Asianet Suvarna News Asianet Suvarna News

ಯಶ್ ಜೊತೆಗಿನ ಫೋಟೋ ಶೇರ್ ಮಾಡಿದ ರಣ್ವೀರ್ ಸಿಂಗ್: 'ಕೆಜಿಎಫ್' ಸ್ಟಾರ್ ರಿಯಾಕ್ಷನ್ ಹೀಗಿದೆ

. ರಣ್ವೀರ್ ಮತ್ತು ಯಶ್ ಇಬ್ಬರೂ ಕೈ ಕೈ ಹಿಡಿದು ವೇದಿಕೆಯಲ್ಲಿ ನಿಂತಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಬ್ಬರು ಸ್ಟಾರ್ ಕಲಾವಿದರು ಪರಸ್ಪರ ಪ್ರೀತಿ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ.

Ranveer singh shares Yash photo of siima 2022 and kgf star says Pleasure to meet you brother sgk
Author
First Published Sep 12, 2022, 3:36 PM IST

ಪ್ರತಿಷ್ಠಿತ ಸೈಮಾ 2022 (SIIMA) ಪ್ರಶಸ್ತಿ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು. ಸೆಪ್ಟಂಬರ್ 10, 11ರಂದು ಸೈಮಾ ನಡೆದಿದ್ದು ದಕ್ಷಿಣ ಭಾರತದ ಅನೇಕ ಕಲಾವಿದರು ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.  ಬೆಂಗಳೂರಿನ ಪ್ಯಾಲೇಸ್ ​ಗ್ರೌಂಡ್ ನಲ್ಲಿ ಈ ಕಾರ್ಯಕ್ರಮ ನೆರವೇರಿತು. ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದರು.ಈ ಬಾರಿಯ ಸೌತ್ ಸೈಮಾದ ಹೈಲೆಟ್ ಆಗಿದ್ದು ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್. ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದರು. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಸಹ ಯಶ್-ರಣ್ವೀರ್ ಫೋಟೋ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಸೌತ್ ಸೈಮಾ 2022 ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಇನ್ನು ರಾಕಿಂಗ್ ಸ್ಟಾರ್ ಯಶ್, ಕಮಲ್ ಹಾಸನ್ ಕೂಡ ಈ ಬಾರಿಯ ಸ್ಪೆಷಲ್ ಗೆಸ್ಟ್. ಕೆಜಿಎಫ್ ಸಿನಿಮಾ ಮೂಲಕ ಇಡೀ ಭಾರತೀಯ ಅಭಿಮಾನಿಗಳ ಮನಗೆದ್ದಿರುವ ರಾಕಿಂಗ್ ಸ್ಟಾರ್ ಅವರನ್ನು ನೋಡುವುದೇ ಒಂದು ಸಂಭ್ರಮ. ರಣ್ವೀರ್ ಮತ್ತು ಯಶ್ ಇಬ್ಬರೂ ಕೈ ಕೈ ಹಿಡಿದು ವೇದಿಕೆಯಲ್ಲಿ ನಿಂತಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಬ್ಬರು ಬಿಳಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ರಣ್ವೀರ್ ಸಿಂಗ್ ವೈಟ್ ಅಂಡ್ ವೈಟ್ ಸೂಟ್‌ನಲ್ಲಿ ಮಿಂಚಿದ್ರೆ ರಾಕಿಂಗ್ ಸ್ಟಾರ್ ಸಾಂಪ್ರದಾಯಿಕ ವೈಟ್ ಅಂಡ್ ವೈಟ್ ಜುಬ್ಬದಲ್ಲಿ ಗಂಗೊಳಿಸಿದರು. 

ಇಬ್ಬರು ಸ್ಟಾರ್ ಕಲಾವಿದರು ಪರಸ್ಪರ ಪ್ರೀತಿ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ರಣ್ವೀರ್ ಸಿಂಗ್, ರಾಕಿ ಭಾಯ್ ಜೊತೆಗಿನ ಫೋಟೋ ಶೇರ್ ಮಾಡಿ ಭಾಯ್ ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ರಣ್ವೀರ್ ಶೇರ್ ಮಾಡಿರುವ ಫೋಟೋ ಹಂಚಿಕೊಂಡು 'ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಸಂತೋಷವಾಯಿತು ಸಹೋದರ, ಒಳ್ಳೆಯದಾಗಲಿ' ಎಂದು ಹೇಳಿದ್ದಾರೆ. ಇಬ್ಬರ ಸ್ಟೇಟಸ್ ಮಾತುಕತೆ ಅಭಿಮಾನಿಗಳ ಹೃದಯ ಗೆದ್ದಿದೆ. ಸೌತ್ ಮತ್ತು ಬಾಲಿವುಡ್ ಸ್ಟಾರ್‌ಗಳ ನಡುವಿನ ಸ್ನೇಹಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. 

SIIMA 2022; ಪ್ರತಿ ಅವಾರ್ಡ್ ಕಾರ್ಯಕ್ರಮ ಕರ್ನಾಟಕಕ್ಕೆ ಬರೋ ಹಾಗೆ ಆಗಿದೆ, ಎಲ್ಲರೂ ಬರ್ತಾರೆ- ಯಶ್

ಸೌತ್ ವರ್ಸಸ್ ಬಾಲಿವುಡ್ ಎನ್ನುವ ಮಾತು ಕೇಳಿಬರುತ್ತಿದೆ. ಇಬ್ಬರ ನಡುವೆ ಪೈಪೋಟಿ ಏರ್ಪಟಿದೆ. ಸೌತ್ ಸಿನಿಮಾರಂಗ ಬಾಲಿವುಡ್ ಅನ್ನು ಮೀರಿಸಿ ಬೆಳೆಯುತ್ತಿದೆ. ಭಾರತೀಯ ಸಿನಿಮಾರಂಗ ಎಂದರೆ ಕೇವಲ ಬಾಲಿವುಡ್ ಎಂದು ಮಾತ್ರ ಹೇಳಲಾಗುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಸೌತ್ ಸಿನಿಮಾರಂಗ ಕೂಡ ಇದೇ ಎನ್ನುವುದನ್ನು ಸಾಭೀತು ಮಾಡಲಾಗಿದೆ. ಕೆಜಿಎಫ್ 2, ಆರ್ ಆರ್ ಆರ್, ಪುಷ್ಪ, ವಿಕ್ರಮ್ ಸಿನಿಮಾಗಳು  ದೇಶ-ವಿದೇಶಗಳಲ್ಲಿ ಸದ್ದು ಮಾಡಿದೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಸೌತ್ ಹಾಗೂ ಕಡೆಗಣಿಸಲ್ಪಟ್ಟಿದ್ದ ಕನ್ನಡ ಸಿನಿಮಾರಂಗವನ್ನು ಗುರುತಿಸಲಾಗುತ್ತಿದೆ. ಇದು ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ. 

ಸೈಮಾ 2022 ಬಗ್ಗೆ ಯಶ್ ಮಾತು 

ಇನ್ನು ಸೈಮಾ ಸಮಾರಂಭದ ಬಗ್ಗೆ ಮಾತನಾಡಿದ್ದ ಯಶ್, 'ಯಾವಾಗಲು ನಾವು ಹೊರಗಡೆ ಹೋಗ್ತಾ ಇದ್ವಿ, ಇಲ್ಲಿಗೆ ಬರಬೇಕು ಎನ್ನುವ ಆಸೆ ಇತ್ತು. ಇವತ್ತು ಸೈಮಾ ಅವರು ಬಂದಿದ್ದಾರೆ. ನಮ್ಮ ಪ್ರಕಾರ ಎಲ್ಲರೂ ಬರ್ತಾರೆ. ಪ್ರತಿ ಅವಾರ್ಡ್ ಕಾರ್ಯಕ್ರಮ ಕರ್ನಾಟಕಕ್ಕೆ ಬರೋ ಹಾಗೆ ಆಗಿದೆ. ಎಲ್ಲರೂ ಬರ್ತಾರೆ' ಎಂದು ಹೇಳಿದರು.  

SIIMA; ಬಾನದಾರಿಯಲ್ಲಿ ಸೂರ್ಯ ಜಾರಿ ಹೋದಾ.., ತಮ್ಮನಿಗೆ ಶಿವಣ್ಣನ ಭಾವುಕ ಹಾಡು, ಕಣ್ಣೀರಿಟ್ಟ ರಾಜ್ ಕುಟುಂಬ

ಇನ್ನು ಈ ಬಾರಿಯ ಸೈಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಾಕಿಂಗ್ ಸ್ಟಾರ್,  'ಅಪ್ಪು ಸರ್ ಗೆ ನಾವು ಇಡೀ ಕರ್ನಾಟಕ ಬೇರ ಬೇರೆ ರೀತಿ ಗೌರವ ಸಲ್ಲಿಸಿದ್ದೇವೆ. ಅವರ ನೆನಪನಲ್ಲಿ ಸೈಮಾ ಮಾಡುತ್ತಿರುದು ತುಂಬಾ ಖುಷಿ ಇದೆ. ಆದರೆ ಇದಕ್ಕಿಂತ ಅವರು ಇದ್ದಿದ್ದರೆ ಆ ಖುಷಿ ಇನ್ನು ಜಾಸ್ತಿ ಇರುತ್ತಿತ್ತು' ಎಂದು ಹೇಳಿದರು.  

Follow Us:
Download App:
  • android
  • ios