ನಟಿ ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ರನ್ನು ಮದುವೆಯಾಗಿದ್ದು, ಧರ್ಮದ ಭೇದವಿಲ್ಲದೆ ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆಯ ನಂತರ ಧರ್ಮ ಬದಲಾವಣೆ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಆದರೆ, ಸೋನಾಕ್ಷಿ ಮತ್ತು ಜಹೀರ್ ಇಬ್ಬರೂ ತಮ್ಮ ಧರ್ಮಗಳನ್ನು ಗೌರವಿಸುತ್ತಾರೆ ಮತ್ತು ಪರಸ್ಪರ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಸೋನಾಕ್ಷಿ ಸ್ಪಷ್ಟಪಡಿಸಿದ್ದಾರೆ. ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಿದ್ದು, ಧರ್ಮ ಬದಲಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Bollywood actress Sonakshi Sinha) ದಾಂಪತ್ಯ ಜೀವನಕ್ಕೆ ಕಾಲಿಟ್ಟು 8 ತಿಂಗಳಾಗಿದೆ. ಈಗ್ಲೂ ಸೋನಾಕ್ಷಿ ಸಿನ್ಹಾ ಮದುವೆ ಬಗ್ಗೆ ಜನರು ಒಂದಾದ್ಮೇಲೆ ಒಂದು ಪ್ರಶ್ನೆ ಕೇಳ್ತಾನೆ ಇರ್ತಾರೆ. ಅದಕ್ಕೆ ಕಾರಣ ಸೋನಾಕ್ಷಿ ಸಿನ್ಹಾ, ಬೇರೆ ಧರ್ಮದ ಹುಡುಗನನ್ನು ಮದುವೆ ಆಗಿದ್ದು. ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್ (Zaheer Iqbal) ಅವರನ್ನು ಜೂನ್ 2024ರಲ್ಲಿ ಮದುವೆಯಾಗಿದ್ದಾರೆ. ಸಿಂಪಲ್ ಆಗಿ ಕೋರ್ಟ್ ಮ್ಯಾರೇಜ್ ಮಾಡ್ಕೊಂಡ ಜೋಡಿ ನಂತ್ರ ಸೆಲೆಬ್ರಿಟಿಗಳಿಗೆ ಪಾರ್ಟಿ ನೀಡಿದ್ದಾರೆ. ಸೋನಾಕ್ಷಿ ಮದುವೆ ನಂತ್ರ ಅನೇಕ ಕಡೆ ತಮ್ಮ ಪತಿ ಜೊತೆ ಕಾಣಿಸಿಕೊಂಡಿದ್ದಾರೆ. ಮದುವೆಗೆ ಸಂಬಂಧಿಸಿದ ಕೆಲ ಪ್ರಶ್ನೆಗಳಿಗೆ ಉತ್ತರ ಕೂಡ ನೀಡಿದ್ದಾರೆ. ಈಗ ಸೋನಾಕ್ಷಿಗೆ ಧರ್ಮಕ್ಕೆ ಸಂಬಂಧಿಸಿದ ಪ್ರಶ್ನೆಯೊಂದು ಎದುರಾಗಿದೆ.
ಸಾಮಾನ್ಯವಾಗಿ ಮದುವೆ ಆದ್ಮೇಲೆ ಹುಡುಗಿಯರ ಸರ್ ನೇಮ್ ಬದಲಾಗುತ್ತೆ. ಅದು ಹಿಂದಿನಿಂದ್ಲೂ ಬಂದ ಅಲಿಖಿತ ನಿಯಮ. ಸೋನಾಕ್ಷಿ ಈಗ ಮುಸ್ಲಿಂ ಧರ್ಮದ ಹುಡುಗನನ್ನು ಮದುವೆ ಆಗಿರುವ ಕಾರಣ ಅವರು ಧರ್ಮ ಬದಲಿಸ್ತಾರಾ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತದೆ. ಹೌಟರ್‌ಫ್ಲೈಗೆ ನೀಡಿದ ಸಂದರ್ಶನದಲ್ಲಿ ಸೋನಾಕ್ಷಿ ಸಿನ್ಹಾ ಇದಕ್ಕೆ ಉತ್ತರ ನೀಡಿದ್ದಾರೆ.
ಚಿರಂಜೀವಿ ಜೊತೆ ರಾಜಮೌಳಿ ಸಿನಿಮಾ ಮಾಡಿದ್ರೆ ನೆಮ್ಮದಿ ಇರಲ್ಲ: ವಿಜಯೇಂದ್ರ ಪ್ರಸಾದ್ ಶಾಕಿಂಗ್ ಕಾಮೆಂಟ್ಸ್!
ನಾವು ಧರ್ಮದ ಕಡೆ ಗಮನ ನೀಡೋದಿಲ್ಲ. ಇಬ್ಬರು ವ್ಯಕ್ತಿಗಳಾಗಿ ಪರಸ್ಪರ ಪ್ರೀತಿ ಮಾಡಿದ್ದೆವು. ಮದುವೆಯಾಗಲು ಬಯಸಿದ್ದೆವು, ಮದುವೆ ಆಗಿದ್ದೇವೆ. ಜಹೀರ್ ನನಗೆ ಅವರ ಧರ್ಮವನ್ನು ಹೇರೋದಿಲ್ಲ. ನಾನು ನನ್ನ ಧರ್ಮವನ್ನು ಅವರ ಮೇಲೆ ಹೇರುತ್ತಿಲ್ಲ. ನಾವಿಬ್ಬರು ಪರಸ್ಪರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದೇವೆ. ನಾನು ನನ್ನ ಮನೆಯ ಸಂಪ್ರದಾಯವನ್ನು ಪಾಲಿಸುವ ಜೊತೆಗೆ ಅವರ ಸಂಸ್ಕೃತಿಯನ್ನು ಗೌರವಿಸುತ್ತಿದ್ದೇನೆ. ಅವರು ನನ್ನ ಹಾಗೂ ನನ್ನ ಕುಟುಂಬವನ್ನು ಗೌರವಿಸುತ್ತಾರೆ ಎನ್ನುವ ಮೂಲಕ ಯಾವುದೇ ಧರ್ಮ ಬದಲಾವಣೆ ಇಲ್ಲ ಎಂಬುದನ್ನು ಸೋನಾಕ್ಷಿ ಸಿನ್ಹಾ ಸ್ಪಷ್ಟಪಡಿಸಿದ್ದಾರೆ.
ಮದುವೆಯಾಗಲು ಉತ್ತಮ ಮಾರ್ಗ ಅಂದ್ರೆ ವಿಶೇಷ ವಿವಾಹ ಕಾಯ್ದೆ. ಇದ್ರಲ್ಲಿ ಹಿಂದೂ ಮಹಿಳೆ, ಬೇರೆ ಧರ್ಮದ ಹುಡುಗನನ್ನು ಮದುವೆ ಆಗೋದಾದ್ರೆ ಧರ್ಮ ಬದಲಿಸಬೇಕಾಗಿಲ್ಲ. ಹಾಗೆಯೇ ಪುರುಷ ಕೂಡ ತನ್ನ ಧರ್ಮವನ್ನು ಬದಲಿಸಬೇಕಾಗಿಲ್ಲ. ಇಬ್ಬರು ವ್ಯಕ್ತಿಗಳು ಪ್ರೀತಿ ಮಾಡಿ, ದಾಂಪತ್ಯ ಜೀವನ ಬಯಸಿದ್ರೆ ಅದು ಅತ್ಯಂತ ಸರಳ. ನಾವಿಬ್ಬರು ಪ್ರೀತಿ ಮಾಡಿದ್ವಿ. ಇಲ್ಲಿ ಯಾರು ಧರ್ಮ ಬದಲಿಸುತ್ತಾರೆ ಎನ್ನುವ ಪ್ರಶ್ನೆ ಬರಲಿಲ್ಲ ಎಂದು ಸೋನಾಕ್ಷಿ ಹೇಳಿದ್ದಾರೆ.
ಮದುವೆಯಾಗಿ 35 ಆದ್ರೂ ಕಡಿಮೆಯಾಗಿಲ್ಲ ರೋಮ್ಯಾನ್ಸ್, ಪ್ರತಿಯೊಬ್ಬರೂ ಪಾಲಿಸ್ಬೇಕು ನಟಿ
ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಖಾನ್ ಅನೇಕ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಅವರ ಮದುವೆಗೆ ಮನೆಯವರ ಅಡ್ಡಿಯಿತ್ತು ಎನ್ನುವ ಸುದ್ದಿ ಇದೆ. ಹಿರಿಯ ನಟ, ರಾಜಕಾರಣಿ ಹಾಗೂ ಸೋನಾಕ್ಷಿ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ ಹಾಗೂ ಅವರ ಪತ್ನಿ ಪೂನಂ ಸಿನ್ಹಾಗೆ ಈ ಮದುವೆ ಇಷ್ಟವಿರಲಿಲ್ಲ. ಮಗಳು ತಮಗೆ ಹೇಳದೆ ಮದುವೆ ನಿಶ್ಚಿಯಿಸಿಕೊಂಡಿದ್ದಾಳೆ ಎಂಬ ಆರೋಪವನ್ನೂ ಅವರು ಮಾಡಿದ್ದರು. ನಂತ್ರ ಮದುವೆಯಲ್ಲಿ ಪಾಲ್ಗೊಂಡು ಎಲ್ಲವೂ ಸರಿಯಾಗಿದೆ ಎಂಬ ನಂಬಿಕೆ ಮೂಡಿಸಿದ್ರು. ಆದ್ರೆ ಇದು ತೋರಿಕೆಗೆ ಎಂಬುದು ಅನೇಕ ಬಾರಿ ಸ್ಪಷ್ಟವಾಗಿದೆ. ಕಪಿಲ್ ಶರ್ಮಾ ಶೋಗೆ ಬಂದಿದ್ದ ಸೋನಾಕ್ಷಿ ಸಿನ್ಹಾ ಪತಿ ಜಹೀರ್ ಮರ್ಯಾದೆಯನ್ನು ನೇರವಾಗಿ ತೆಗೆಯುವ ಪ್ರಯತ್ನವನ್ನು ಪೂನಂ ಸಿನ್ಹಾ ಮಾಡಿದ್ರು. ಸೋನಾಕ್ಷಿ ಸಿನ್ಹಾ ಸಹೋದರ, ಮದುವೆಯಲ್ಲಿ ಪಾಲ್ಗೊಂಡಿರಲಿಲ್ಲ. ಅದೇನೇ ಆದ್ರೂ ಸೋನಾಕ್ಷಿ, ಜಹೀರ್ ಅವರನ್ನು ಮನಸ್ಪೂರ್ವಕವಾಗಿ ಪ್ರೀತಿ ಮಾಡ್ತಿದ್ದು, ದೀರ್ಘ ಕಾಲ ದಾಂಪತ್ಯ ಜೀವನ ನಡೆಸುವ ಕನಸು ಕಂಡಿದ್ದಾರೆ.
