Deepveer : ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸದ್ಯ ಕುಟುಂಬದ ಜೊತೆಗಿದ್ದಾರೆ. ಫ್ಯಾಮಿಲಿ ಮ್ಯಾರೇಜ್ ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಅವರ ಲುಕ್ ಎಲ್ಲರ ಗಮನ ಸೆಳೆದಿದೆ.

ಬಾಲಿವುಡ್ ಸೂಪರ್ ಜೋಡಿ ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣವೀರ್ ಸಿಂಗ್ (Ranveer Singh) ಸದ್ಯ ಫ್ಯಾಮಿಲಿಯ ಮದುವೆಯೊಂದರಲ್ಲಿ ಬ್ಯುಸಿ. ಗೋವಾದಲ್ಲಿ ರಣವೀರ್ ಸಿಂಗ್ ಸಹೋದರಿ ಮದುವೆ ನಡೆಯುತ್ತಿದೆ. ಫ್ಯಾಮಿಲಿ ಫಂಕ್ಷನ್ ನಲ್ಲಿ ಭಾಗಿಯಾಗಿರುವ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ, ಮದುವೆ ಸಂಭ್ರಮದಲ್ಲಿ ಮಿಂದೇಳ್ತಿದ್ದಾರೆ. ಅವರಿಬ್ಬರ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

ಫ್ಯಾಮಿಲಿ ಮದುವೆಯಲ್ಲಿ ಮಿಂಚಿದ ದೀಪಿ – ರಣವೀರ್

ರಣವೀರ್ ಸಿಂಗ್ ಅವರ ಸಹೋದರಿ ಸೌಮ್ಯ ಹಿಂಗೋರಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದಲ್ಲಿ ಮದುವೆ ಸಮಾರಂಭ ನಡೆದಿದೆ. ಸೌಮ್ಯ, ಸಾಮ್ರಾಜ್ ಠಾಕ್ರೆ ಅವರ ಜೊತೆ ಹೊಸ ಬಾಳು ಶುರು ಮಾಡಿದ್ದಾರೆ. ಅಣ್ಣನಾಗಿ, ನಟ ರಣವೀರ್ ಸಿಂಗ್ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಮದುವೆಯ ಎಲ್ಲ ಸಂಪ್ರದಾಯಗಳಲ್ಲಿ ಖುಷಿಯಿಂದ ಪಾಲ್ಗೊಂಡಿದ್ದಾರೆ. ವಧುವನ್ನು ಮಂಟಪಕ್ಕೆ ತರುವ ಶಾಸ್ತ್ರದಲ್ಲಿ ರಣವೀರ್ ಸಿಂಗ್ ಪಾಲ್ಗೊಂಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಣವೀರ್ ಸಿಂಗ್ ತಮ್ಮ ಸಹೋದರಿಯನ್ನು ಹೂವಿನಿಂದ ಅಲಂಕರಿಸಿದ ಚಾದರದ ಜೊತೆ ಮಂಟಪಕ್ಕೆ ಕರೆತಂದಿದ್ದಾರೆ. ಸಹೋದರಿ ಮದುವೆಯಲ್ಲಿ ರಣವೀರ್ ಸಿಂಗ್ ಭಾವುಕರಾಗಿದ್ದರು. ರಣವೀರ್ ಸಿಂಗ್ ಸಹೋದರಿ ಸೌಮ್ಯ ಮದುವೆಯಲ್ಲಿ ದೀಪ್ವೀರ್ ಆಕರ್ಷಣೆಯ ಕೇಂದ್ರವಾಗಿದ್ರು. ಎಲ್ಲ ಕಡೆ ಅವರ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿಯಲಾಗಿದೆ.

ಅಜಾತಶತ್ರು ಎಸ್‌ಪಿ ಬಾಲಸುಬ್ರಹ್ಮಣ್ಯಂ ಪ್ರತಿಮೆಗೆ ವಿರೋಧ; 'ಹೀಗೂ ಉಂಟೇ ಮನುಷ್ಯರ ಜಗತ್ತು?' ಅಂತಿರೋ ನೆಟ್ಟಿಗರು!

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಲುಕ್ ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ನಟ ಕೆಂಪು ಕುರ್ತಾ ಮತ್ತು ಬಿಳಿ ಪೈಜಾಮಾ ಧರಿಸಿದ್ದರು. ದೀಪಿಕಾ ಪ್ರಿಂಟೆಡ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬನ್ ಹಾಕಿದ್ದ ದೀಪಿಕಾ ಸೌಂದರ್ಯವನ್ನು ಕಿವಿಯೋಲೆ ಮತ್ತು ನೆಕ್ಲೆಸ್ ಡಬಲ್ ಮಾಡಿತ್ತು.

ಒರಿಗೆ ಫೋಸ್ ನೀಡಿದ ದೀಪಿಕಾ

ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕುಳಿತಿದ್ದ ರಣವೀರ್ ಸಿಂಗ್ ಹಾಗೂ ದೀಪಿಕಾ ವಿಡಿಯೋ ಮಾಡಲು ಒರಿ ಮುಂದಾಗಿದ್ದಾರೆ.ಅದನ್ನು ಗಮನಿಸಿದ ದೀಪಿಕಾ ತಮ್ಮ ಸಿಗ್ನೆಚರ್ ಫೋಸ್ ನೀಡಿದ್ದಾರೆ. ರಣವೀರ್ ಎದೆ ಮೇಲೆ ಕೈ ಇಟ್ಟು ಫೋಟೋಕ್ಕೆ ಫೋಸ್ ನೀಡಿದ್ದಾರೆ. ಆರಂಭದಲ್ಲಿ ಏನಾಗ್ತಿದೆ ಅನ್ನೋದು ತಿಳಿಯದ ರಣವೀರ್ ನಂತ್ರ ಫೋಟೋಕ್ಕೆ ಫೋಸ್ ನೀಡಿದ್ದಾರೆ. ರಣವೀರ್ ಸಿಂಗ್, ಸೌಮ್ಯ ಸಂಗೀತ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿದ್ದರು. ಕುಟುಂಬದ ಜೊತೆ ಡಾನ್ಸ್ ಕೂಡ ಮಾಡಿದ್ದರು. ಗೋವಾದಲ್ಲಿರುವ ರಣವೀರ್ ಹಾಗೂ ದೀಪಿಕಾ, ಮದುವೆಯನ್ನು ಸಖತ್ ಎಂಜಾಯ್ ಮಾಡ್ತಿದ್ದಾರೆ.

'ನೀವು ಅಮೀರ್ ಖಾನ್ ಅಲ್ವಾ?' ಎಂದು ಮಹಿಳೆ ಕೇಳಿದ್ದಕ್ಕೆ ಆ ನಟ ಮಾತನ್ನಾಡದೇ ಮಾಡಿದ್ದೇನು ನೋಡಿ!

ರಣವೀರ್ ಸಿಂಗ್ ಸದ್ಯ ಕಾಂತಾರ ವಿಷ್ಯಕ್ಕೆ ಚರ್ಚೆಗೆ ಬಂದಿದ್ದರು. ಕಾಂತಾರ ಚಾಪ್ಟರ್ 1 ರಲ್ಲಿ ರಿಷಬ್ ಶೆಟ್ಟಿ ಆಕ್ಟಿಂಗ್ ಹೊಗಳುವ ಆತುರದಲ್ಲಿ ಯಡವಟ್ಟು ಮಾಡ್ಕೊಂಡಿದ್ದರು. ನಂತ್ರ ತಮ್ಮ ತಪ್ಪಿಗೆ ರಣವೀರ್ ಸಿಂಗ್ ಕ್ಷಮೆ ಕೂಡ ಕೇಳಿದ್ದಾರೆ. ಸಿನಿಮಾ ವಿಷ್ಯಕ್ಕೆ ಬರೋದಾದ್ರೆ ರಣವೀರ್ ಸಿಂಗ್ "ಧುರಂಧರ್" ನಲ್ಲಿ ಬ್ಯುಸಿಯಿದ್ದಾರೆ. ಈ ಚಿತ್ರ ಡಿಸೆಂಬರ್ 5 ಅಂದ್ರೆ ನಾಳೆ ತೆರೆಗೆ ಬರಲಿದೆ. ಧುರಂಧರ್ ಒಂದು ಪತ್ತೇದಾರಿ ಕಥೆ. ಈ ಸಿನಿಮಾದಲ್ಲಿ ಅರ್ಜುನ್ ರಾಂಪಾಲ್, ಸಂಜಯ್ ದತ್ ಮತ್ತು ಅಕ್ಷಯ್ ಖನ್ನಾ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಮಗುವಾದ್ಮೇಲೆ ಸ್ವಲ್ಪ ದಿನ ವಿಶ್ರಾಂತಿ ಪಡೆದಿದ್ರೂ ಫಿಟ್ನೆಸ್ ನಲ್ಲಿ ರಾಜಿ ಮಾಡಕೊಳ್ಳದೆ ಮಿಂಚುತ್ತಿರುವ ದೀಪಿಕಾ ಕೈನಲ್ಲೂ ಸಾಕಷ್ಟು ಸಿನಿಮಾಗಳಿವೆ. ದೀಪಿಕಾ ಪಡುಕೋಣೆ ಅಭಿನಯದ ಯಾವುದೇ ಸಿನಿಮಾ 2025ರಲ್ಲಿ ತೆರೆಗೆ ಬಂದಿಲ್ಲ. ಆದ್ರೆ 2026ರಲ್ಲಿ ದೀಪಿ ಅಭಿಮಾನಿಗಳಿಗೆ ಹಬ್ಬ. 2026ರಲ್ಲಿ ದೀಪಿಕಾ ಅಭಿನಯದ ಕಿಂಗ್ ತೆರೆಗೆ ಬರಲಿದೆ.

View post on Instagram