ಆತ್ಮಹತ್ಯೆಯ ಸುಳಿವು ಕೊಟ್ಟಿದ್ದ 22 ವರ್ಷದ ರ‍್ಯಾಪರ್ ಎರಡು ದಿನಗಳಿಂದ ನಾಪತ್ತೆ, ಸ್ನೇಹಿತರಿಂದ ಹುಡುಕಾಟ

ದೆಹಲಿ ಮೂಲದ ರ‍್ಯಾಪರ್ 22 ವರ್ಷದ ಎಂಸಿ ಕೋಡ್ ಆದಿತ್ಯ ತಿವಾರಿ, ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸುಳಿವು ನೀಡುವ ಇನ್‌ಸ್ಟಾಗ್ರಾಂ ಸ್ಟೋರಿ ಪೋಸ್ಟ್ ಮಾಡಿದ ನಂತರ ಇದೀಗ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರ ಸ್ನೇಹಿತರು ದೆಹಲಿ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಆದಿತ್ಯ ಅವರನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾಋಎ. ಅವರ ಅಭಿಮಾನಿಗಳು ಮತ್ತು ಸ್ನೇಹಿತರು ದೆಹಲಿ ಪೊಲೀಸರನ್ನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ ನೂರಾರು ಟ್ವೀಟ್‌ಗಳಲ್ಲಿ ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ನಾಪತ್ತೆಯಾದವರ ದೂರು ಸಹ ಜೂನ್ 4 ರಂದು ದಾಖಲಾಗಿದೆಯೆಂದು ಅವರ ಸ್ನೇಹಿತರು ತಿಳಿಸಿದ್ದಾರೆ. ಆದರೆ ಈ ಸಂಬಂಧ ಎಫ್‌ಐಆರ್ ದಾಖಲಾಗಿಲ್ಲ. 

ಡ್ರೀಮ್ ಗರ್ಲ್ ನಟಿ ರಿಂಕು ಕೊರೋನಾದಿಂದ ಸಾವು

ಕಾಣೆಯಾಗುವ ಮೊದಲು ಆದಿತ್ಯ ಈ ಕೆಳಗಿನ ಸಂದೇಶವನ್ನು ಹೊರಹಾಕಿದ್ದಾನೆ: 'ನಾನು ಯಾರನ್ನೂ ದೂಷಿಸುವುದಿಲ್ಲ. ನನ್ನ ಸ್ವಂತ ಅಸ್ತಿತ್ವದಿಂದ ನಾನು ದೂರವಾಗುವುದು ಇಡೀ ದೇಶವು ಬಯಸಿದ ಶಿಕ್ಷೆಯಾಗಿದೆ' ಎಂದು ಬರೆದಿದ್ದಾರೆ.

2016ರ ಅವರ ವೀಡಿಯೊವೊಂದರ ನಂತರ ಮಹಾಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಆದಿತ್ಯಗೆ ಬೆದರಿಕೆಗಳು, ನಿಂದನೆ, ದೂರುಗಳು ಮತ್ತು ನಿರಂತರವಾಗಿ ವಾಗ್ದಾಳಿ ನಡೆಯುತ್ತಿತ್ತು. ಆದಿತ್ಯ ಕ್ಷಮೆ ಯಾಚಿಸಿದ ಹೊರತಾಗಿಯೂ ದ್ವೇಷವು ಹೆಚ್ಚುತ್ತಲೇ ಇತ್ತು.