ರಣವೀರ್ ಸಿಂಗ್ ಬಹು ನಿರೀಕ್ಷಿತ ಚಿತ್ರ 83 ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. 1983ರಲ್ಲಿ ಭಾರತ ವಿಶ್ವ ಕಪ್ ಗೆದ್ದ ಸಂಭ್ರಮವನ್ನು ಬೆಳ್ಳಿತೆರೆಯ ಮೇಲೆ ನೋಡಿ....
ಕಳೆದ ವರ್ಷ ರಿಲೀಸ್ ಆಗಬೇಕಿದ್ದ ಅದೆಷ್ಟೋ ಚಿತ್ರಗಳು ಈ ವರ್ಷ ತೆರೆ ಕಾಣುತ್ತಿದೆ. ಅದರಲ್ಲೂ ಬಹು ನಿರೀಕ್ಷಿತ ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ ಬಯೋಪಿಕ್ ವೀಕ್ಷಿಸಲು ಸಿನಿ ಪ್ರೇಮಿಗಳು ಕಾತುರರಾಗಿದ್ದಾರೆ. ರಥಸಪ್ತಮಿ ಹಬ್ಬದಂದು ಚಿತ್ರತಂಡ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ನೀಡಿದ್ದಾರೆ.
83 ಬಯೋಪಿಕ್; ಫಸ್ಟ್ ಲುಕ್‌ಗೆ ಫಿದಾ ಆದ ಕ್ರಿಕೆಟ್ ಫ್ಯಾನ್ಸ್!
ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಿರುವ 83 ಸಿನಿಮಾ ಇದೇ ಜೂನ್ 4ರಂದು ಬಿಡುಗಡೆಯಾಗುತ್ತಿದೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಪಂಕಜ್ ತ್ರಿಪಾಠಿ ಸೇರಿದಂತೆ ಅನೇಕ ಬಾಲಿವುಡ್ ದಿಗ್ಗಜ ಸ್ಟಾರ್ ನಟರನ್ನು ಕಾಣಬಹುದು. 'ಜೂನ್ 4ರಂದು ಹಿಂದಿ, ತೆಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ' ಎಂದು ರಣವೀರ್ ಇನ್‌ಸ್ಟಾ ಪೋಸ್ಟ್ ಮಾಡಿದ್ದಾರೆ.
ಕೊರೋನಾ ಲಾಕ್‌ಡೌನ್‌ನಿಂದ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತದೆ. ಸುಮಾರು 143 ಕೋಟಿಗೆ ಹಕ್ಕುಗಳು ಮಾರಾಟವಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. 'ನಿರ್ಮಾಪಕನಾಗಿ, ನಿರ್ದೇಶಕನಾಗಿ ನಾನು ಎಂದಿಗೂ ಸಿನಿಮಾವನ್ನು ಥಿಯೇಟರ್‌ನಲ್ಲ ರಿಲೀಸ್ ಮಾಡಲು ಇಷ್ಟ ಪಡುವೆ,' ಎಂದ್ಹೇಳುವ ಮೂಲಕ ಗಾಳಿ ಮಾತಿಗೆ ಬ್ರೇಕ್ ಹಾಕಿದ್ದರು.
ಪತಿ ರಣವೀರ್ ಜತೆ ನಟಿಸಲು ದೀಪಿಕಾ ನಕಾರ, ಕಾರಣವೂ ಬಹಿರಂಗ!
ಈ ಹಿಂದೆ ರಿಲೀಸ್ ಮಾಡಲಾಗಿದ್ದ ಪೋಸ್ಟ್ ಸಾಕಷ್ಟು ಕುತೂಹಲ ಹುಟ್ಟಿಸಿತ್ತು. ಅದರಲ್ಲೂ ದೀಪಿಕಾ ಹಾಗೂ ರಣವೀರ್ ಕಾಂಬಿನೇಷನ್ ಹೆಚ್ಚಾಗಿ ಪೌರಾಣಿಕ ಹಾಗೂ ಇತಿಹಾಸದ ಸಿನಿಮಾಗಳನ್ನು ಮಾಡುತ್ತಿದ್ದರು. ಇದೇ ಮೊದಲ ಬಾರಿ ಇಬ್ಬರೂ ಹಿಸ್ಟರಿ ಕ್ರಿಯೇಟ್ ಮಾಡಿರವ ಕಮರ್ಷಿಯಲ್ ಬಯೋಪಿಕ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ಹಾಗಾಗಿ ಚಿತ್ರ ಮತ್ತಷ್ಟು ಕುತೂಹಲ ಮೂಡಿಸಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 20, 2021, 12:48 PM IST