಳೆದಿದ್ದಾರೆ.  'ನನ್ನ  ವಿರುದ್ಧದ ಆರೋಪವು  ಶುದ್ಧ ಸುಳ್ಳು. ನಾನು ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ  ಜನರು ನನ್ನತ್ತ ಬೆರಳು ತೋರಿಸುವುದು ಮತ್ತು ನನ್ನನ್ನು ಖಳನಾಯಕನನ್ನಾಗಿ ಮಾಡುವುದು ತುಂಬಾ ಸುಲಭವಾಗಿದೆ. ನಾನು ಸೆಲೆಬ್ರಿಟಿ ಎಂಬುದಕ್ಕೆ ಬೆಲೆ ತೆರಬೇಕಾಗುತ್ತದೆ' ಎಂದಿದ್ದರು. ಅದೇನೇ ಇದ್ದರೂ ಆಕೆಯ ಪತಿ, ಸ್ನೇಹಿತೆಯ ಪತಿ ಎನ್ನುವುದು ಮಾತ್ರ ನಿಜ.  ಹಾಗಿದ್ದರೆ ಇದು ಹನ್ಸಿಕಾ ಅವರ ವಿಷಯದಲ್ಲಿ ಮಾತ್ರ ನಡೆದಿದೆಯಾ ಎಂದುಕೊಂಡರೆ ತಪ್ಪು. ಇಂಥ ಅನೇಕ ಖ್ಯಾತ ನಟಿಯರು ಚಿತ್ರರಂಗ ಆಳುತ್ತಿದ್ದಾರೆ. ಅವರ ಪೈಕಿ ಐದು ನಟಿಯರ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಬೇರೊಬ್ಬರ ಪತಿಯನ್ನು ಬುಟ್ಟಿಗೆ ಹಾಕಿಕೊಂಡಿರುವ ಆರೋಪ ಈ ನಟಿಯರ ಮೇಲಿದೆ. 

 ದಕ್ಷಿಣ ಭಾರತದ ನಟಿ ನಯನತಾರಾ (Nayanatara) 2022 ರಲ್ಲಿ ವಿಘ್ನೇಶ್ ಶಿವನ್ (Vighnesh Shivan) ಅವರನ್ನು ವಿವಾಹವಾದರು. ಆದರೆ ಅದಕ್ಕೂ ಕೆಲವು ವರ್ಷಗಳ ಹಿಂದೆ ಅವರು ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ಪ್ರಭುದೇವ ಅವರೊಂದಿಗೆ ಪ್ರಣಯ ಸಂಬಂಧವನ್ನು ಹೊಂದಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಇಬ್ಬರ ಸಂಬಂಧ ಇತ್ತು. ಈ ವೇಳೆ ಪ್ರಭುದೇವ ಅವರು ನಯನತಾರಾ ಅವರಿಗಾಗಿ ಪತ್ನಿ ರಮ್ಲತಾ ಅವರನ್ನು ಬಿಟ್ಟಿದ್ದರು ಎನ್ನಲಾಗಿದೆ. ಆ ವೇಳೆ ರಮ್ಲತಾ ಅವರು ರಂಪಾಟ ಮಾಡಿ, ನಯನತಾರಾ ತಮ್ಮ ಪತಿಯನ್ನು ಕದ್ದಿರುವುದಾಗಿ ಹೇಳಿಕೊಂಡಿದ್ದರು. 

ಇನ್ನು ಹಾಲಿವುಡ್​ ವಿಷಯಕ್ಕೆ ಬರುವುದಾದರೆ, ಹಾಲಿವುಡ್​ನ ಖ್ಯಾತ  ತಾರೆ ಏಂಜಲೀನಾ ಜೋಲೀ (Angelina Jolie) 2014 ರಲ್ಲಿ ಬ್ರಾಡ್ ಪಿಟ್ ಅವರನ್ನು ವಿವಾಹವಾದರು. ಅಸಲಿಗೆ ಬ್ರಾಡ್​ ಪಿಟ್​ ಅವರು ಹಾಲಿವುಡ್ ನಟಿ ಜೆನ್ನಿಫರ್ ಅನಿಸ್ಟನ್ ಅವರ ಪತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಜೆನ್ನಿಫರ್​ ಅವರ ಪತಿಯನ್ನು ಕದ್ದ ಆರೋಪ ಏಂಜಲೀನಾ ಅವರ ಮೇಲಿದೆ. ಇಷ್ಟೆಲ್ಲಾ ಗಲಾಟೆಯಾದ ಮೇಲೆ ಬ್ರಾಡ್​ ಪಿಟ್​ ಅವರು ಮೊದಲ ಪತ್ನಿಗೆ ವಿಚ್ಛೇದನ ಕೊಟ್ಟರು. 

 ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ (Britney Spears) ಮೂರು ಬಾರಿ ಮದುವೆಯಾಗಿದ್ದಾರೆ. 2004 ರಲ್ಲಿ ಕೆವಿನ್ ಫೆಡೆರ್ಲೈನ್ ​​ಅವರೊಂದಿಗೆ ಬ್ರಿಟ್ನಿ ಅವರ ಎರಡನೇ ಮದುವೆಯಾಯಿತು. ಆದರೆ ಕೆವಿನ್​ ಅವರಿಗೆ ಅದಾಗಲೇ ಮದುವೆಯಾಗಿತ್ತು. ನಟಿ ಶಾರ್ ಜಾಕ್ಸನ್ ಅವರು ಗರ್ಭಿಣಿಯಾಗಿದ್ದಾಗ ಅವರನ್ನು ಬಿಟ್ಟು ಕೆವಿನ್​ ಬ್ರಿಟ್ನಿ ಜೊತೆ ಮದುವೆಯಾಗಿದ್ದರು. ಬ್ರಿಟ್ನಿ ತಮ್ಮ ಪತಿಯನ್ನು ಕದ್ದಿರುವುದಾಗಿ ನಟಿ ಶಾರ್​ ಜಾಕ್ಸನ್​ ಆರೋಪಿಸಿದ್ದರು. ಹೀಗೆ ಬೇರೊಬ್ಬರ ಪತಿಯನ್ನು ಕದ್ದು ಮದುವೆಯಾದರೂ ಈ ದಂಪತಿ ಹೆಚ್ಚು ಕಾಲ ಒಟ್ಟಿಗೇ ಇರಲಿಲ್ಲ.  ಇವರಿಬ್ಬರು  2007 ರಲ್ಲಿ ವಿಚ್ಛೇದನ (Divorce) ಪಡೆದುಕೊಂಡರು. 

\ಬೆಂಗಳೂರಲ್ಲೇ ಡೆಲಿವರಿ ಆದ್ಮೇಲೂ ಬೇಬಿ ಬಂಪ್​ನಲ್ಲಿ ಕಾಣಿಸಿಕೊಂಡ ದೀಪಿಕಾ? ತಲೆ ಕೆಡಿಸಿಕೊಂಡ ಫ್ಯಾನ್ಸ್​

Latest Videos
Follow Us:
Download App:
  • android
  • ios