ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಮದುವೆ ಪ್ರಸಾರ ಹಕ್ಕಿಗೆ ನೆಟ್‌ಫ್ಲಿಕ್ಸ್ 60 ಕೋಟಿ ರೂ. ಆಫರ್ ನೀಡಿತ್ತು ಎಂದು ವರದಿಯಾಗಿದೆ. ಆದರೆ, ಈ ಜೋಡಿಯು ಗೌಪ್ಯತೆಗೆ ಹೆಚ್ಚು ಮಹತ್ವ ನೀಡಿ, ಹಣಕ್ಕಿಂತ ನೆನಪುಗಳು ದೊಡ್ಡವು ಎಂದು ಈ ಬೃಹತ್ ಮೊತ್ತದ ಆಫರ್ ಅನ್ನು ತಿರಸ್ಕರಿಸಿದ್ದಾರೆ
ಹೈದರಾಬಾದ್ (ಫೆ.15): ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಮದುವೆ ಸಮಾರಂಭವನ್ನು ಒಟಿಟಿಯಲ್ಲಿ ಪ್ರಸಾರ ಮಾಡುವುದಕ್ಕೆ ನೆಟ್‌ಫ್ಲಿಕ್ಸ್ 60 ಕೋಟಿ ರು. ಆಫರ್ ನೀಡಿದೆ. ಆದರೆ ಈ ಜೋಡಿ ಗೌಪ್ಯತೆ ಕಾರಣಕ್ಕೆ ಅದನ್ನು ತಿರಸ್ಕರಿಸಿದೆ ಎಂದು ವರದಿಗಳು ಹೇಳಿವೆ.
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಎಲ್ಲಿ?
ತಾರಾ ಜೋಡಿಯು ತಮ್ಮ ಮದುವೆ ಕಾರ್ಯಕ್ರಮ ವೈಯಕ್ತಿಕ ಹಾಗೂ ಬೆಲೆ ಕಟ್ಟುವುದಕ್ಕೆ ಸಾಧ್ಯವಾಗದೇ ಇರುವಂಥದ್ದು. ಆ ನೆನಪುಗಳು ಹಣಕ್ಕಿಂತ ದೊಡ್ಡವು ಎನ್ನುವ ಅಭಿಪ್ರಾಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರು ನೆಟ್‌ಫ್ಲಿಕ್ಸ್ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈ ತಿಂಗಳಲ್ಲಿ ರಾಜಸ್ಥಾನದ ಉದಯಪುರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದಲೂ ಹರಿದಾಡಿತ್ತು. ಆದರೆ ಈ ಬಗ್ಗೆ ಇಬ್ಬರೂ ಸ್ಪಷ್ಟಪಡಿಸಿಲ್ಲ.
ಅಭಿಮಾನಿಗಳಿಗೆ ಅಚ್ಚರಿ
ಬಾಲಿವುಡ್ ಜೋಡಿ ತಮ್ಮ ಮದುವೆ ಕಾರ್ಯಕ್ರಮಗಳ ಪ್ರಸಾರ ಹಕ್ಕನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡುವ ನಡುವೆ ಈ ತಾರಾ ಜೋಡಿಯ ನಿರ್ಧಾರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.



