Asianet Suvarna News Asianet Suvarna News

ತೆಲುಗು ಸ್ಟಾರ್ ನಿತಿನ್ ಸಿನಿಮಾದಿಂದ ರಶ್ಮಿಕಾ ಔಟ್: ಕಾರಣವೇನು?

ತೆಲುಗು ಸ್ಟಾರ್ ನಿತಿನ್ ಜೊತೆ ಹೊಸ ಸಿನಿಮಾ ಒಪ್ಪಿಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣ ಚಿತ್ರದಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

Rashmika Mandanna walks out of Nithiin and director Venky Kudumula film sgk
Author
First Published Jul 13, 2023, 3:23 PM IST | Last Updated Jul 13, 2023, 3:23 PM IST

ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್, ಟಾಲಿವುಡ್ ಅಂತ ರಶ್ಮಿಕಾ ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿದ್ದಾರೆ. ತೆಲುಗಿನಲ್ಲಿ ರಶ್ಮಿಕಾ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ ಸದ್ಯ ಪುಷ್ಪ-2 ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಮೊದಲ ಭಾಗ ಸೂಪರ್ ಸಕ್ಸಸ್ ಆದ ಕಾರಣ ಪಾರ್ಟ್-2 ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಜೊತೆಗೆ ರಶ್ಮಿಕಾ ಮತ್ತೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಆದರೀಗ ಮತ್ತೊಂದು ತೆಲುಗು ಸಿನಿಮಾದಿಂದ ರಶ್ಮಿಕಾ ಔಟ್ ಆಗಿದ್ದಾರೆ. 

ತೆಲುಗು ಸ್ಟಾರ್ ನಿತಿನ್‌ಗೆ ರಶ್ಮಿಕಾ ಮತ್ತೆ ಜೋಡಿಯಾಗಿದ್ದರು. ಈ ಮೊದಲು ಭೀಷ್ಮಾ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾಗೆ ವೆಂಕಿ ಕುಡುಮಲ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಆ ಸಿನಿಮಾ ಸಕ್ಸಸ್ ಬಳಿಕ ಅದೇ ತಂಡ ಮತ್ತೆ ಒಂದಾಗಿತ್ತು. ಹೊಸ ಸಿನಿಮಾ ಕೂಡ ಅನೌನ್ಸ್ ಮಾಡಿದ್ದರು. ಇನ್ನೇನು ಈ ಸಿನಿಮಾ ಪ್ರಾರಂಭವಾಗಬೇಕು ಎನ್ನುವಾಗಲೇ ಅಭಿಮಾನಿಗಳಿಗೆ ಬೇಸರದ ಸುದ್ದಿ ಹೊರಬಿದ್ದಿದೆ. ಈ ಸಿನಿಮಾ ಪ್ರಾರಂಭವಾಗುವ ಮೊದಲೇ ರಶ್ಮಿಕಾ ಹೊರಬಂದಿದ್ದಾರೆ ಎನ್ನಲಾಗಿದೆ. 

ಅಂದಹಾಗೆ ಸಿನಿಮಾದಿಂದ ಹೊರ ನಡೆಯುವ ಈ ನಿರ್ಧಾರ  ಪರಸ್ಪರ ನಿರ್ಧಾರವಾಗಿದೆ ಎನ್ನಲಾಗಿದೆ. ಡೇಟ್ ಸಮಸ್ಯೆಯಿಂದ ರಶ್ಮಿಕಾ ಹೊರಬಂದಿದ್ದಾರೆ ಎನ್ನಲಾಗಿದೆ. ಈಗಾಗಲೇ ರಶ್ಮಿಕಾ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ರಶ್ಮಿಕಾ ಈಗಾಗಲೇ ಈ ಬಗ್ಗೆ ನಿರ್ಮಾಪಕರ ಜೊತೆ ಚರ್ಚೆ ಮಾಡಿದ್ದು ಸಿನಿಮಾದಿಂದ ಹೊರಗುಳಿಸುವ ಬಗ್ಗೆ ಮಾನಾಡಿದ್ದಾರೆ ಎನ್ನಲಾಗಿದೆ.  

ರಶ್ಮಿಕಾ ಮಂದಣ್ಣ ಕೈಯಿಂದ ಫೋನ್ ಕಿತ್ತುಕೊಂಡು ಅಭಿಮಾನಿಯ ಅಸಭ್ಯ ವರ್ತನೆ, ವಿಡಿಯೋ ವೈರಲ್‌!

ಸದ್ಯ ರಶ್ಮಿಕಾ ಹೊರ ಬಂದಿರುವ ಜಾಗಕ್ಕೆ  ಯಾರು ಎಂಟ್ರಿ ಕೊಡುತ್ತಾರೆ ಎಂದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ರಶ್ಮಿಕಾ ಈ ಸಿನಿಮಾದಿಂದ ಹೊರಬಂದಿದ್ದು ನಿಜಕ್ಕೂ ಡೇಟ್ ಸಮಸ್ಯೆಯಿಂದನಾ ಅಥವಾ ಬೇರೆ ಇನ್ನೇನಾದ್ರು ಕಾರಣ ಇದಿಯಾ ಎನ್ನುವ ಅನುಮಾನ ಕಾಡುತ್ತಿದೆ. ಈ ಬಗ್ಗೆ ನಿಜಕ್ಕೂ ರಶ್ಮಿಕಾನೇ ಉತ್ತರ ನೀಡಬೇಕಿದೆ. 

ಕನ್ನಡದಲ್ಲಿ ಮಾತನಾಡಿ ಮತ್ತೆ ಟ್ರೋಲ್ 

ಇತ್ತೀಚಿನ ದಿನಗಳಲ್ಲಿ ಕನ್ನಡ ಹಾಗೂ ಕನ್ನಡ ಸಿನಿಮಾ ಪ್ರೇಮಿಗಳ ಮೇಲೆ ಅಪಾರ ಆಸಕ್ತಿ ತೋರುತ್ತಿರುವಂತಹ ರಶ್ಮಿಕಾ ಕನ್ನಡದಲ್ಲಿ ಮಾತನಾಡಿ ಮತ್ತೆ ಟ್ರೋಲ್ ಆಗಿದ್ದಾರೆ.  ಕನ್ನಡದಲ್ಲಿ ಎರಡು ಸಾಲು ಮಾತನಾಡುವುದರಲ್ಲಿಯೇ ರಶ್ಮಿಕಾ ಎಡವಟ್ಟು ಮಾಡಿಕೊಂಡಿದ್ದಾರೆ. ರಶ್ಮಿಕಾ ಮಾತನಾಡಿರುವ ಕನ್ನಡ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

ಕನ್ನಡಿಗರಿಗೆ 'ಯಾವಾಗಲೂ ನೌತಾ ಇರಿ' ಎಂದ ರಶ್ಮಿಕಾ: ಮತ್ತೆ ಟ್ರೋಲಿಗರ ಕೆಂಗಣ್ಣಿಗೆ ಬಿದ್ದ ಕಿರಿಕ್ ಬೆಡಗಿ

'ಎಲ್ಲರೂ ಹೇಗಿದ್ದೀರಾ? ನಾನು ಚೆನ್ನಾಗಿದ್ದೀನಿ ಯಾವಾಗಲೂ ನೌತಾ ಇರಿ. ನಾನು ನಿಮ್ಮ ಬಗ್ಗೆ ಯೋಚಿಸುತ್ತಿರುತ್ತೇನೆ' ಎಂದಿದ್ದಾರೆ. 'ಯಾವಾಗಲೂ ನಗ್ತಾ ಇರಿ' ಎನ್ನುವ ಬದಲು 'ಎಲ್ಲರೂ ಯಾವಾಗಲೂ ನೌತಾ ಇರಿ' ಎಂದಿದ್ದಾರೆ. ರಶ್ಮಿಕಾ ತಪ್ಪಾಗಿ ಕನ್ನಡ ಮಾತನಾಡಿರುವುದು ಟ್ರೋಲಿಗರಿಗೆ ಆಹಾರವಾಗಿದೆ. ಸದಾ ಒಂದಲ್ಲ ಒಂದು ವಿಚಾರದಿಂದ ಟ್ರೊಲ್ ಆಗುವ ರಶ್ಮಿಕಾ ಸಾಕಷ್ಟು ದಿನಗಳಿಂದ ಟ್ರೋಲ್ ಗಳಿಂದ ದೂರ ಉಳಿದುಕೊಂಡಿದ್ದರು. ಆದರೆ ಈಗ ಮತ್ತೆ ಕನ್ನಡ ತಪ್ಪಾಗಿ ಮಾತನಾಡಿ ಟ್ರೋಲ್ ಪೇಜ್ ಗಳಲ್ಲಿ  ಸದ್ದು ಮಾಡ್ತಿದ್ದಾರೆ.

Latest Videos
Follow Us:
Download App:
  • android
  • ios