Asianet Suvarna News Asianet Suvarna News

ಅಪರಾಧ ಎಸಗಿದವರಿಗೆ ತಕ್ಕ ಶಾಸ್ತಿ ಆಯ್ತು; ಖುಷಿಯಿಂದ 'ಧನ್ಯವಾದ' ತಿಳಿಸಿದ ರಶ್ಮಿಕಾ ಮಂದಣ್ಣ

ಸಾಮಾಜಿಕ ಜಾಲತಾಣ 'X'ನಲ್ಲಿ ಬರೆದುಕೊಂಡಿರುವ ನಟಿ ರಶ್ಮಿಕಾ 'ಆ ಕೃತ್ಯಕ್ಕೆ ಕಾರಣರಾದರನ್ನು ಹೆಡೆಮುರಿ ಕಟ್ಟಿದ್ದಕ್ಕಾಗಿ ದೆಹಲಿ ಪೊಲೀಸ್ (ಆಫೀಸಿಯಲ್) ಗೆ ನನ್ನ ಹೃದಯಪೂರ್ವಕ ಧನ್ಯವಾದಗಳು' ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ. 

Rashmika Mandanna gratitude to delhi police for arresting deepfake video culprit srb
Author
First Published Jan 21, 2024, 3:01 PM IST

ನ್ಯಾಷನಲ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ದೆಹಲಿ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ತಮ್ಮ ಡೀಪ್‌ಫೇಕ್ ವೀಡಿಯೋ ಮಾಡಿ ಇಂಟರ್‌ನೆಟ್‌ನಲ್ಲಿ ಹರಿಯಬಿಟ್ಟಿದ್ದ ಅಪರಾಧಿಯನ್ನು ದೆಹಲಿ ಪೋಲಿಸರು ಹಿಡಿದು ಅದಕ್ಕೊಂದು ಅಂತ್ಯ ಹಾಡಿದ್ದಕ್ಕೆ ನಟಿ ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ ಮೂಲಕ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ. 

ಈ ಬಗ್ಗೆ ಸಾಮಾಜಿಕ ಜಾಲತಾಣ 'X'ನಲ್ಲಿ ಬರೆದುಕೊಂಡಿರುವ ನಟಿ ರಶ್ಮಿಕಾ 'ಆ ಕೃತ್ಯಕ್ಕೆ ಕಾರಣರಾದರನ್ನು ಹೆಡೆಮುರಿ ಕಟ್ಟಿದ್ದಕ್ಕಾಗಿ ದೆಹಲಿ ಪೊಲೀಸ್ (ಆಫೀಸಿಯಲ್) ಗೆ ನನ್ನ ಹೃದಯಪೂರ್ವಕ ಧನ್ಯವಾದಗಳು' ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ. ಹಾಗೇ, ಅಂದು ನನ್ನ ಪರವಾಗಿ ಪ್ರೀತಿಯಿಂದ, ಕಾಳಜಿಯಿಂದ ರಕ್ಷಣಾತ್ಮಕವಾಗಿ ನನ್ನ ಸುತ್ತಲೂ ನಿಂತು ಸಪೋರ್ಟ್‌ ಮಾಡಿದ ಎಲ್ಲರಿಗು ಕೂಡ ಹೃತ್ಪೂರ್ವಕ ಕೃತಜ್ಞತೆಗಳು' ಎಂದು ತಿಳಿಸಿದ್ದಾರೆ. 

ಯಾರ ಕೈವಾಡಕ್ಕೆ ಸಿಲುಕಿದ್ರು ಪರಮ ಸುಂದರಿ; ಸ್ಟಾರ್ ನಟಿಗೆ ಬೇಕಿತ್ತಾ ಅಂಥ ಚಟ!?

'ಹುಡುಗ ಮತ್ತು ಹುಡುಗಿಯರೇ, ಎಲ್ಲಾದರೂ ನಿಮ್ಮ ಒಪ್ಪಿಗೆಯಿಲ್ಲದೇ ನಿಮ್ಮ ಫೋಟೋ ಅಥವಾ ವೀಡಿಯೋ ತಿರುಚಲ್ಪಟ್ಟಿದ್ದರೆ ಅದು ತಪ್ಪು, ಈ ಬಗ್ಗೆ ಎಚ್ಚರವಿರಲಿ' ಎಂದು ಕೂಡ ಬರೆದುಕೊಂಡಿದ್ದಾರೆ ರಶ್ಮಿಕಾ. ಅಷ್ಟೇ ಅಲ್ಲ, 'ನಿಮ್ಮ ಸುತ್ತಲೂ ನಿಮ್ಮ ಪರವಾಗಿ ನಿಲ್ಲುವ ಜನರಿದ್ದಾರೆ ಹಾಗೂ ಅಪರಾಧ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂಬುವುದಕ್ಕೆ ಈ ಘಟನೆ ಸಾಕ್ಷಿ' ಎಂದು ಅಭಿಪ್ರಾಯ ಬರೆದು ನಟಿ ರಶ್ಮಿಕಾ ಮಂದಣ್ಣ ಫೋಸ್ಟ್ ಮಾಡಿದ್ದಾರೆ. 

ಅಹಂಕಾರಕ್ಕೆ ಉದಾಸೀನವೇ ಮದ್ದು; ಫೇಮಸ್ ಬಾಲನಟಿ, ಹರೆಯದಲ್ಲಿ ನಟನೆಯಿಂದಲೇ ಟಾಟಾ ಬೈಬೈ!

ತಿಂಗಳುಗಳ ಹಿಂದೆ ನಟಿ ರಶ್ಮಿಕಾರ ಡೀಪ್‌ಫೇಕ್ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಬಾಲಿವುಡ್ ಮೇರು ನಟ ಬಿಗ್ ಬಿ ಖ್ಯಾತಿಯ ಅಮಿತಾಭ್‌ ಬಚ್ಚನ್ ಸೇರಿದಂತೆ ಹಲವರು ರಶ್ಮಿಕಾಗೆ ಆಗಿದ್ದ ಅನ್ಯಾಯವನ್ನು ವಿರೋಧಿಸಿ ನಟಿ ಪರವಾಗಿ ನಿಂತು ತಮ್ಮ ಬೆಂಬಲ ಸೂಚಿಸಿದ್ದರು. ಅಷ್ಟೇ ಅಲ್ಲ, ಆದಷ್ಟು ಬೇಗ ಸಂಬಂಧಪಟ್ಟ ಅಪರಾಧಿಗಳನ್ನು ಹಿಡಿದು ಶಿಕ್ಷೆಗೆ ಗುರಿಪಡಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಇದೀಗ ದೆಹಲಿ ಪೊಲೀಸರು ಅಪರಾಧಿಯನ್ನು ಪತ್ತೆ ಹಚ್ಚಿ ಜೈಲಿಗಟ್ಟಿದ್ದಾರೆ. ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. 

 

 

Follow Us:
Download App:
  • android
  • ios