'ತಲೈವಿ' ಚಿತ್ರದಲ್ಲಿ ಕಂಗನಾ ರಾಣಾವತ್ ನಟಿಸುತ್ತಿದ್ದು ಫಸ್ಟ್ ಲುಕ್ ರಿವೀಲ್ ಆಗಿದೆ. 'ತಲೈವಿ' ಯಾಗಿ ಕಂಗನಾ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂಬ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಕಂಗನಾ ಮೇಕಪ್,  ಹೇರ್‌ಸ್ಟೈಲ್, ಲುಕ್ ಯಾವುದೂ ಮ್ಯಾಚ್ ಆಗುವಂತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.  ಕಂಗನಾ ಲುಕ್ ಟ್ರೋಲ್ ಆಗುತ್ತಿದೆ. ಟ್ರೋಲಿಗರಿಗೆ ಕಂಗನಾ ಸಹೋದರಿ ರಂಗೋಲಿ ಚಂದೇಲ್ ತಿರುಗೇಟು ಕೊಟ್ಟಿದ್ದಾರೆ.

 

'ತಲೈವಿ' ಚಿತ್ರಕ್ಕಾಗಿ ಕಂಗನಾ ಭರತನಾಟ್ಯ ಕಲಿಯುತ್ತಿರುವ ವಿಡಿಯೋ ಶೇರ್ ಮಾಡಿ, 'ಕಲಾವಿದರು ಅಂದರೆ ಫೇಕ್ ಅಂದುಕೊಳ್ಳಬೇಡಿ.  ಒಂದು ಚಿತ್ರಕ್ಕಾಗಿ ಅವರ ತಯಾರಿ ಹೇಗಿರುತ್ತೆ ಗೊತ್ತಾ? ಒಂದು ಪರ್ಫೆಕ್ಟ್ ಸ್ಟೆಪ್‌ಗಾಗಿ ಗಂಟೆಗಟ್ಟಲೇ ಅಭ್ಯಾಸ ಮಾಡುತ್ತಾರೆ.  ಇವೆಲ್ಲವೂ ಅವರ ಕಲೆಗೆ ಹಿಡಿದ ಕೈಗನ್ನಡಿ' ಎಂದು ರಂಗೋಲಿ ಹೇಳಿದ್ದಾರೆ. ಈ ಪಾತ್ರಕ್ಕಾಗಿ ಕಂಗನಾ ತಮಿಳು ಕಲಿಯುತ್ತಿದ್ದಾರಂತೆ. 

ಇನ್ನೂ ಇಂಟರೆಸ್ಟಿಂಗ್ ವಿಚಾರ ಅಂದ್ರೆ ಪಾತ್ರಕ್ಕಾಗಿ ಕಂಗನಾ 6 ಕೆಜಿ ದಪ್ಪವಾಗಬೇಕಿತ್ತು. ದಿಢೀರನೇ ದಪ್ಪವಾಗುವುದು ಸಾಧ್ಯವಿಲ್ಲ. ಹಾಗಾಗಿ ದಿನಾ ಹಾರ್ಮೋನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರಂತೆ. ಅಂದರೆ ಪಾತ್ರಕ್ಕೆ ನ್ಯಾಯ ಒದಗಿಸಲು ಕಂಗನಾ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಏನೇ ಮಾಡಿದ್ರೆ ಲುಕ್ ಮ್ಯಾಚ್ ಆಗ್ತಾ ಇಲ್ಲ ಅನ್ನೋದು ಪ್ರೇಕ್ಷಕರ ಅಭಿಪ್ರಾಯ.