Asianet Suvarna News Asianet Suvarna News

ಲಿಪ್‌ ಟು ಲಿಪ್ ಕಿಸ್ ಬಗ್ಗೆ ರಶ್ಮಿಕಾ ಮಂದಣ್ಣ ಹಿಂಗನ್ನೋದಾ?

ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಈ ನಟಿ ಲಿಪ್‌ ಟು ಲಿಪ್ ಕಿಸ್ ಮಾಡೋದರ ಬಗ್ಗೆ ಹೇಳಿರೋ ಮಾತು ವೈರಲ್ ಆಗ್ತಿದೆ. 

Rashmika mandanna opinion about lip to lip kiss
Author
First Published Nov 28, 2023, 12:30 PM IST

ಕನ್ನಡ ಸಿನಿಮಾ 'ಕಿರಿಕ್ ಪಾರ್ಟಿ' ಮೂಲಕ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ರಶ್ಮಿಕಾ ಮಂದಣ್ಣ ಇದೀಗ ನ್ಯಾಶನಲ್ ಕ್ರಶ್ ಆಗಿ ಬದಲಾಗಿದ್ದಾರೆ. ಸೌತ್ ಇಂಡಸ್ಟ್ರಿಯಲ್ಲಿ ಮಿಂಚಿ ಬಾಲಿವುಡ್‌ನಲ್ಲೂ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ರಶ್ಮಿಕಾ ಆಟಿಟ್ಯೂಡ್ ಬಗ್ಗೆ ಪಾಸಿಟಿವ್‌ಗಿಂತಲೂ ನೆಗೆಟಿವ್ ಒಪೀನಿಯನ್ ಹೆಚ್ಚಿದೆ. ಇದಕ್ಕೆ ಈ ನಟಿ ಕೊಡೋ ಕೆಲವು ಹೇಳಿಕೆಗಳು ಕಾರಣ ಅಂದರೆ ತಪ್ಪಲ್ಲ. ಆದರೂ ಈ ಕ್ಯೂಟ್ ಹುಡುಗಿ ಕೊಂಚ ಜಂಭದ ಕೋಳಿ ಥರ ಆಡೋಕೆ ಶುರು ಮಾಡಿದ ಕೂಡಲೇ ಟ್ರೋಲಿಗರು ಹಂಗೇ ಚಿವುಟಿ ಜಂಭವನ್ನೆಲ್ಲ ಇಳಿಸ್ತಿರೋದು ಒಂದಿಷ್ಟು ಘಟನೆಗಳಲ್ಲಿ ರಿವೀಲ್ ಆಗಿದೆ. ಇದೀಗ ಅನಿಮಲ್ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ರಶ್ಮಿಕಾಗೆ ಲಿಪ್ ಟು ಲಿಪ್ ಕಿಸ್ ಬಗೆಗಿನ ಪ್ರಶ್ನೆ ಎದುರಾಗಿದೆ. ಇದಕ್ಕೆ ರಶ್ಮಿಕಾ ಉತ್ತರ ಕೊಟ್ಟ ರೀತಿಗೆ, 'ಪರವಾಗಿಲ್ವೇ, ಹುಡುಗಿ ಜಾಣೆ ಆಗ್ತಿದ್ದಾಳೆ' ಅನ್ನೋ ಉತ್ತರ ಸಿಕ್ಕಿದೆ.

ಹಾಗೆ ನೋಡಿದರೆ ರಶ್ಮಿಕ ಮಂದಣ್ಣ ಬ್ರೇಕ್‌ಅಪ್ ಹಿಂದೆಯೂ ಈ ಲಿಪ್‌ ಟು ಲಿಪ್ ಮಹತ್ವದ ಪಾತ್ರ ವಹಿಸಿತ್ತು ಅನ್ನೋದನ್ನು ಸಾಕಷ್ಟು ಮಂದಿ ಗುಲ್ಲೆಬ್ಬಿಸಿದ್ದರು. ರಕ್ಷಿತ್ ಶೆಟ್ಟಿ ಜೊತೆಗೆ ಎಂಗೇಜ್‌ಮೆಂಟ್ ಆದ ಬೆನ್ನಲ್ಲೇ ವಿಜಯ ದೇವರಕೊಂಡ ಜೊತೆಗೆ ಮೊದಲ ಸಿನಿಮಾದಲ್ಲಿ ನಟಿಸಿದ ರಶ್ಮಿಕಾ ಲಿಪ್ ಟು ಲಿಪ್ ಕಿಸ್ ಮಾಡಿದ್ದು ಸಿನಿಮಾಕ್ಕಿಂತ ಜೋರು ಸದ್ದು ಮಾಡಿತ್ತು. ಆದರೆ ಗೀತ ಗೋವಿಂದಂ ಸಿನಿಮಾ ಬಂದಾಗ ಭಾರೀ ನಿರೀಕ್ಷೆಯಲ್ಲಿದ್ದ ಕೆಲವು ಸ್ಯಾಡಿಸ್ಟ್ ಗಳಿಗೆ ನಿರಾಸೆ ಆಯ್ತು. ಅವರು ನಿರೀಕ್ಷಿಸಿದಂಥಾ ಸೀನ್‌ಗಳು ಅದರಲ್ಲಿ ಇರಲಿಲ್ಲ. ಸಿನಿಮಾ ರಿಲೀಸ್‌ಗೂ ಮೊದಲೇ ಸದ್ದು ಮಾಡಿದ್ದು ಲಿಪ್‌ ಟು ಲಿಪ್ ಕಿಸ್ ಸಿನಿಮಾ ರಿಲೀಸ್ ಆದ್ಮೇಲೆ ಸದ್ದು ಮಾಡಲಿಲ್ಲ.

ಬ್ಲ್ಯಾಕ್‌ ಡ್ರೆಸ್‌ನಲ್ಲಿ ಹಾಟ್‌ ಪೋಸ್‌ ಕೊಟ್ಟ ಹೀರೋಯಿನ್ಸ್: ಫ್ಯಾನ್ಸ್‌ಗಳಿಗೆ ಅತಿಹೆಚ್ಚು ಇಷ್ಟವಾದ ನಟಿ ಯಾರು!

ಈಗ ಅನಿಮಲ್ ಸಿನಿಮಾದಲ್ಲಿ ವಿವಾಹಿತ ನಟ ರಣಬೀರ್ ಕಪೂರ್ ಜೊತೆಗೆ ರಶ್ಮಿಕಾ ಲಿಪ್ ಟು ಲಿಪ್ ಕಿಸ್ ಭಾರೀ ಸೌಂಡ್ ಮಾಡ್ತಿದೆ. ಆ ದೃಶ್ಯ ಅಲ್ಲಿ ನಿಜಕ್ಕೂ ಬೇಕಿತ್ತಾ? ಆ ಸೀನ್ ಹೇಗೆ ಫ್ರೇಮ್ ಮಾಡಲಾಯ್ತು ಎಂದು ಪ್ರಶ್ನೆ ಕೇಳಿದ್ದಾರೆ.

'ಕಿಸ್ಸಿಂಗ್ ಸೀನ್ ಅನ್ನೋದು ನಿರ್ದೇಶಕರು ತಮ್ಮ ಶೈಲಿಯಲ್ಲಿ ಪ್ರೀತಿಯ ಕಥೆಯನ್ನು ಹೇಳುವುದಕ್ಕೆ ಇರುವ ಎಕ್ಸ್‌ಪ್ರೆಶನ್. ಕಿಸ್ಸಿಂಗ್ (kissing) ಸೀನ್ ಬೇಕಾ ಬೇಡವಾ ಅನ್ನೋದು ನಿರ್ದೇಶಕರ ಮೇಲೆ ನಿರ್ಧಾರ ಆಗುತ್ತೆ. ಕಿಸ್ ಸೀನ್ ಅನ್ನೋದು ನಿರ್ದೇಶಕರಿಗೆ ಒಂದು ಸ್ಟೋರಿಯನ್ನು ಹೇಳುವುದಕ್ಕೆ ಇರುವ ಒಂದು ವಿಧಾನ. ನಿರ್ದೇಶಕರು ಏನು ಅಂದುಕೊಂಡಿದ್ದಾರೋ ಅದನ್ನು ನಾವು ಎಷ್ಟು ಅದ್ಭುತವಾಗಿ ನಟಿಸಿ ತೋರಿಸುತ್ತೇವೆಯೋ ಅದು ಇಲ್ಲಿ ಮುಖ್ಯ ಆಗುತ್ತೆ. ಇದು ನಿರ್ದೇಶಕರ ಮೇಲೆ ನಾವು ಇಟ್ಟಿರುವ ನಂಬಿಕೆ. ಡೈರೆಕ್ಟರ್‌ಗೆ (director) ಇದು ಸರಿ ಇದೆಯೋ? ಇಲ್ಲವೋ ಅನ್ನೋದನ್ನು ನಾವು ಸೂಚನೆ ನೀಡಬಹುದು ಅಷ್ಟೇ. ಆದರೆ ಫೈನಲ್ (final) ನಿರ್ಧಾರ ಅವರದ್ದೇ ಆಗಿರುತ್ತೆ.

ಸ್ತ್ರೀವಾದ ಎನ್ನುವ ಹುಚ್ಚಾಟ ಬಿಟ್ಟು ಕೆಲಸದತ್ತ ಗಮನ ಕೊಡಿ: ಗಂಡು-ಹೆಣ್ಣು ಸಮಾನರಲ್ಲ; ನಟಿ ನೀನಾ ಗುಪ್ತಾ

ನಿರ್ದೇಶಕರಿಗೆ ಅದು ಬೇಕು ಅಂದರೆ, ನಾವು ಮಾಡಬೇಕು. ಹೀಗೆ ಮಾಡುವುದರಿಂದ ಸಿನಿಮಾ ಮ್ಯಾಸಿವ್ ಹಿಟ್ (hit) ಆಗುತ್ತೆ ಅಂತ ಮಾಡಿದ್ದಲ್ಲ. ನಿರ್ದೇಶಕರಿಗೆ ಇದು ಬೇಕು ಅಂದಾಗ ಮಾಡುತ್ತೇವೆ. ನಿರ್ದೇಶಕರ ನಿರ್ಧಾರವನ್ನು ಕಣ್ಮುಚ್ಚಿ ಒಪ್ಪಿಕೊಳ್ಳುತ್ತೇವೆ. ಅದನ್ನೇ ನಾನು ಮಾಡಿದ್ದೇನೆ' ಅಂತ ರಶ್ಮಿಕಾ ಪ್ರಬುದ್ಧ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. ನಾನು ಮಾಡಿರುವ ಚಿತ್ರಗಳಲ್ಲೇ ಅನಿಮಲ್ ಸಿನಿಮಾದ್ದು ಅತ್ಯಂತ ಅದ್ಭುತವಾದ ಪಾತ್ರ ಅಂತಲೂ ರಶ್ಮಿಕಾ ಹೇಳಿದ್ದಾರೆ. ಪರವಾಗಿಲ್ವೇ, ಹುಡುಗಿ ಈಗೀಗ ಸ್ವಲ್ಪ ಯೋಚ್ನೆ ಮಾಡಿ ಉತ್ತರ ಕೊಡೋದು ಕಲ್ತಿದ್ದಾಳೆ ಅಂತ ನೆಟ್ಟಿಗರು ಹೇಳ್ತಿದ್ದಾರೆ.

Follow Us:
Download App:
  • android
  • ios