Asianet Suvarna News Asianet Suvarna News

ಮೈ ಕಾಣೊ ಬಟ್ಟೆ ಧರಿಸಿ ಗಣೇಶ ದರ್ಶನ ಮಾಡಿದ ರಶ್ಮಿಕಾ ಮಂದಣ್ಣ ವಿರುದ್ಧ ನೆಟ್ಟಿಗರ ಆಕ್ರೋಶ

ಬಾಲವುಡ್ ಸೇರಿದಮೇಲೆ ನಟಿ ರಶ್ಮಿಕಾ ಮಂದಣ್ಣ ಸಹ ಸಿಕ್ಕಾಪಟ್ಟೆ ಬೋಲ್ಡ್ ಆಗಿದೆ. ಆಗಾಗ ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸುತ್ತಾರೆ. ರಶ್ಮಿಕಾ ಮಂದಣ್ಣ ಸದ್ಯ ಮೈ ಕಾಣುವ ಬಟ್ಟೆ ಧರಿಸಿ ಗಣೇಶನ ದರ್ಶನ ಮಾಡಿದ್ದಾರೆ.ರಶ್ಮಿಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 

Rashmika Mandanna Trolled For Revealing Outfit At Ganesh Pandal in mumbai sgk
Author
First Published Sep 7, 2022, 5:01 PM IST

ನಟಿಮಣಿಯರು ಹೆಚ್ಚಾಗಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಅದರಲ್ಲೂ ಬಾಲಿವುಡ್ ಮಂದಿಯಂತು ಹೆಚ್ಚಾಗಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಯಾವುದೇ ಕಾರ್ಯಕ್ರಮ ಆಗಿದ್ದರೂ ಸಹ ಬೋಲ್ಡ್ ಅವತಾರದಲ್ಲಿ ದರ್ಶನ ನೀಡುತ್ತಾರೆ. ಬಾಲವುಡ್ ಸೇರಿದಮೇಲೆ ನಟಿ ರಶ್ಮಿಕಾ ಮಂದಣ್ಣ ಸಹ ಸಿಕ್ಕಾಪಟ್ಟೆ ಬೋಲ್ಡ್ ಆಗಿದೆ. ಆಗಾಗ ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸುತ್ತಾರೆ. ಇನ್ನು ಕೆಲವು ಬಾರಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಅದರಲ್ಲೂ ದೇವಸ್ಥಾನಗಳಿಗೆ, ದೇವರ ದರ್ಶನ ಮಾಡುವಾಗ ಬೋಲ್ಡ್ ಆಗಿ ಕಾಣಿಸಿಕೊಂಡರೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ. ಇದೀಗ ರಶ್ಮಿಕಾ ಮಂದಣ್ಣ ಕೂಡ ಮೈ ಕಾಣುವ ಬಟ್ಟೆ ಧರಿಸಿ ಗಣೇಶನ ದರ್ಶನ ಮಾಡಿದ್ದಾರೆ. ರಶ್ಮಿಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಶ್ಮಿಕಾ ನೋಡಿದ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. 

ಪುಷ್ಪ ನಟಿ ಇತ್ತೀಚಿಗಷ್ಟೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ರಶ್ಮಿಕಾ ಮಂದಣ್ಣ ನಟನೆಯ ಗುಡ್ ಬೈ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ರಶ್ಮಿಕಾ ಭಾಗಿಯಾಗಿದ್ದರು. ಇದು ರಶ್ಮಿಕಾ ನಟನೆಯ ಮೊದಲ ಹಿಂದಿ ಸಿನಿಮಾದ ಟ್ರೈಲರ್ ಆಗಿದೆ. ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ತೆರೆಹಂಚಿಕೊಂಡಿರುವ ಸಿನಿಮಾವಿದು.  ಈ ಸಿನಿಮಾದ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಗುಡ್‌ಬೈ ಟ್ರೈಲರ್ ರಿಲೀಸ್ ಈವೆಂಟ್ ಬಳಿಕ ಕಿರಿಕ್ ಪಾರ್ಟಿ ನಟಿ ಪಕ್ಕಲ್ಲದೇ ಇದ್ದ ಗಣೇಶನ ದರ್ಶನ ಪಡೆದಿದ್ದಾರೆ. ಮುಂಬೈನ ಲಾಲ್‌ಬಾಗ್‌ನಲ್ಲಿರು ಪ್ರಸಿದ್ಧ ಗಣೇಶನ ದರ್ಶನ ಪಡೆಯಲು ರಾಜ ಗಣೇಶ ಪೆಂಡಲ್‌ಗೆ ಭೇಟಿಕೊಟ್ಟಿದ್ದರು. ಟ್ರೈಲರ್ ರಿಲೀಸ್ ಈವೆಂಟ್‌ಗೆ ಹಾಕಿದ್ದ ಡ್ರೆಸ್ ಅನ್ನೇ ಧರಿಸಿ ಗಣೇಶನ ದರ್ಶನ ಮಾಡಿದ್ದಾರೆ. 

ಹಿಂದಿ ಸಿನಿಮಾದ ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿದ್ದು ಹೀಗೆ

ರಶ್ಮಿಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಡೀಪ್ ನೆಟ್ ಬಿಕಿನಿ ಬ್ಲೌಸ್ ಧರಿಸಿದ್ದ ರಶ್ಮಿಕಾಗೆ ನೆಟ್ಟಿಗರು ಉತ್ತಮ ಬಟ್ಟೆ ಹಾಕಿ ಹೋಗಲಿಕ್ಕೆ ಆಗಲ್ವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಗಣೇಶನ ದರ್ಶನಕ್ಕಾದರೂ ಸರಿಯಾದ ಬಟ್ಟೆ ಧರಿಸಿ ಹೋಗಬೇಕಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಅಂದಹಾಗೆ ರಶ್ಮಿಕಾ ಜೊತೆ ನಿರ್ಮಾಪಕಿ ಏಕ್ತಾ ಕಪೂರ್ ಕೂಡ ಎಂಟ್ರಿ ಕೊಟ್ಟಿದ್ದರು.    

ಸೈಲೆಂಟಾಗಿ ಹೊಸ ಸಿನಿಮಾ ಅನೌನ್ಸ್‌ ಮಾಡಿದ ರಶ್ಮಿಕಾ ಮಂದಣ್ಣ; ಇದು Mega Blockbuster!

ಗುಡ್ ಬೈ ಸಿನಿಮಾ ಬಗ್ಗೇ ಹೇಳುವುದಾರೆ, ರಶ್ಮಿಕಾ ಮಂದಣ್ಣ ಅಮಿತಾಭ್ ಬಚ್ಚನ್ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಅಭಿಮಾನಿಗಲ ಮೆಚ್ಚುಗೆಗೆ ಪಾತ್ರವಾಗಿದೆ. ಇದು ರಶ್ಮಿಕಾ ನಟನೆಯ ಮೊದಲ ಹಿಂದಿ ಟ್ರೈಲರ್ ಆಗಿದೆ. ಅಂದಹಾಗೆ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಗಲೇ ರಶ್ಮಿಕಾ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಆ ಸಿನಿಮಾ ಕೂಡ ರಿಲೀಸ್ ಆಗಬೇಕಿದೆ. ಸದ್ಯ ರಣಬೀರ್ ಕಪೂರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಬಳಿಕ ಟೈಗರ್ ಶ್ರಾಫ್ ಜೊತೆ ಮತ್ತೊಂದು ಹಿಂದಿ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ. 

ತೆಲುಗಿನಲ್ಲಿ ರಶ್ಮಿಕಾ ಬಹುನಿರೀಕ್ಷೆಯ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ , ಅಲ್ಲು ಅರ್ಜುನ್ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಭಾಗದಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ರಶ್ಮಿಕಾ ಎರಡನೇ ಭಾಗದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.      

Follow Us:
Download App:
  • android
  • ios