ನಿರ್ದೇಶಕರು ಕಟ್ ಹೇಳಿದ್ರೂ ಕಿಸ್ ಮಾಡುತ್ತಲೇ ಇದ್ವಿ; ರಾಮ-ಲೀಲಾ ದೃಶ್ಯದ ಬಗ್ಗೆ ರಣ್ವೀರ್ ಮಾತು

ನಟ ರಣ್ವೀರ್ ಸಿಂಗ್ ರಾಮ್ ಲೀಲಾ ಸಿನಿಮಾ ಕಿಸ್ಸಿಂಗ್ ದೃಶ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಲಿಪ್ ಲಾಕ್ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು ಕಟ್ ಹೇಳಿದ್ರು ದೀಪಿಕಾ ಜೊತೆ ಚುಂಬನ ಮುಂದುವರೆಸಿದ್ದೆ ಅಷ್ಟರ ಮಟ್ಟಿಗೆ ಪಾತ್ರದಲ್ಲಿ ಮುಳುಗಿ ಹೋಗಿದ್ದೆ ಎಂದು ರಣ್ವೀರ್ ಸಿಂಗ್ ಹೇಳಿದ್ದಾರೆ.

Ranveer Singh reveals he could not stop kissing Deepika Padukone during Ramleela shoot sgk

ಬಾಲಿವುಡ್‌ನ ಸೂಪರ್ ಹಿಟ್ ಜೋಡಿಗಳಲ್ಲಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಕೂಡ ಒಂದು. ಆನ್ ಸ್ಕ್ರೀನ್ ಮತ್ತು ಆಫ್ ದಿ ಸ್ಕ್ರೀನ್ ಎರಡರಲ್ಲೂ ಈ ಜೋಡಿ ಮಾದರಿ. ದೀಪಿಕಾ ಮತ್ತು ರಣ್ವೀರ್ ಸಿಂಗ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ಸಿನಿಮಾ ರಾಮ್ ಲೀಲಾ. ಈ ಸಿನಿಮಾದಲ್ಲಿ ಇಬ್ಬರು ಒಬ್ಬರಿಗೊಬ್ಬರು ಪರಿಚಿತರಾದರು. ಈ ಚಿತ್ರೀಕರಣವೇಳೆ ಪ್ರಾರಂಭವಾದ ಪ್ರೀತಿ ಬಳಿಕ ಹಸೆಮಣೆ ಏರುವಂತೆ ಮಾಡಿತು. 2013ರಲ್ಲಿ ಬಿಡುಗಡೆಯಾದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ದೀಪಿಕಾ ಮತ್ತು ರಣ್ವೀರ್ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಸಿನಿಮಾದಲ್ಲಿ ರಣ್ವೀರ್ ಮತ್ತು ದೀಪಿಕಾ ಇಬ್ಬರೂ ಅತೀ ಹೆಚ್ಚು ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಇಬ್ಬರ ರೊಮ್ಯಾಂಟಿಕ್ ದೃಶ್ಯಗಳು ನೋಡುಗರನ್ನು ಬೆರಗಾಗಿಸಿತ್ತು. ಇತ್ತೀಚಿಗಷ್ಟೆ ನಟ ರಣ್ವೀರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಲಿಪ್ ಲಾಕ್ ದೃಶ್ಯದ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು ಕಟ್ ಹೇಳಿದ್ರು ದೀಪಿಕಾ ಜೊತೆ ಚುಂಬನ ಮುಂದುವರೆಸಿದ್ದೆ ಅಷ್ಟರ ಮಟ್ಟಿಗೆ ಪಾತ್ರದಲ್ಲಿ ಮುಳುಗಿ ಹೋಗಿದ್ದೆ ಎಂದು ರಣ್ವೀರ್ ಸಿಂಗ್ ಹೇಳಿದ್ದಾರೆ.

'ಒಂದು ದೃಶ್ಯದಲ್ಲಿ ಇಟ್ಟಿಗೆಯೊಂದು ಕಿಟಕಿಯ ಗ್ಲಾಸ್ ಮುರಿದುಕೊಂಡು ನಮ್ಮ ಪಕ್ಕದಲ್ಲಿ ಬಂದು ಬಿದ್ದರೂ ತಮ್ಮ ಆತ್ಮೀಯ ಕ್ಷಣವನ್ನು ಮುರಿಯಲು ಸಾಧ್ಯವಾಗಿಲ್ಲ' ಎಂದು ಹೇಳಿದ್ದಾರೆ. 'ಈ ಸಿನಿಮಾದಲ್ಲಿ ಒಂದು ಲಿಪ್ ಲಾಕ್ ದೃಶ್ಯ ಇಂದಿಗೂ ನೆನಪಾಗುತ್ತಿರುತ್ತದೆ' ಎಂದು ಹೇಳಿದರು. ಇತ್ತೀಚಿಗೆ ನಿರೂಪಕಿ ಅನುಪಮಾ ಚೋಪ್ರಾ ಜೊತೆ ಸಂದರ್ಶನದಲ್ಲಿ ಮಾತನಾಡಿದ ನಟ ರಣ್ವೀರ್ ಸಿಂಗ್, ಚುಂಬನ ದೃಶ್ಯದಲ್ಲಿ ನಾನು ದೀಪಿಕಾ ಕಳೆದು ಹೋಗಿದ್ವಿ ಎಂದು ಹೇಳಿದ್ದಾರೆ.

'ಅನೇಕ ಬಾರಿ ಕಟ್ ಎಂದು ಹೇಳಿದರು. ಏನಾಗುತ್ತಿದೆ ಎಂದು ತಕ್ಷಣ ತಿಳಿಯಲು ಸಾಧ್ಯವಾಗಿಲ್ಲ. ಆ ಕ್ಷಣದಲ್ಲಿ ಕಟ್ ಎಂದು ಹೇಳಿದಾಗ ಡಿಸ್ಟರ್ಬ್ ಆಗುತ್ತೀರಿ ಎಂದರು. ನೀವು ನಿಜಕ್ಕೂ ಕಳೆದು ಹೋಗುತ್ತೀರಿ. ರಾಮ್ ಮತ್ತು ಲೀಲಾ ನಡುವಿನ ಒಂದು ಚುಂಬನದ ದೃಶ್ಯ ನನಗೆ ನೆನಪಿದೆ. ಇಬ್ಬರೂ ಭಾವೋದ್ರಿಕ್ತ ಲಿಪ್ ಲಾಕ್ ನಲ್ಲಿ ಒಬ್ಬರಿಗೊಬ್ಬರು ಅಕ್ಷರಶಃ ಕಳೆದುಹೋಗಿದ್ದರು. ನಿರ್ದೇಶಕ ಬನ್ಸಾಲಿ ಅವರ ಸಿನಿಮಾದಲ್ಲಿ ಎಲ್ಲವೂ ನಿಜವಾಗಿ ನಡೆಯುತ್ತದೆ. ನಾವು (ರಣ್ವೀರ್-ದೀಪಿಕಾ) ಬೆಡ್ ಮೇಲೆ ಲಿಪ್ ಲಾಕ್ ದೃಶ್ಯದಲ್ಲಿದ್ದೆವು. ಈ ದೃಶ್ಯದ ವೇಳೆ ಕಿಟಕಿಯ ಮೂಲಕ ಇಟ್ಟಿಗೆಯನ್ನು ಎಸೆಯಬೇಕು ಆಗ ಲಿಪ್ ಲಾಕ್ ಗೆ ತೊಂದರೆ ಆಗುತ್ತದೆ. ಕಿಟಕಿಯ ಗಾಜು ಎಲ್ಲಾ ಪುಡಿ ಪುಡಿ ಆಗುತ್ತದೆ. ನಾನು ಮತ್ತು ದೀಪಿಕಾ ಕಿಸ್ ಮಾಡುತ್ತಿದ್ದೆವು. ಇಟ್ಟಿಗೆ ಬಂದು ಬಿದ್ದರು ನಾವು ಚುಂಬನ ದೃಶ್ಯದಲ್ಲಿ ಕಳೆದುಹೋಗಿದ್ವಿ. ಆಗ ಬನ್ಸಾಲಿಗೆ ಗೊತ್ತಾಯಿತು ಕೆಲಮೊಮ್ಮೆ ಕಳೆದುಹೊಗುತ್ತೀರಿ ಎಂದರು' ಎಂದು ಲಿಪ್ ಲಾಕ್ ದೃಶ್ಯದ ಬಗ್ಗೆ ವಿವರಿಸಿದರು.

ಸಂಜಯ್ ಲೀಲಾ ಬನ್ಸಾಲಿ ಸಾರಥ್ಯದಲ್ಲಿ ಬಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ದೀಪಿಕಾ ಮತ್ತು ರಣ್ವೀರ್ ಸಿಂಗ್ ಜೋಡಿಗೆ ಅಭಿಮಾನಿಗಳು ಮನಸೋತಿದ್ದರು. ಸಿನಿಮಾದ ಹಾಡುಗಳು ಸಹ ಅಷ್ಟೆ ಅದ್ಭುತವಾಗಿದ್ದವು. ಈ ಸಿನಿಮಾ ಬಳಿಕ ರಣ್ವೀರ್ ಮತ್ತು ದೀಪಿಕಾ ಮತ್ತೆ ಬನ್ಸಾಲಿ ಅವರ ಬಾಜಿರಾವ್ ಮಸ್ತಾನಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಪದ್ಮಾವತ್ ಸಿನಿಮಾದಲ್ಲೂ ಮಿಂಚಿದರು. ಈ ಎಲ್ಲಾ ಸಿನಿಮಾಗಳಿಗೂ ಬನ್ಸಾಲಿ ಆಕ್ಷನ್ ಕಟ್ ಹೇಳಿದ್ದು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿವೆ.

ಇನ್ನು ರಣ್ವೀರ್ ಸಿಂಗ್ ಸಿನಿಮಾಗಳ ಬಗ್ಗೆ ಹೇಳುವುದಾರೆ ಸದ್ಯ ಜಯೇಶ್ ಭಾಯ್ ಜೋರ್ದಾರ್ ಚಿತ್ರದಲ್ಲಿ ನಟಿಸಿದ್ದು ಈ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಯಶ್ ರಾಜ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದ್ದು ಈ ಸಿನಿಮಾದಲ್ಲಿ ಅರ್ಜುನ್ ರೆಡ್ಡಿ ಖ್ಯಾತಿಯ ನಟಿ ಶಾಲಿನಿ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಇದು ಶಾಲಿನಿ ಅವರಿಗೆ ಮೊದಲ ಬಾಲಿವುಡ್ ಸಿನಿಮಾವಾಗಿದೆ. ಮೇ 13ರಂದು ಸಿನಿಮಾ ತೆರೆಗೆ ಬರುತ್ತಿದೆ.

Latest Videos
Follow Us:
Download App:
  • android
  • ios