ಬಾಲಿವುಡ್‌ನ 'ಛವಾ' ಸಿನಿಮಾವು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದೆ. ನೆಟ್‌ಫ್ಲಿಕ್ಸ್ ಇದರ ಡಿಜಿಟಲ್ ಹಕ್ಕನ್ನು ಪಡೆದಿದ್ದು, ಸಿನಿಮಾ ಬಿಡುಗಡೆಯಾದ ಎರಡು ತಿಂಗಳ ನಂತರ ಒಟಿಟಿಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಅಂದಾಜಿನ ಪ್ರಕಾರ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ ಸಿನಿಮಾ ಪ್ರಸಾರವಾಗಬಹುದು. ಆದರೆ, ಸಿನಿಮಾವು ಪೈರಸಿ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ ಎಂಬ ವದಂತಿಗಳಿವೆ.
ತೆರೆಗಪ್ಪಳಿಸಿದ ಸಿನಿಮಾ ಬಿಗ್ ಹಿಟ್ ಆಗ್ತಿದ್ದಂತೆ ಒಟಿಟಿ (OTT)ಗೆ ಯಾವಾಗ ಬರುತ್ತೆ ಅಂತ ಕಾಯೋ ಕಾಲ ಇದು. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಒಟಿಟಿಗೆ ಬರುತ್ತೆ, ಆರಾಮಾಗಿ ಮನೆಯಲ್ಲಿ ಕುಳಿತು ಸಿನಿಮಾ ನೋಡ್ಬಹುದು ಅನ್ನೋರೇ ಹೆಚ್ಚು. ಹಾಗಾಗಿಯೇ ಥಿಯೇಟರ್ ತುಂಬ್ತಿಲ್ಲ ಎನ್ನುವ ಆರೋಪವೂ ಇದೆ. ಈಗ ಒಟಿಟಿ, ಸಿನಿಮಾ ಬಗ್ಗೆ ಯಾಕೆ ಹೇಳ್ತಿದ್ದೇವೆ ಅಂದ್ರೆ, ಸಿನಿ ಪ್ರಿಯರ ಸದ್ಯದ ಟಾರ್ಗೆಟ್ ಛವಾ (Chhaava). ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿ ಎರಡು ವಾರದಿಂದ ಹೌಸ್ ಫುಲ್ ಆಗಿ ಓಡ್ತಿರೋ ಸಿನಿಮಾ ಛವಾ, ಯಾವಾಗ ಟಿಟಿಗೆ ಬರುತ್ತೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. ಅದಕ್ಕೆ ಉತ್ತರ ಇಲ್ಲಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna) ಹಾಗೂ ಬಾಲಿವುಡ್ ಸ್ಟಾರ್ ವಿಕ್ಕಿ ಕೌಶಲ್ (Bollywood Star Vicky Kaushal) ಹಾಗೂ ಅಕ್ಷಯ್ ಖನ್ನಾ ಅಭಿನಯದ ಛವಾ ಛಾಯೆ ಎಲ್ಲ ಕಡೆ ಹರಡಿದೆ. ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡಿತಿದೆ. ಪುಷ್ಪ, ಬಾಹುಬಲಿ ಮತ್ತು ಜವಾನ್‌ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳ ದಾಖಲೆಗಳನ್ನು ಛವಾ ಮುರಿಯುತ್ತಿದೆ. ಛವಾ ಬಿಡುಗಡೆಯಾಗಿ ಸುಮಾರು ಎರಡು ವಾರ ಕಳೆದಿದೆ. ಆದ್ರೂ ಚಿತ್ರದ ಕ್ರೇಜ್ ಕಡಿಮೆ ಆಗಿಲ್ಲ. ಟಿಕೆಟ್ ಮಾರಾಟ ಭರದಿಂದ ಸಾಗಿದ್ದು, ಹೌಸ್ ಫುಲ್ ಆಗ್ತಿದೆ.
ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ತಾರಾ ಸೋನಾಕ್ಷಿ ಸಿನ್ಹಾ? ಮದುವೆ ನಂತ್ರ ಬದಲಾಗಿದ್ದೇನು?
ಒಟಿಟಿಯಲ್ಲಿ ಛವಾ ಯಾವಾಗ? : ಬಾಲಿವುಡ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿ ಸೇರಿರುವ ಛವಾ, ಒಟಿಟಿಗೆ ಯಾವಾಗ ಬರುತ್ತೆ ಎಂಬ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ನೆಟ್‌ಫ್ಲಿಕ್ಸ್, ಛವಾ ಚಿತ್ರದ ಡಿಜಿಟಲ್ ಹಕ್ಕನ್ನು ಪಡೆದುಕೊಂಡಿದೆ. ಥಿಯೇಟರ್ ಗೆ ಹೋಗಿ ಸಿನಿಮಾ ನೋಡಲ್ಲ, ಒಟಿಟಿಯಲ್ಲಿ ನೋಡ್ತೇವೆ ಅನ್ನೋರು, ಇಲ್ಲ ಥಿಯೇಟರ್ ರುಚಿ ನೋಡಾಗಿದೆ, ಒಟಿಟಿಯಲ್ಲಿ ಮತ್ತೊಮ್ಮೆ ನೋಡ್ಬೇಕು ಅನ್ನೋರು ಇನ್ನೂ ಎರಡು ತಿಂಗಳು ಕಾಯ್ಲೇಬೇಕು. ಥಿಯೇಟರ್ ನಲ್ಲಿ ಬಿಡುಗಡೆಯಾದ ಸುಮಾರು ಎರಡು ತಿಂಗಳ ನಂತರ ಛವಾ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ಬರುವ ಸಾಧ್ಯತೆಯಿದೆ. ಮಾರ್ಚ್ ಅಂತ್ಯದಿಂದ ಏಪ್ರಿಲ್ ಆರಂಭದ ನಡುವೆ ಯಾವುದೇ ಟೈಂನಲ್ಲಿ ನೀವು ಒಟಿಟಿಗೆ ಸಿನಿಮಾ ಬರುವ ನಿರೀಕ್ಷೆ ಮಾಡ್ಬಹುದು.
ಛವಾ ಚಿತ್ರದಲ್ಲಿ ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರವನ್ನು ನಿರ್ವಹಿಸಿದ್ದಾರೆ. ರಶ್ಮಿಕಾ ಮಂದಣ್ಣ ಮಹಾರಾಣಿ ಯೇಸುಬಾಯಿ ಭೋಸಲೆ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದ ಹೈಲೈಟ್ ಅಕ್ಷಯ್ ಖನ್ನಾ. ಅವ್ರು ಔರಂಗಜೇಬ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಛವಾ ಚಿತ್ರವನ್ನು ದಿನೇಶ್ ವಿಜನ್ ನಿರ್ಮಿಸಿದ್ದಾರೆ. 130 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಸಿನಿಮಾ 540 ಕೋಟಿ ಗಳಿಸಿದೆ. ಛವಾ ಚಿತ್ರದ ನಂತ್ರ ಕಾಲಿಗೆ ಗಾಯ ಮಾಡ್ಕೊಂಡಿದ್ದ ರಶ್ಮಿಕಾ ಮಂದಣ್ಣ, ನೋವಿನಲ್ಲೂ ಭರ್ಜರಿ ಪ್ರಚಾರ ಮಾಡಿದ್ದರು. ಅವರ ಕೆಲ್ಸಕ್ಕೆ ಈಗ ಫಲ ಸಿಕ್ಕಿದೆ. ಛವಾ ನೋಡಿದ ಅಭಿಮಾನಿಗಳು ಭಾವುಕರಾಗಿ ಥಿಯೇಟರ್ ನಿಂದ ಹೊರಗೆ ಬರ್ತಿದ್ದಾರೆ. ಛವಾ ನೋಡಿ ಭಾವುಕರಾದ ಮಕ್ಕಳ ಒಂದೆರಡು ವಿಡಿಯೋ ಕೂಡ ವೈರಲ್ ಆಗಿದೆ.
ಮದುವೆಯಾಗಿ 35 ಆದ್ರೂ ಕಡಿಮೆಯಾಗಿಲ್ಲ ರೋಮ್ಯಾನ್ಸ್, ಪ್ರತಿಯೊಬ್ಬರೂ ಪಾಲಿಸ್ಬೇಕು ನಟಿ ಭಾಗ್ಯಶ್ರೀ ಟಿಪ್ಸ್
ಈ ಮಧ್ಯೆ ಛವಾ ಸಿನಿಮಾ ಲೀಕ್ ಆಗಿದೆ ಎಂಬ ಸುದ್ದಿ ಕೂಡ ಇದೆ. ಪೈರಸಿ ವೆಬೈಟ್ ನಲ್ಲಿ ಸಿನಿಮಾ ಲೀಕ್ ಆಗಿದ್ದು, ಅನೇಕರು ಗೂಗಲ್ ನಲ್ಲಿ ಸಿನಿಮಾ ಸರ್ಚ್ ಮಾಡ್ತಿದ್ದಾರೆ. ಅನೇಕ ಸರ್ಚ್ ಇಂಜಿನ್ ನಲ್ಲಿ ಸಿನಿಮಾ ಫ್ರೀಯಾಗಿ ಸಿಗ್ತಿದೆ ಎಂಬ ಸುದ್ದಿ ಇದೆ. Filmyzilla ಮತ್ತು tamilrockers ನಲ್ಲಿ ಇದು ಸಿಗ್ತಿದೆ ಎಂಬ ವರದಿ ಇದೆ. ಟೆಲಿಗ್ರಾಮ್ ನಲ್ಲೂ ಸಿನಿಮಾವನ್ನು ಡೌನ್ಲೋಡ್ ಮಾಡಲಾಗ್ತಿದೆ.
