ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ಜೋರಾಗಿದೆ. ರಶ್ಮಿಕಾ, ವಿಜಯ್ ಕುಟುಂಬದೊಂದಿಗೆ ಪುಷ್ಪ 2 ವೀಕ್ಷಿಸಿದ ಫೋಟೋಗಳು ವೈರಲ್ ಆಗಿವೆ. ಆರು ತಿಂಗಳಲ್ಲಿ ಮದುವೆ ಎಂಬ ಗುಲ್ಲು ಹಬ್ಬಿದ್ದು, ವಿಜಯ್ ತಂದೆ ಒಂದು ವರ್ಷದೊಳಗೆ ಮದುವೆ ಸಾಧ್ಯತೆ ಸೂಚಿಸಿದ್ದಾರೆ. ರಶ್ಮಿಕಾ ಪ್ರೀತಿಯ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರೀತಿಯ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆಗಳು ಯಾವಾಗಲೂ ನಡೆಯುತ್ತಿವೆ. ಇಬ್ಬರೂ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಕುಟುಂಬದೊಂದಿಗೆ ಪುಷ್ಪ 2 ಚಿತ್ರ ವೀಕ್ಷಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದಾದ ಬಳಿಕ ಇವರಿಬ್ಬರೂ ಡೇಟಿಂಗ್‌ ಮಾಡುತ್ತಿರುವ ಬಗ್ಗೆ ಇನ್ನಷ್ಟು ಸ್ಪಷ್ಟನೆ ಸಿಕ್ಕಿದೆ.

ಇದರ ಬೆನ್ನಲ್ಲೇ ಇವರಿಬ್ಬರ ಮದುವೆ 6 ತಿಂಗಳಿನಲ್ಲಿ ನಡೆಯಲಿದೆ ಎಂದು ಗುಲ್ಲೆದ್ದಿದೆ. ಅದಕ್ಕಾಗಿ ತಯಾರಿ ನಡೆಯುತ್ತಿದ್ದು, ಸೀಕ್ರೆಟ್ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗಿದೆ. 2025ರ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ತೆಲುಗು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಇಷ್ಟೆಲ್ಲ ರೂಮರ್ಸ್ ಇದ್ದರೂ ಎಲ್ಲಿ ಕೂಡ ಇಬ್ಬರು ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿಲ್ಲ. ಇತ್ತೀಚೆಗೆ ರೆಸ್ಟೋರೆಂಟ್‌ ನಲ್ಲಿ ಇಬ್ಬರೂ ಡಿನ್ನರ್ ಡೇಟ್‌ ನಲ್ಲಿರುವ ಫೋಟೋ ವೈರಲ್ ಆಗಿತ್ತು.

ದಕ್ಷಿಣ ಭಾರತದ ಟಾಪ್ 10 ಶ್ರೀಮಂತ ನಟಿಯರು, 100 ಕೋಟಿ ದಾಟಿದವರು ಯಾರು?

ಪುಷ್ಪ 2 ಪ್ರಚಾರದ ವೇಳೆ, ನಿಮ್ಮ ಮದುವೆ ಆಗಲಿರುವವರು ನಟರೇ? ಎಂಬ ಪ್ರಶ್ನೆಗೆ, ರಶ್ಮಿಕಾ ಎಲ್ಲರಿಗೂ ಗೊತ್ತಲ್ಲವೇ ಎಂದಿದ್ದಾರೆ. ವಿಜಯ್ ದೇವರಕೊಂಡ ( vijay devarakonda) 37 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಶೀಘ್ರದಲ್ಲೇ ಮದುವೆಯಾಗಬಹುದು ಎಂಬ ಊಹಾಪೋಹಗಳಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ವರ್ಷದ ಆರಂಭದಲ್ಲಿ ವಿಜಯ್‌ ಮುಂದಿನ ವರ್ಷದ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಎಂದು ಹೇಳಿದ್ದರು.

ರಶ್ಮಿಕಾ ಸತತ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ವಿಜಯ್ ದೇವರಕೊಂಡ ಇತ್ತೀಚೆಗೆ ಹಿನ್ನಡೆ ಅನುಭವಿಸಿದ್ದಾರೆ. ವಿಜಯ್ ದೇವರಕೊಂಡ ಗೌತಮ್ ತಿಣ್ಣನೂರಿ ಮತ್ತು ದಿಲ್ ರಾಜು ನಿರ್ಮಾಣದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 2025ರ ಮಾರ್ಚ್‌ ನಲ್ಲಿ ಈ ಸಿನೆಮಾ ಬಿಡುಗಡೆ ಕಾಣಲಿದೆ. ಈ ಚಿತ್ರಗಳ ನಂತರ ಮದುವೆಯಾಗುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಪುಷ್ಪ 2 ಚಿತ್ರದ 7 ತಾರೆಯರು ಎಷ್ಟು ಓದಿದ್ದಾರೆ? ಯಾರು ಹೆಚ್ಚು ವಿದ್ಯಾವಂತರು?

ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಅವರ ತಂದೆ ಗೋವರ್ಧನ್ ಅವರು ತಮ್ಮ ಮಗನ ಮದುವೆಯ ಬಗ್ಗೆ ಮಾತನಾಡಿದ್ದರು. ಸದ್ಯ ಚಿತ್ರಗಳಲ್ಲಿ ಬ್ಯುಸಿ ಇದ್ದಾನೆ. ಸಂಕ್ರಾಂತಿಯ ನಂತರ ಮೈತ್ರಿ ಮೂವೀಸ್‌ನೊಂದಿಗೆ ಹೊಸ ಯೋಜನೆ ಮತ್ತು ಅದರ ನಂತರ ದಿಲ್ ರಾಜು ಅವರ ನಿರ್ಮಾಣದೊಂದಿಗೆ ಮತ್ತೊಂದು ಚಿತ್ರ ಇದೆ. ಮದುವೆಯನ್ನು ಸರಿಯಾದ ಸಮಯದಲ್ಲಿ ಪರಿಗಣಿಸಲಾಗುವುದು. ಆರು ತಿಂಗಳಿಂದ ಒಂದು ವರ್ಷದ ಒಳಗೆ ಮದುವೆಯಾಗಬಹುದು ಎಂದಿದ್ದಾರೆ. 

'ಪುಷ್ಪ-2' ಸಿನಿಮಾ ಗೆಲುವಿನ ಖುಷಿಯಲ್ಲಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಮುಂದಿನ ಚಿತ್ರ ದಿ ಗರ್ಲ್ ಫ್ರೆಂಡ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ವಿಜಯ್ ದೇವರಕೊಂಡ 'ದಿ ಗರ್ಲ್ ಫ್ರೆಂಡ್' ಟೀಸರ್ ರಿಲೀಸ್‌ ಮಾಡಿದ್ದು, ಟೀಸರ್ ಗೆ ಧ್ವನಿಯಾಗಿದ್ದಾರೆ. 

ವಿಜಯ್ ದೇವರಕೊಂಡ ಜೊತೆ 6 ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ರಶ್ಮಿಕಾ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಸದ್ಯ ಸಲ್ಮಾನ್ ಖಾನ್ ಜೊತೆಗೆ ಸಿಕಂದರ್ ಸಿನಿಮಾದಲ್ಲಿ ನಟಿಸ್ತಾ ಇರೋ ರಶ್ಮಿಕಾ, ಅದಕ್ಕೆ ಪಡೆದಿರೋ ಸಂಭಾವನೆ ಬರೊಬ್ಬರಿ 10 ಕೋಟಿ. ಇಡೀ ಇಂಡಿಯನ್ ಸಿನಿಲೋಕದಲ್ಲಿ ಅತಿಹೆಚ್ಚು ಸಂಭಾವನೆ ಪಡೆದಿರೋ ನಟಿ ಅನ್ನೋ ಪಟ್ಟ ಗಳಿಸಿಕೊಂಡಿದ್ದಾರೆ