Asianet Suvarna News Asianet Suvarna News

ಅಲೆಲೇ.. ಮೊನ್ನೆ ಲವ್‌ ಲೆಟರ್‌ ಬರೆದ ರಶ್ಮಿಕಾಗೆ ಈಗ ಸೀರೆ ಮೇಲೆ ಲವ್ವಾಗಿದ್ಯಂತೆ!

ಮೊನ್ನೆ ಲವ್‌ ಲೆಟರ್ ಮೂಲಕ ಸುದ್ದಿ ಮೇಲೆ ಸುದ್ದಿಯಲ್ಲಿದ್ದ ರಶ್ಮಿಕಾ ಇದೀಗ ಸೀರೆಯುಟ್ಟು ರೆಡಿಯಾಗಿದ್ದಾರೆ. ಏನಮ್ಮೀ ಗುಡ್‌ನ್ಯೂಸ್ ಅಂತಿದ್ದಾರೆ ನಲವತ್ತು ಮಿಲಿಯನ್ ಫ್ಯಾನ್ಸ್.

 

Rashmika Mandanna got love on saree know her kirik pary actress fashion and lifestyle bni
Author
First Published Dec 21, 2023, 11:32 AM IST

ರಶ್ಮಿಕಾ ಮಂದಣ್ಣ ನೀಟಾಗಿ ಸೀರೆ ಉಟ್ಟು ರೆಡಿ ಆಗಿದ್ದಾರೆ. ಸೀರೆಯಲ್ಲಿ ಈಗ ಸಿಕ್ಕಾಪಟ್ಟೆ ಕಂಫರ್ಟೇಬಲ್ ಅಂತ ಬೇರೆ ಬರೆದುಬಿಟ್ಟಿದ್ದಾರೆ. ಈ ನಟಿ ಮೊನ್ನೆಯಷ್ಟೇ 'ನನ್ನ ಲೈಫಲ್ಲಿ ಬಂದ ನಿನಗೆ ಧನ್ಯವಾದ' ಅಂತ ಪೋಸ್ಟ್ ಹಾಕಿ ಫ್ಯಾನ್ಸ್ ತಲೆಗೆ ಹುಳ ಬಿಟ್ಟಿದ್ದರು. ಈಗ ಸೀರೆಯಲ್ಲಿ ಕಂಫರ್ಟೇಬಲ್ ಅಂತಿದ್ದಾರೆ. ಇದನ್ನೆಲ್ಲ ನೋಡಿ ಫ್ಯಾನ್ಸ್ ಕಂಗಾಲಾಗಿದ್ದಾರೆ. ರಶ್ಮಿಕಾಗೆ ಫ್ಯಾಮಿಲಿ ಲೈಫ್‌ ಮೇಲೆ ಆಸಕ್ತಿ ಬಂದ ಹಾಗಿದೆ ಅಂತ ಎಲ್ಲ ಮಾತಾಡಿಕೊಳ್ತಿದ್ದಾರೆ. 'ಏನಮ್ಮೀ ಗುಡ್‌ನ್ಯೂಸ್?' ಅಂತ ಒಂದಿಷ್ಟು ಮಂದಿ ಕಾಲೆಳೆಯೋ ಥರ ಕಾಮೆಂಟ್ಸ್ ಪಾಸ್ ಮಾಡುತ್ತಿದ್ದಾರೆ.

ರಶ್ಮಿಕಾ - ವಿಜಯ ದೇವರಕೊಂಡ ಜೋಡಿ ದಕ್ಷಿಣ ಭಾರತೀಯ ಸಿನಿಮಾ (Indian Movie Industry) ಮಾತ್ರ ಅಲ್ಲ ಇಂಡಿಯಾ ಲೆವಲ್‌ನಲ್ಲೇ ಫೇಮಸ್. 'ಗೀತಾ ಗೋವಿಂದಂ' ಚಿತ್ರದಲ್ಲಿ ಒಟ್ಟಿಗೆ ನಟಿಸಿ ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಆತ್ಮೀಯ ಸ್ನೇಹಿತರಾಗಿದ್ದರು. ರಶ್ಮಿಕಾ ವಿಜಯ್ ಸ್ನೇಹಿತರ ಬಳಗದಲ್ಲಿ ರೋಶ್ ಗುರ್ತಿಸಿಕೊಂಡಿದ್ದಾರೆ. ಗ್ಯಾಂಗ್‌ ಆಗಾಗ್ಗೆ ದೇಶ ವಿದೇಶಕ್ಕೆ ಪ್ರವಾಸ ಹೋಗುತ್ತಿರುತ್ತದೆ. ಇಬ್ಬರೂ ಒಂದೇ ಮನೆಯಲ್ಲಿದ್ದಾರೆ ಎನ್ನುವ ಗುಸುಗುಸು ಕೂಡ ಕೆಲವೊಮ್ಮೆ ಕೇಳಿ ಬರುತ್ತದೆ. ವಿಜಯ್ ದೇವರಕೊಂಡ ಒಡೆತನದ ರೌಡಿ ಬ್ರ್ಯಾಂಡ್ ಗಾರ್ಮೆಂಟ್ಸ್‌ನ (Rowdy Brand Graments) ರಶ್ಮಿಕಾ ಪ್ರಮೋಟ್ ಮಾಡುತ್ತಿರುತ್ತಾರೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಅವರಿಬ್ಬರು ಮಾತ್ರ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಾ ಬರುತ್ತಿದ್ದಾರೆ.

 

ಈಗಾಗಲೇ ಎರಡು ಸಿನಿಮಾಗಳಲ್ಲಿ ವಿಜಯ್- ರಶ್ಮಿಕಾ ಜೊತೆಯಾಗಿ ನಟಿಸಿದ್ದಾರೆ. ಇಬ್ಬರನ್ನು ಮತ್ತೆ ಒಂದೇ ಚಿತ್ರದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಸೀಕ್ರೆಟ್ ಮೆಸೇಜ್ ಮಾಡಿರುವ ಬಗ್ಗೆ ಸುದ್ದಿಯಾಗುತ್ತಿದೆ. ಅದರ ನಡುವೆಯೇ ಇತ್ತೀಚೆಗೆ ಈ ನ್ಯಾಶನಲ್‌ ಕ್ರಶ್‌ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರೀತಿ ತುಂಬಿದ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. 'ನಾನು ಒಂದು ವಿಷಯ ಬಯಸುತ್ತೇನೆ, ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು' ಎಂದು ಬರೆದು ಹೃದಯದ ಎಮೋಜಿ ಹಾಕಿದ್ದರು. ರಶ್ಮಿಕಾ ಯಾರ ಹೆಸರನ್ನು ಪೋಸ್ಟ್‌ನಲ್ಲಿ ಉಲ್ಲೇಖಿಸಿಲ್ಲ. ಆದರೆ ವಿಜಯ್ ದೇವರಕೊಂಡ ಕುರಿತು ರಶ್ಮಿಕಾ ಈ ಪೋಸ್ಟ್ ಮಾಡಿದ್ದಾರೆ ಎಂದು ಎಲ್ಲ ಮಾತಾಡಿಕೊಳ್ತಿದ್ದಾರೆ.

ಬಾಳಲ್ಲಿ ಬಂದಿದ್ದಕ್ಕೆ ಧನ್ಯವಾದ; ರಶ್ಮಿಕಾ ಮಂದಣ್ಣ ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್!

ರಶ್ಮಿಕಾ ಮಾಡಿದ್ದ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಅಭಿಮಾನಿಗಳು ಇದಕ್ಕೆ ತರಹೇವಾರಿ ಕಾಮೆಂಟ್ಸ್ ಮಾಡಿದ್ರು. ಕೆಲವರು ನಿಮ್ಮಬ್ಬರದ್ದು 'ರಬ್‌ ದೆ ಬನಾದಿ ಜೋಡಿ' ಎಂದು ಬರೆದಿದ್ದಾರೆ. ಮತ್ತೊಬ್ಬರು 'ಆದಷ್ಟು ಬೇಗ ಇಬ್ಬರು ಮದುವೆ ಆಗಿ' ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದರು.

ಈ ಸುದ್ದಿ ಬಿಸಿ ಆರೋದಕ್ಕೂ ಮೊದಲೇ ಈ ಕೊಡಗಿನ ಬೆಡಗಿ ಕಪ್ಪು ಸೀರೆಯಲ್ಲಿ ಬಳುಕುವ ಫೋಟೋ ಶೇರ್ ಮಾಡಿದ್ದಾರೆ. ಕಪ್ಪು ಹಿನ್ನೆಲೆಯ ಸೀರೆಯಲ್ಲಿ ಬೆಂಕಿಯಂಥಾ ಹೂಗಳ ಡಿಸೈನ್‌ ಇದೆ. ಯಾವ ಡ್ರೆಸ್‌ನಲ್ಲಾದ್ರೂ ಸುಂದರವಾಗೇ ಕಾಣುವ ರಶ್ಮಿಕಾ ಇದರಲ್ಲಿ ಮತ್ತೂ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಈ ಸೀರೆ ಉಟ್ಟು ನಡೆಯೋದು, ಮಲಗೋದು, ಎದ್ದೇಳೋದು ಯಾವ್ದೂ ಕಷ್ಟ ಅಲ್ಲ ಅಂತ ಈ ಸುಂದ್ರಿ ಬರ್ಕೊಂಡಿದ್ದು ಮಾತ್ರ ಹುಡುಗರ ಹಾರ್ಟ್ ಬೀಟ್‌ ಏರುಪೇರಾಗೋ ಹಾಗೆ ಮಾಡಿದೆ. ಒಂದಿಷ್ಟು ಲವ್‌ ಇಮೋಜಿಗಳ ಜೊತೆಗೆ ರಶ್ಮಿಕಾ ಕಾಲೆಳೆಯೋ ಕಾಮೆಂಟ್‌ಗಳೂ ಹರಿದು ಬಂದಿವೆ. ಲವ್‌ ಲೆಟರ್‌ ಆಯ್ತು, ಸೀರೆ ಆಯ್ತು, ಇನ್ನು ಕಾಯಿಸ್ಬೇಡಿ, ಆದಷ್ಟು ಬೇಗ ಗುಡ್‌ ನ್ಯೂಸ್ ಹೇಳಿ ಎಂದು ಒಂದಿಷ್ಟು ಜನ ಹೇಳಿದ್ದಾರೆ. ಇನ್ನೂ ಕೆಲವರು 'ಬಾಬೀ..' ಎಂದು ಕಾಲೆಳೆದಿದ್ದಾರೆ. ಅದಕ್ಕೆ ಕೆಲವರು ಸಿಟ್ಟಾಗಿ 'ಬಾಬೀ ಅಲ್ಲ ಬೇಬಿ' ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಪ್ರಕರಣ, ದೆಹಲಿಯಲ್ಲಿ ನಾಲ್ವರು ಪೊಲೀಸ್ ವಶಕ್ಕೆ!
 

Follow Us:
Download App:
  • android
  • ios